ರಮೇಶ್ ಕುಮಾರ್ ಅವರೇ, ತಿಪ್ಪೇ ಸಾರಿಸುವ ಕ್ಷಮೆ ನಿಮ್ಮಂಥವರಿಗೆ ಭೂಷಣವೇ? BJP saakshah tv
ಬೆಂಗಳೂರು : ಅತ್ಯಾಚಾರದ ಬಗ್ಗೆ ರಮೇಶ್ ಕುಮಾರ್ ಅವರು ಕೀಳಾಗಿ ಮಾತನಾಡುವಾಗ ಮಹಿಳಾ ಸದಸ್ಯರೂ ಉಪಸ್ಥಿತರಿದ್ದರು. ಉಚಿತ – ಅನುಚಿತ ಪ್ರಜ್ಞೆ ಇಲ್ಲದೇ ಆಡುವ ಮಾತುಗಳು ಕ್ಷಮೆಗೆ ಅರ್ಹವೇ? ರಮೇಶ್ ಕುಮಾರ್ ಅವರೇ, ತಿಪ್ಪೇ ಸಾರಿಸುವ ಕ್ಷಮೆ ನಿಮ್ಮಂಥವರಿಗೆ ಭೂಷಣವೇ ಎಂದು ರಾಜ್ಯ ಬಿಜೆಪಿ ಪ್ರಶ್ನಿಸಿದೆ.
ನಿನ್ನೆ ಸದನದಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್, ಅತ್ಯಾಚಾರದ ಬಗ್ಗೆ ಆಕ್ಷೇಪರ್ಹ ಹೇಳಿಕೆ ನೀಡಿದ್ದರು. ಈ ಬಗ್ಗೆ ಟ್ವಿಟ್ಟರ್ ನಲ್ಲಿ ಬಿಜೆಪಿ ಕಿಡಿಕಾರಿದೆ.
ಮಾನ್ಯ ರಮೇಶ್ ಕುಮಾರ್ ಅವರೇ, ಶಾಸನಸಭೆಯಲ್ಲಿ ಎಂತಹ ಮೇಲ್ಪಂಕ್ತಿ ಹಾಕಿ ಬಿಟ್ಟಿರಿ! ಮಹಿಳೆಯರ ಗೌರವದ ಬಗ್ಗೆ ಸದನದಲ್ಲಿ ಈ ರೀತಿ ಮಾತನಾಡಿದ್ದು ಸೂಕ್ತವೇ? ಕಿರಿಯರಿಗೆ ಮೇಲ್ಪಂಕ್ತಿ ಹಾಕಬೇಕಿದ್ದ ನೀವು ಇಂಥ ಕೀಳು ಅಭಿರುಚಿಯ ಮಾತನಾಡಿದ್ದು ಎಷ್ಟು ಸರಿ ಎಂದು ಬಿಜೆಪಿ ಪ್ರಶ್ನಿಸಿದೆ.
ಮಾತು ಆಡಿದರೆ ಹೋಯ್ತು, ಮುತ್ತು ಒಡೆದರೆ ಹೋಯ್ತು ಎಂಬ ಆಡುಮಾತಿನ ಅರ್ಥವನ್ನು ರಮೇಶ್ ಕುಮಾರ್ ಅವರಿಗೆ ಹೇಳಿ ಕೊಡಬೇಕಿಲ್ಲ. ಮಹಿಳೆಯರ ಬಗ್ಗೆ ಸಂವೇದನಾ ರಹಿತವಾಗಿ ಆಡಿದ ಮಾತುಗಳು ಕ್ಷಮೆಗೂ ಅರ್ಹವಲ್ಲ. ನಿಮ್ಮ ವಿದ್ವತ್ ಕೇವಲ ಪೊಳ್ಳು ಭಾಷಣಕ್ಕೆ ಸೀಮಿತವಾದಂತಿದೆ.
ಮಹಿಳೆಯರ ಗೌರವದ ಬಗ್ಗೆ ಕಾಂಗ್ರೆಸ್ ಹಿರಿಯ ನಾಯಕ ರಮೇಶ್ ಕುಮಾರ್ ಅವರು ತೀರಾ ಕೆಳಮಟ್ಟದಲ್ಲಿ ಮಾತನಾಡಿದ್ದಾರೆ. ಇದು ಮಹಿಳೆಯರ ಬಗ್ಗೆ ಕಾಂಗ್ರೆಸ್ ಹೊಂದಿರುವ ಒಳಮನಸ್ಸಿನ ಅಭಿವ್ಯಕ್ತಿ. ರಮೇಶ್ ಕುಮಾರ್ ಅವರು ಅದಕ್ಕೊಂದು ದೃಷ್ಟಾಂತ ಮಾತ್ರ. ಮಹಿಳೆಯರ ಬಗ್ಗೆ ಕಾಂಗ್ರೆಸ್ಸಿಗರ ದೃಷ್ಟಿಕೋನವೇ ಇಷ್ಟು.
ಅತ್ಯಾಚಾರದ ಬಗ್ಗೆ ರಮೇಶ್ ಕುಮಾರ್ ಅವರು ಕೀಳಾಗಿ ಮಾತನಾಡುವಾಗ ಮಹಿಳಾ ಸದಸ್ಯರೂ ಉಪಸ್ಥಿತರಿದ್ದರು. ಉಚಿತ – ಅನುಚಿತ ಪ್ರಜ್ಞೆ ಇಲ್ಲದೇ ಆಡುವ ಮಾತುಗಳು ಕ್ಷಮೆಗೆ ಅರ್ಹವೇ? ರಮೇಶ್ ಕುಮಾರ್ ಅವರೇ, ತಿಪ್ಪೇ ಸಾರಿಸುವ ಕ್ಷಮೆ ನಿಮ್ಮಂಥವರಿಗೆ ಭೂಷಣವೇ ಎಂದು ಬಿಜೆಪಿ ಪ್ರಶ್ನಿಸಿದೆ.