ವಿರಾಜಪೇಟೆ ಪಟ್ಟಣ ಪಂಚಾಯತ್ ಬಿಜೆಪಿ ಮಡಿಲಿಗೆ
ಮಡಿಕೇರಿ : ವಿರಾಜಪೇಟೆ ಪಟ್ಟಣ ಪಂಚಾಯತಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನವೂ ಬಿಜೆಪಿ ಮಡಿಲಿಗೆ ಬಂದಿದೆ.
10 ಮತಗಳಿಂದ ಬಿಜೆಪಿಯ ಟಿ.ಆರ್. ಸುಷ್ಮಿತಾ ಪಂಚಾಯತ್ ಅಧ್ಯಕ್ಷೆಯಾಗಿ ಆಯ್ಕೆಯಾದರೇ ಉಪಾಧ್ಯಕ್ಷ ಸ್ಥಾನಕ್ಕೂ ಬಿಜೆಪಿಯ ಹರ್ಷವರ್ಧನ್ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷ ಚುನಾವಣೆ ವೇಳೆ ಕಾಂಗ್ರೆಸ್ ನ ಅಗಸ್ಟಿನ್ ಮತ್ತು ಹರ್ಷವರ್ಧನ್ ಅವರಿಗೆ 10-10 ಸಮಬಲದ ಮತಗಳು ಬಂದಿದ್ದವು.
ಆಗ ಲಾಟರಿ ಮೂಲಕ ಆಯ್ಕೆಯಲ್ಲಿ ಬಿಜೆಪಿಯ ಹರ್ಷವರ್ಧನ್ ಅವರಿಗೆ ಅದೃಷ್ಠ ಕೈ ಹಿಡಿದಿದ್ದು, ಉಪಾಧ್ಯಕ್ಷರಾಗಿ ಆಯ್ಕೆಯಾದರು. ವಿರಾಜಪೇಟೆಯಲ್ಲಿ ಬಿಜೆಪಿಯ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಮೂಲಕ ಕಮಲ ಪಕ್ಷದ ದಿಗ್ವಿಜಯ ಸಾಧಿಸಿದೆ.
ಬಿಜೆಪಿಯ 8 ಸದಸ್ಯರು, ಸಂಸದರು, ಶಾಸಕರ ಮತಗಳು ಸೇರಿ 10 ಮತಗಳು ಕೇಸರಿ ಪಡೆಗೆ ಲಭಿಸಿವೆ.










