ನಾನೇನಾದ್ರೂ ಸಿಎಂ ಆಗಿದ್ರೆ ಬಿಜೆಪಿ 150 ಸೀಟ್ ಗೆಲ್ಲುತ್ತಿತ್ತು : ಯತ್ನಾಳ್
ನಾನು ಸಿಎಂ ಆಗೋದನ್ನ ತಪ್ಪಿಸಿದ್ದೆ ಬಿಎಸ್ ವೈ
ವಿಜಯಪುರ : ನಾನು ಮುಖ್ಯಮಂತ್ರಿಯಾಗುವ ಅವಕಾಶವನ್ನು ತಪ್ಪಿಸಿದ್ದೆ ಬಿ ಎಸ್ ಯಡಿಯೂರಪ್ಪ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಿಸಿದ್ದಾರೆ.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಮುಖ್ಯಮಂತ್ರಿಯಾಗುವ ಅವಕಾಶವನ್ನು ತಪ್ಪಿಸಿದ್ದೆ ಬಿ ಎಸ್ ವೈ.
ಯತ್ನಾಳ್ ಅವರನ್ನು ಸಿಎಂ ಮಾಡಿದರೆ 3 ತಿಂಗಳಲ್ಲಿ ಸರ್ಕಾರವನ್ನೇ ಬೀಳಿಸುತ್ತೇನೆ ಎಂದು ಕೇಂದ್ರ ನಾಯಕರನ್ನು ಬೆದರಿಸಿ ಬೊಮ್ಮಾಯಿ ಅವರನ್ನು ಆಯ್ಕೆ ಮಾಡಿದ್ದಾರೆ. ನಾನೇನಾದ್ರೂ ಸಿಎಂ ಆಗಿದ್ರೆ 150 ಸೀಟ್ ಗೆಲ್ಲುತ್ತಿತ್ತು ಎಂದು ಹೇಳಿದ್ದಾರೆ.
ಇದೇ ವೇಳೆ ಯಡಿಯೂರಪ್ಪ 10 ಸಾವಿರ ಕೋಟಿ ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಆರೋಪಿಸಿ ಯತ್ನಾಳ್, ಒಂದು ವೇಳೆ ಯತ್ನಾಳ್ ಸಿಎಂ ಆದರೆ ಯಡಿಯೂರಪ್ಪ ಅವರ ಅಕ್ರಮ, ಭ್ರಷ್ಟಾಚಾರ ಬಯಲಿಗೆ ಬರುತ್ತೆ.
ಸಿಎಂ ಸಂಭಾವ್ಯರ ಪಟ್ಟಿಯಲ್ಲಿ ನನ್ನೊಬ್ಬನ ಹೆಸರು ಮಾತ್ರ ಇತ್ತು ಹೊರತು ನಿರಾಣಿ, ಬೆಲ್ಲದ್, ಬೊಮ್ಮಾಯಿ ಇವರಾರ ಹೆಸರೂ ಇರಲಿಲ್ಲ.
ಆದರೆ ಯಡಿಯೂರಪ್ಪ ನವರು ಧಮೇರ್ಂದ್ರ ಪ್ರಧಾನ್ ಹಾಗೂ ಇನ್ನಿತರ ಕೇಂದ್ರ ನಾಯಕರನ್ನು ಹೆದರಿಸಿ ನಾನು ಸಿಎಂ ಆಗುವುದನ್ನು ತಪ್ಪಿಸಿದ್ದಾರೆ ಎಂದು ಆರೋಪಿಸಿದರು.