BJP | ಕಾಂಗ್ರೆಸ್‌ ಪಕ್ಷದಲ್ಲಿರುವ ಯುವ ನಾಯಕರು ಯಾರು?

1 min read
Karnataka BJP | Fight Against the Agnipath Plan Congress crafted tool kit saaksha tv

Karnataka BJP | Fight Against the Agnipath Plan Congress crafted tool kit saaksha tv

BJP | ಕಾಂಗ್ರೆಸ್‌ ಪಕ್ಷದಲ್ಲಿರುವ ಯುವ ನಾಯಕರು ಯಾರು?

ಬೆಂಗಳೂರು : ಕಾಂಗ್ರೆಸ್‌ ಪಕ್ಷದಲ್ಲಿರುವ ಯುವ ನಾಯಕರು ಯಾರು ಎಂದು ರಾಜ್ಯ ಬಿಜೆಪಿ ಘಟಕ ವ್ಯಂಗ್ಯವಾಡಿದೆ.

ಕಾಂಗ್ರೆಸ್ ವಿರುದ್ಧ ಟ್ವಿಟ್ಟರ್ ನಲ್ಲಿ ಕಿಡಿಕಾರಿರುವ ಬಿಜೆಪಿ, ಕಾಂಗ್ರೆಸ್ ಚಿಂತನಾ ಶಿಬಿರದಲ್ಲಿ ಹಿರಿಯ ನಾಯಕರಿಗೆ ಗೇಟ್ ಪಾಸ್ ನೀಡುವ ಮುನ್ಸೂಚನೆ ನೀಡಲಾಗಿದೆ. ಕಾಂಗ್ರೆಸ್‌ ಪಕ್ಷದಲ್ಲಿರುವ ಯುವ ನಾಯಕರು ಯಾರು? ಕಾಂಗ್ರೆಸ್ ಪಕ್ಷದಲ್ಲಿ ಯೌವನ ನಿರ್ಧಾರವಾಗುವುದು 50 ರ ನಂತರವೇ?

ಕಾಂಗ್ರೆಸ್ ಚಿಂತನಾ ಶಿಬಿರದಲ್ಲೇನೋ ವಯೋನಿವೃತ್ತಿಯ ಪ್ರಸ್ತಾಪವಾಗಿದೆ. ಆದರೆ ಯಾವಾಗ? 70 ಕಳೆದ ಮೇಲೂ ಅಧಿಕಾರ ಅನುಭವಿಸಲು ತಂತ್ರಗಾರಿಕೆ ನಡೆಸುವ ಕಾಂಗ್ರೆಸ್ “ಯಯಾತಿ”ಗಳ ಮೋಹ ಕಳಚುವುದೇ ಎಂದು ಪ್ರಶ್ನೆಗಳ ಸುರಿಮಳೆಗೈದಿದೆ.

ರಾಜ್ಯ ವಿಧಾನಸಭೆಯಲ್ಲಿ ಕಾಂಗ್ರೆಸ್ ಸಂಖ್ಯಾಬಲ ಈಗ 60+ ಚಿಂತನಾ ಶಿಬಿರದಲ್ಲಿ 50% ರಷ್ಟು ಕ್ಷೇತ್ರಗಳನ್ನು 50 ವರ್ಷದೊಳಗಿನವರಿಗೆ ನೀಡಬೇಕೆಂದು ಕಾಂಗ್ರೆಸ್‌ ಸಂಕಲ್ಪ ಮಾಡಿದೆ. ಈ ನಿಯಮವನ್ನು ರಾಜ್ಯದಲ್ಲಿ ಯಥಾವತ್ತಾಗಿ ಜಾರಿಗೆ ತಂದಲ್ಲಿ ಕಾಂಗ್ರೆಸ್‌ 60+ ನಿಂದ 30+ ಗೆ ಕ್ಕೆ ಇಳಿಯುವುದು ನಿಶ್ಚಿತ!

ಒಂದು ಮನೆಯಿಂದ ಒಬ್ಬರಿಗೆ ಟಿಕೆಟ್ ಎಂಬುದು ಕಾಂಗ್ರೆಸ್‌ ಪಕ್ಷದ ಹೊಸ ನಾಟಕ. ನಕಲಿ ಗಾಂಧಿ ಕುಟುಂಬಿಕರಿಗೆ ಮತ್ತು ಅವರ ಪಾದ ಪೂಜಕರಿಗೆ ಅನ್ವಯವಾಗುವುದಿಲ್ಲ ಎಂಬ ಷರತ್ತು ಅಳವಡಿಸಿರುವುದು ಅವರ ಬೂಟಾಟಿಕೆಗೆ ಸಾಕ್ಷಿ. 70 ಮೇಲ್ಪಟ್ಟವರಿಗೆ ಟಿಕೆಟ್ ನೀಡದ ಹೊಸ ನಿಯಮವೂ ಇವರಾರಿಗೂ ಅನ್ವಯವಾಗದು ಎಂದು ಬಿಜೆಪಿ ಕುಟುಕಿದೆ. BJP questions Who are the young leaders of the Congress Party

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd