ಸತ್ತವರ ಹೆಸರಿನಲ್ಲಿ ರಾಜಕಾರಣ ಮಾಡಲು ನಾಚಿಕೆಯಾಗುವುದಿಲ್ಲವೇ : ಕಾಂಗ್ರೆಸ್ ವಿರುದ್ಧ ಬಿಜೆಪಿ ಕಿಡಿ Congress saaksha tv
ಬೆಂಗಳೂರು : ಕೋವಿಡ್ ನಿಯಂತ್ರಣ ಸಂಬಂಧಿತವಾಗಿ ಸರ್ಕಾರದ ಎಲ್ಲಾ ಕ್ರಮಗಳನ್ನು ವಿರೋಧಿಸುತ್ತಾ ಬಂದ ಕಾಂಗ್ರೆಸ್ ಇಂದು ಬೂಟಾಟಿಕೆ ತೋರುತ್ತಿದೆ. ಕೋವಿಡ್ ಪರಿಹಾರ ಕ್ರಮಗಳ ಬಗ್ಗೆ ಅಸಡ್ಡೆ ತೋರಿ, ದುರಿತ ಕಾಲದಲ್ಲಿ ದೇಶದ ಜೊತೆ ನಿಲ್ಲದೆ, ಈಗ ಸತ್ತವರ ಹೆಸರಿನಲ್ಲಿ ರಾಜಕಾರಣ ಮಾಡಲು ನಾಚಿಕೆಯಾಗುವುದಿಲ್ಲವೇ ಎಂದು ಕಾಂಗ್ರೆಸ್ ವಿರುದ್ಧ ಬಿಜೆಪಿ ಕಿಡಿಕಾರಿದೆ.
ಕೊರೊನಾ ವಿಚಾರವಾಗಿ ರಾಜ್ಯ ಕಾಂಗ್ರೆಸ್ ಘಟಕ ಟ್ವಿಟ್ಟರ್ ನಲ್ಲಿ ಅಭಿಯಾನವೊಂದನ್ನ ಆರಂಭಿಸಿ, ಬಿಜೆಪಿಗೆ ಪ್ರಶ್ನೆಗಳನ್ನು ಕೇಳುತ್ತಿದೆ.
ಇದಕ್ಕೆ ಪ್ರತಿಯಾಗಿ ರಾಜ್ಯ ಬಿಜೆಪಿ ಘಟಕ ಟ್ವಿಟ್ಟರ್ ನಲ್ಲಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದೆ.
ಸಾಂಕ್ರಾಮಿಕ ಕಾಯಿಲೆಯಿಂದ ಮೃತಪಟ್ಟವರ ಹೆಸರಿನಲ್ಲಿ ರಾಜಕೀಯ ನಡೆಸುತ್ತಿರುವ ಕಾಂಗ್ರೆಸ್ಸಿಗರೇ, ದೇಶ ವಿಭಜನೆಯ ಸಂದರ್ಭದಲ್ಲಿ ನಡೆದ ಹಿಂದೂಗಳ ಮಾರಣ ಹೋಮದ ಲೆಕ್ಕ ದೇಶದ ಮುಂದಿಡುವಿರಾ?
ಸಾಂಕ್ರಾಮಿಕ ಕಾಯಿಲೆಯಿಂದ ಮೃತಪಟ್ಟವರ ಹೆಸರಿನಲ್ಲಿ ರಾಜಕೀಯ ನಡೆಸುತ್ತಿರುವ ಕಾಂಗ್ರೆಸ್ಸಿಗರೇ, ಕಾಂಗ್ರೆಸ್ ಪ್ರಾಯೋಜಿತ ಸಿಖ್ ಹತ್ಯಾಕಾಂಡದಲ್ಲಿ ನೀವು ನಡೆಸಿದ ನರಮೇಧದ ಲೆಕ್ಕ ಕೊಡುವಿರಾ?
ಕೋವಿಡ್ ಸಾಂಕ್ರಾಮಿದ ಸಾವಿನ ವಿಚಾರದಲ್ಲೂ ರಾಜಕಾರಣ ನಡೆಸುವ ಹೀನ ಮನಸ್ಥಿತಿಗೆ @IಓಅIಟಿಜiಚಿ ಪಕ್ಷ ಇಳಿದಿರುವುದು ದುರಂತ. ಸಾವನ್ನು ವಿಜೃಂಭಿಸುವಾಗಲೂ ಅಂತಃಕರಣ ಪ್ರಶ್ನಿಸುವುದಿಲ್ಲವೇ? ನಕಲಿ ಗಾಂಧಿ ಕುಟುಂಬ ನಿರ್ದೇಶಿತ ನಾಟಕ ಇಷ್ಟು ಕೀಳುಮಟ್ಟಕ್ಕೆ ಇಳಿದಿದೆಯೇ?
ಕೋವಿಡ್ ಸಾಂಕ್ರಾಮಿಕದ ಮೊದಲನೆಯ ಅಲೆಯ ಬಳಿಕ ಮೋದಿ ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ವಿರೋಧಿಸಿದ್ದೇ ಕಾಂಗ್ರೆಸ್. ಲಸಿಕಾ ಅಭಿಯಾನ ನಡೆಸುವ ಪ್ರಧಾನಿ ಕರೆಗೆ ವಿರೋಧ. ಲಸಿಕೆಯ ಫಲಿತಾಂಶದ ಬಗ್ಗೆ ಅನುಮಾನ. ಕೋವಿಡ್ ಮಾರ್ಗಸೂಚಿಗಳ ಉಲ್ಲಂಘನೆಗೆ ಪ್ರೇರೇಪಣೆ. ಕೋವಿಡ್ ಸಮಯದಲ್ಲಿ ಇವೇ ಅಲ್ಲವೇ ನಿಮ್ಮ ಸಾಧನೆ?
ಕೋವಿಡ್ ನಿಯಂತ್ರಣ ಸಂಬಂಧಿತವಾಗಿ ಸರ್ಕಾರದ ಎಲ್ಲಾ ಕ್ರಮಗಳನ್ನು ವಿರೋಧಿಸುತ್ತಾ ಬಂದ ಕಾಂಗ್ರೆಸ್ ಇಂದು ಬೂಟಾಟಿಕೆ ತೋರುತ್ತಿದೆ. ಕೋವಿಡ್ ಪರಿಹಾರ ಕ್ರಮಗಳ ಬಗ್ಗೆ ಅಸಡ್ಡೆ ತೋರಿ, ದುರಿತ ಕಾಲದಲ್ಲಿ ದೇಶದ ಜೊತೆ ನಿಲ್ಲದೆ, ಈಗ ಸತ್ತವರ ಹೆಸರಿನಲ್ಲಿ ರಾಜಕಾರಣ ಮಾಡಲು ನಾಚಿಕೆಯಾಗುವುದಿಲ್ಲವೇ ಎಂದು ಬಿಜೆಪಿ ಕುಟುಕಿದೆ.









