ಬೆಂಗಳೂರು : ರಾಜ್ಯಸಭೆ ವಿಧಾನ ಪರಿಷತ್ ಚುನಾವಣೆ ಹತ್ತಿರವಾಗುತ್ತಿದೆ. ಆದರೆ ಬಿಜೆಪಿ ರಾಜ್ಯಾಧ್ಯಕ್ಷರು ಮಾತ್ರ ಟಿಕೆಟ್ ಆಕಾಂಕ್ಷಿಗಳ ಕೈಗೆ ಸಿಗದೆ ಮಂಗಳೂರು ಸೇರಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ವಿರುದ್ಧ ಕೆಲ ಕಾರ್ಯಕರ್ತರು, ಶಾಸಕರು, ಪಕ್ಷದ ಪ್ರಮುಖರು ಅಸಮಾಧಾನ ಹೊರ ಹಾಕುತ್ತಲೇ ಬಂದಿದ್ದಾರೆ. ಕಾರಣ ನಳಿನ್ ಕುಮಾರ್ ಕಟೀಲ್ ರಾಜ್ಯಾದ್ಯಕ್ಷ ಆದ ಕೆಲ ತಿಂಗಳುಗಳ ಮಾತ್ರ ಜಿಲ್ಲಾ ಪ್ರವಾಸ ಮಾಡಿದ್ದರೂ.
ಇದಾದ ಬಳಿಕ ಮಂಗಳೂರು ಸೇರಿದ್ದಾರೆ. ಪಕ್ಷದ ಹೈಕಮಾಂಡ್ ಸೂಚನೆ ನೀಡಿದರೇ ಅಷ್ಟೇ ಅವರು ಬೆಂಗಳೂರಿನಲ್ಲಿ ಬಿಜೆಪಿ ಕೇಂದ್ರ ಕಚೇರಿಗೆ ಬರುತ್ತಾರೆ. ಬಂದು ಒಂದು ರಾತ್ರಿ ಇದ್ದು ಮತ್ತೆ ಮಂಗಳೂರಿಗೆ ತೆರಳುತ್ತಾರೆ ಎಂಬ ಆರೋಪಗಳು ನಳಿನ್ ಕುಮಾರ್ ಕಟೀಲ್ ವಿರುದ್ದ ಕೇಳಿ ಬಂದಿದ್ದವು.
ಈ ಆರೋಪದ ಘಾಯ ಮಾಯುವ ಮುನ್ನವೇ ಅಂತದೊಂದು ಆರೋಪ ನಳಿನ್ ಕುಮಾರ್ ಕಟೀಲ್ ವಿರುದ್ದ ಕೇಳಿ ಬಂದಿದೆ. ರಾಜ್ಯಸಭೆ ಮತ್ತು ವಿಧಾನ ಪರಿಷತ್ ಗೆ ಚುನಾವಣಯ ಮುಹೂರ್ತ ಫಿಕ್ಸ್ ಅಗಿದೆ. ಆದ್ದರಿಂದ ಬಿಜೆಪಿ ಕೆಲ ಟಿಕೆಟ್ ಆಕಾಂಕ್ಷಿಗಳು ಪ್ರತಿದಿನ ಬಿಜೆಪಿ ಕೇಂದ್ರ ಕಚೇರಿಗೆ ಭೇಟಿ ಕೊಡುತ್ತಿದ್ದಾರೆ.
ಆದರೆ ಕಚೇರಿಯಲ್ಲಿ ಬಿಜೆಪಿ ರಾಜ್ಯಾದ್ಯಕ್ಷ ನಳಿನ್ ಕುಮಾರ್ ಕಟೀಲ್ ಇರುವುದಿಲ್ಲ. ಇದರಿಂದಾಗಿ ಟಿಕೆಟ್ ಆಕಾಂಕ್ಷಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೋವಿಡ್ 19 ನಿಯಂತ್ರಣ ಕಾರ್ಯದಲ್ಲಿ ಬ್ಯೂಸಿ ಆಗಿದ್ದಾರೆ. ಈ ಎಲ್ಲಾ ಕಾರಣದಿಂದಾಗಿ ಬಿಜೆಪಿಯ ವಲಯದಲ್ಲಿ ಗೊಂದಲ ಸೃಷ್ಟಿಯಾಗಿದೆ.
ಒಂದೆಡೆ ವಿಧಾನ ಪರಿಷತ್ ಪ್ರವೇಶ ಮಾಡಲು ಬಿಜೆಪಿಯಿಂದ ತಾರಾ, ಶೃತಿ, ಮಾಳವಿಕಾ ಅವಿನಾಶ್ , ಭಾರತಿ ಶೆಟ್ಟಿ ಸಾಕಷ್ಟು ಹರಸಾಹಸ ಪಡುತ್ತಿದ್ದಾರೆ. ಇನ್ನೊಂದೆಡೆ ಮೈತ್ರಿ ಸರ್ಕಾರವನ್ನು ಪತನಗೊಳಿಸುವ ಕಾರ್ಯದಲ್ಲಿ ಭಾಗಿಯಾಗಿದ್ದ ಎಂ.ಟಿ.ಬಿ ನಾಗರಾಜ್ ಮತ್ತು ಹೆಚ್.ವಿಶ್ವನಾಥ್, ಮಾಜಿ ಸಚಿವ ಆರ್. ಶಂಕರ್ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಅಲ್ಲದೆ ಇವರ ಪರವಾಗಿ ಸಚಿವ ಎಸ್.ಟಿ.ಸೋಮಶೇಖರ್ ಬ್ಯಾಟಿಂಗ್ ಮಾಡಿದ್ದಾರೆ.