ಸಿದ್ದರಾಮಯ್ಯ ಬೆದರಿದ್ದಾರೆ
ಬೆಂಗಳೂರು : ನಮ್ಮ ಮಾರ್ಗದರ್ಶಕರಾದ ಬಿ.ಎಸ್.ಯಡಿಯೂರಪ್ಪ ಅವರು ಪ್ರಚಾರವನ್ನು ಈಗಷ್ಟೇ ಆರಂಭಿಸಿದ್ದಾರೆ. ಅದಾಗಲೇ ಕಾಂಗ್ರೆಸ್ ಕಕ್ಕಾಬಿಕ್ಕಿಯಾಗಿದೆ, ಸಿದ್ದರಾಮಯ್ಯ ಬೆದರಿದ್ದಾರೆ ಎಂದು ರಾಜ್ಯ ಬಿಜೆಪಿ ಕುಟುಕಿದೆ.
ಸಿದ್ದರಾಮಯ್ಯ ವಿರುದ್ಧ ಸರಣಿ ಟ್ವೀಟ್ ಗಳನ್ನು ಮಾಡಿರುವ ಬಿಜೆಪಿ, ದಶಕಗಳಿಂದ ವಿದೂಷಕನಾಗಿ ದೇಶದ ಜನರನ್ನು “ಅಪ್ರಬುದ್ಧ ಬಾಲಕ” ನಗಿಸುತ್ತಿದ್ದಾನೆ.
ಸಿದ್ದರಾಮಯ್ಯನವರೇ, ಬಟಾಟೆಯಿಂದ ಚಿನ್ನ ತೆಗೆಯುವವ ವಿದೂಷಕನಲ್ಲದೆ ಮತ್ತೇನು ಎಂದು ಪ್ರಶ್ನಿಸಿದೆ.
ಭಯ ಎನ್ನುವುದು ಮೋದಿ ಸರ್ಕಾರಕ್ಕೆ ಇರುತ್ತಿದ್ದರೆ, √ ಆರ್ಟಿಕಲ್ 370 ರದ್ದು √ CAA ಕಾನೂನು √ ರಾಮಮಂದಿರ ನಿರ್ಮಾಣ √ ಟ್ರಿಪಲ್ ತಲಾಕ್ ರದ್ದು √ ಸರ್ಜಿಕಲ್ ಸ್ಟ್ರೈಕ್ ಸಾಧ್ಯವಾಗುತ್ತಿರಲಿಲ್ಲ.
ಸಿದ್ದರಾಮಯ್ಯ ಅವರೇ, ಇವೆಲ್ಲವನ್ನೂ ವಿರೋಧಿಸಿದ ದೇಶದೊಳಗಿನ ದ್ರೋಹಿಗಳಿಂದ ನಮಗೆ ಭಯ ಕಾಡುತ್ತಿರುವುದು ನಿಜ.
https://twitter.com/BJP4Karnataka/status/1580805099114229762?s=20&t=u_NZKhz0v-htHnE3st69Og
ಸಿದ್ದರಾಮಯ್ಯ & ಡಿಕೆಶಿ ನಡುವೆ ಕಂದಕ ಸೃಷ್ಟಿಯಾಗಿದೆ. ಸಿಎಲ್‌ಪಿ ನಾಯಕರಿಗೂ ಹೇಳದೆ ಟಿಕೆಟ್ ಫೈನಲ್ ಮಾಡುತ್ತೇನೆ ಎಂದು ಡಿ.ಕೆ.ಶಿವಕುಮಾರ್ ಅಬ್ಬರಿಸಿದ್ದರು.
ಸಿದ್ದರಾಮಯ್ಯನವರಿಗೆ ಒಮ್ಮೆ ಅವಕಾಶ ನೀಡಿ, ಅವರ ನೇತೃತ್ವದಲ್ಲಿ ಚುನಾವಣೆ ಸೋತಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷರು ಹೇಳಿದ್ದು ಮರೆತು ಹೋಯಿತೇ ಸಿದ್ದರಾಮಯ್ಯ ಎಂದು ಬಿಜೆಪಿ ವ್ಯಂಗ್ಯವಾಡಿದೆ.

ನಮ್ಮ ಮಾರ್ಗದರ್ಶಕರಾದ ಬಿ.ಎಸ್.ಯಡಿಯೂರಪ್ಪ ಅವರು ಪ್ರಚಾರವನ್ನು ಈಗಷ್ಟೇ ಆರಂಭಿಸಿದ್ದಾರೆ.
ಅದಾಗಲೇ ಕಾಂಗ್ರೆಸ್ ಕಕ್ಕಾಬಿಕ್ಕಿಯಾಗಿದೆ, ಸಿದ್ದರಾಮಯ್ಯ ಬೆದರಿದ್ದಾರೆ. ಜನಸ್ಪಂದನೆ ಯಾತ್ರೆಯ ಆರಂಭದಲ್ಲೇ ಹೀಗಾದರೆ, ಮುಂದೆ ಹೇಗೆ ಸಿದ್ದರಾಮಯ್ಯ ಎಂದು ಕುಟುಕಿದೆ.







