ADVERTISEMENT
Friday, June 13, 2025
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Mumbai Karnataka

Priyank Kharge : ಸಮಸ್ಯೆಗಳ ಬಗ್ಗೆ ಮಾತನಾಡಿದ್ರೆ ಖರ್ಗೆ ಅವರಿಂದ ಮಾನಸಿಕ ಹಿಂಸೆ

Mahesh M Dhandu by Mahesh M Dhandu
June 10, 2022
in Mumbai Karnataka, Newsbeat, ಮುಂಬೈ ಕರ್ನಾಟಕ
Share on FacebookShare on TwitterShare on WhatsappShare on Telegram

Priyank Kharge : ಸಮಸ್ಯೆಗಳ ಬಗ್ಗೆ ಮಾತನಾಡಿದ್ರೆ ಖರ್ಗೆ ಅವರಿಂದ ಮಾನಸಿಕ ಹಿಂಸೆ

ಕಲಬುರಗಿ : ಚಿತ್ತಾಪೂರ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಯಾರಾದ್ರೂ ಚಕಾರ ಎತ್ತಿದವರಿಗೆ ಶಾಸಕ ಪ್ರಿಯಾಂಕ್ ಖರ್ಗೆ ತೊಂದರೆಗಳನ್ನು ನೀಡುತ್ತಿದ್ದಾರೆ. ಸುಖಾಸುಮ್ಮನೆ ಅವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವುದು, ಪೊಲೀಸ್ ಠಾಣೆಗೂ ಮನೆ ಅಲೆದಾಡುವಂತೆ ಮಾಡಿ ಅವರಿಗೆ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದಾರೆ ಎಂದು ಬಿಜೆಪಿ ಯುವ ಮುಖಂಡ ಮಣಿಕಂಠ ರಾಥೋಡ್ ಎಂಬುವವರು ಆರೋಪಿಸಿದ್ದಾರೆ.

Related posts

ಸಿದ್ದರಾಮಯ್ಯ ಔಟ್‌ಗೋಯಿಂಗ್ ಸಿಎಂ, ನಿವೃತ್ತಿಗೆ ಹತ್ತಿರ: ಆರ್. ಅಶೋಕ್ ವಾಗ್ದಾಳಿ

ನನ್ನ ಲೆವೆಲ್ ಅಶೋಕ್ ಮತ್ತು ವಿಜಯೇಂದ್ರ ಮಾತ್ರ – ಚಕ್ರವರ್ತಿ ಸೂಲಿಬೆಲೆ ನನ್ನ ಲೆವೆಲ್ ಅಲ್ಲ : ಶಾಸಕ ಪ್ರದೀಪ್ ಈಶ್ವರ್

June 13, 2025
Auto Draft

ಹಲಸಿನ ಹಣ್ಣಿನ ರಸಂ ರೆಸಿಪಿ

June 13, 2025

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸ ಮಾತನಾಡಿದ ಮಣಿಕಠ ರಾಥೋಡ್, ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಅವರ ವಿರುದ್ಧ ಆರೋಪಗಳ ಸುರಿಮಳೆಗೈದರು.

ಚಿತ್ತಾಪೂರ ಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಕುಡಿಯುವ ನೀರಿನ ಸಮಸ್ಯೆ, ನಿರುದ್ಯೋಗ ಸಮಸ್ಯೆ, ರಸ್ತೆ ಸಮಸ್ಯೆ ಸೇರಿದಂತೆ ನಾನಾ ಸಮಸ್ಯೆಗಳಿವೆ. ಈ ಸ್ಥಳೀಯ ಸಮಸ್ಯೆಗಳ ಬಗ್ಗೆ ಯಾರಾದರೂ ಚಕಾರ ಎತ್ತಿದವರಿಗೆ ಶಾಸಕರು ತೊಂದರೆಯನ್ನುಂಟು ಮಾಡುತ್ತಿದಾರೆ.

ಅದಕ್ಕೆ ಉದಾಹರಣೆ ನಾನು, ಈ ಹಿಂದೆ ಶಾಲಾ ಮಕ್ಕಳು ಕಸ ತುಂಬಿದ ಅಟೋದಲ್ಲಿ ಪ್ರಯಾಣಿಸುತ್ತಿದ್ದಾರೆ. ಮಾಧ್ಯಮಗಳ ವರದಿ ಆಧರಿಸಿ ಸುಮಾರು 50 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಅಕ್ರಮ ಆಸ್ತಿ ಮಾಡಿರುವ ಕುರಿತು ಹೇಳಿಕೆ ನೀಡಿದ್ದೆ.

ಅದಕ್ಕೆ ಅವರು ನನ್ನ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದು, ಕೋಟಿ ರೂಪಾಯಿ ಮಾನ ಹಾನಿ ಪರಿಹಾರ ಕೇಳಿದ್ದಾರೆ. ಹಾಗಾದರೆ, ಸಮಸ್ಯೆಗಳ ಬಗ್ಗೆ ಶಾಸಕರ ಗಮನ ಸೆಳೆದಿದ್ದೇ ತಪ್ಪಾ. ಹಾಗದರೆ ನಮ್ಮ ಊರು ಅಭಿವೃದ್ದಿ ಕಾಣುವುದಾದರೂ ಎಂದು ಇದಕ್ಕೆ ಮಾನ್ಯ ಶಾಸಕರು ಉತ್ತರ ಹೇಳಬೇಕು ಎಂದು ಪ್ರಶ್ನಿಸಿದ್ದಾರೆ.

BJP youth leader Manikanta Rathod slams priyank kharge saaksha tv
BJP youth leader Manikanta Rathod slams priyank kharge saaksha tv

ಹಾಗೆಯೇ ಮಾನ್ಯ ಶಾಸಕರು ಸ್ಥಳೀಯ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳುವ ಬದಲು ಕಾಂಗ್ರೆಸ್ ನ ರಾಷ್ಟ್ರೀಯ ನಾಯಕರಂತೆ ರಾಷ್ಟ್ರೀಯ ವಿಚಾರಗಳ ಬಗ್ಗೆ ಚರ್ಚಿಸುತ್ತಿದ್ದಾರೆ. ಮೊದಲು ನಮಗೆ ಕುಡಿಯುವ ನೀರು, ಉದ್ಯೋಗಾವಕಾಶ ನೀಡಿ, ಸಹಾಯ ಕೇಳಲು ಬಂದವರಿಗೆ ಬಾಯಿಗೆ ಬಂದಂತೆ ನಿಂದಿಸುವ ಬದಲು ಅವರಿಗೆ ಸಹಾಯ ಮಾಡಿ ಮಾನ್ಯ ಶಾಸಕರೇ ಎಂದು ಕಿಡಿಕಾರಿದರು.

ನಿಮ್ಮ ತಂದೆಯವರಾದ ಮಲ್ಲಿಕಾರ್ಜುನ ಖರ್ಗೆ ಅವರು ಚುನಾವಣೆಯಲ್ಲಿ ಸೋಲಲು ತಾವೇ ಕಾರಣಿಕರ್ತರು ಎಂಬ ಮಾತು ಸ್ಥಳೀಯರಲ್ಲಿ ಕೇಳಿಬರುತ್ತಿದೆ. ನ್ಯಾಯಯುತವಾಗಿ ಜನರ ಸಮಸ್ಯೆಗಳಿಗೆ ಸ್ಪಂದಿಸಿ, ಅವರ ಕಷ್ಟಗಳನ್ನು ಪರಿಹಾರ ನೀಡಿ.

ನ್ಯಾಯಕ್ಕೆ ಬೆಲೆ ನೀಡುವವ ನಾನು ಎಂದು ಹೇಳುತ್ತಿರುವ ನೀವು, ಪಿಎಸ್ಐ ಹಗರಣಕ್ಕೆ ಸಂಬಂಧಿಸಿದಂತೆ ಸಿಐಡಿ ಪೊಲೀಸರು ಮೂರು ಬಾರಿ ನೀಡಿರುವ ನೋಟೀಸ್ ಗೆ ನೀವು ಬೆಲೆನೇ ನೀಡಲಿಲ್ಲ, ಇದೇನಾ ನಿಮ್ಮ ನ್ಯಾಯದ ಬೆಲೆ ಎಂದು ಪ್ರಶ್ನಿಸಿದ್ದಾರೆ.

ನಿಮ್ಮ ತಂದೆಯವರಿಗೆ ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಇಡಿಯವರು ನೋಟೀಸ್ ನೀಡಿದ್ದಾರೆ. ಹಾಗದರೆ ನೀವು ನಡೆಸಿದ ಅವ್ಯವಹಾರವಾದರೂ ಎಂತಹ ಗಾತ್ರದ್ದು ಅದನ್ನಾದರೂ ಬಹಿರಂಗಪಡಿಸಿ ಮಾನ್ಯ ಶಾಸಕರೇ. ನಿಮ್ಮ ವಿರುದ್ಧ ಧ್ವನಿ ಎತ್ತಿದ ಜನರ ವಿರುದ್ಧ ನಾನಾ ಸಂಘಟನೆಗಳಿಂದ ಪ್ರತಿಭಟನೆ ನಡೆಸಿ, ಅವರ ವಿರುದ್ಧ ದೂರು ದಾಖಲಿಸುವುದನ್ನು ಬಿಟ್ಟು, ನ್ಯಾಯಯುತವಾಗಿ ಅವರಿಗೆ ಸಿಗಬೇಕಾದ ನ್ಯಾಯ ಕೊಡಿಸಿ, ಸುಖಾಸುಮ್ಮನೆ ನಿಮ್ಮ ವಿರೋಧಿಗಳ ಮೇಲೆ ದೂರು ದಾಖಲಿಸುವುದನ್ನು ಕೈಬಿಡಿ, ಇಲ್ಲವಾದ್ದಲ್ಲಿ ಮುಂಬರುವ ದಿನಗಳಲ್ಲಿ ತಮ್ಮ ವಿರುದ್ಧ ಉಗ್ರ ಹೋರಾಟ ನಡೆಸಲು ತೀರ್ಮಾನಿಸಲಾಗುವುದು ಎಂದು ಮಣಿಕಂಠ ರಾಥೋಡ್ ಎಚ್ಚರಿಕೆ ನೀಡಿದ್ದಾರೆ.

Tags: #Saaksha TVBJPCongresskalburagiPriyank Kharge
ShareTweetSendShare
Join us on:

Related Posts

ಸಿದ್ದರಾಮಯ್ಯ ಔಟ್‌ಗೋಯಿಂಗ್ ಸಿಎಂ, ನಿವೃತ್ತಿಗೆ ಹತ್ತಿರ: ಆರ್. ಅಶೋಕ್ ವಾಗ್ದಾಳಿ

ನನ್ನ ಲೆವೆಲ್ ಅಶೋಕ್ ಮತ್ತು ವಿಜಯೇಂದ್ರ ಮಾತ್ರ – ಚಕ್ರವರ್ತಿ ಸೂಲಿಬೆಲೆ ನನ್ನ ಲೆವೆಲ್ ಅಲ್ಲ : ಶಾಸಕ ಪ್ರದೀಪ್ ಈಶ್ವರ್

by Shwetha
June 13, 2025
0

ನಗರದಲ್ಲಿ ಗೃಹ ಇಲಾಖೆ ನಡೆಸುತ್ತಿರುವ ಗಡಿಪಾರಿನ ತಯಾರಿ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಪ್ರದೀಪ್ ಈಶ್ವರ್, ತನ್ನ ಮಾತುಗಳ ಮೂಲಕ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ನಾಂದಿ...

Auto Draft

ಹಲಸಿನ ಹಣ್ಣಿನ ರಸಂ ರೆಸಿಪಿ

by Shwetha
June 13, 2025
0

ಹಲಸಿನ ಹಣ್ಣನ್ನು ಬಳಸಿ ಮಾಡುವ ಈ ರಸಂ ಸಾಂಪ್ರದಾಯಿಕ ರಸಂಗೆ ಒಂದು ಹೊಸ ರುಚಿಯನ್ನು ನೀಡುತ್ತದೆ. ಇದರ ಸೌಮ್ಯವಾದ ಸಿಹಿ ಮತ್ತು ಹಣ್ಣಿನ ಸುವಾಸನೆ ರಸಂನ ಖಾರ...

Auto Draft

ಎಳನೀರಿನ ಗಂಜಿಯ ಆರೋಗ್ಯ ಪ್ರಯೋಜನಗಳು

by Shwetha
June 13, 2025
0

ಎಳನೀರಿನ ಗಂಜಿ ಅಥವಾ ಎಳನೀರಿನ ತಿರುಳು ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಎಳನೀರು ಕುಡಿದ ನಂತರ, ಅದರೊಳಗಿನ ಗಂಜಿಯನ್ನು ಬಿಸಾಡದೆ ಸೇವಿಸುವುದು ಒಳ್ಳೆಯದು. ಇದು ನಮ್ಮ ದೇಹಕ್ಕೆ...

ಶ್ರೀ ಲಕ್ಷ್ಮೀದೇವಿ ದೇವಸ್ಥಾನ ಮಳಲಿ, ಹಾಸನ ಇತಿಹಾಸ ಮತ್ತು ಮಹಿಮೆ

ಶ್ರೀ ಲಕ್ಷ್ಮೀದೇವಿ ದೇವಸ್ಥಾನ ಮಳಲಿ, ಹಾಸನ ಇತಿಹಾಸ ಮತ್ತು ಮಹಿಮೆ

by Shwetha
June 13, 2025
0

ಕರ್ನಾಟಕದ ಹಾಸನ ಜಿಲ್ಲೆಯ ಮಳಲಿ ಗ್ರಾಮದಲ್ಲಿರುವ ಶ್ರೀ ಲಕ್ಷ್ಮೀದೇವಿ ದೇವಸ್ಥಾನವು ತನ್ನ ಐತಿಹಾಸಿಕ ಹಿನ್ನಲೆ, ವಾಸ್ತುಶಿಲ್ಪದ ಸೌಂದರ್ಯ ಮತ್ತು ಭಕ್ತರ ಪಾಲಿನ ಶ್ರದ್ಧಾ ಕೇಂದ್ರವಾಗಿ ಮಹತ್ವ ಪಡೆದಿದೆ....

ರಾಯಚೂರು ಜಿಲ್ಲಾ ಪಂಚಾಯತ್ ನೇಮಕಾತಿ 2025

ರಾಯಚೂರು ಜಿಲ್ಲಾ ಪಂಚಾಯತ್ ನೇಮಕಾತಿ 2025

by Shwetha
June 12, 2025
0

ರಾಯಚೂರು ಜಿಲ್ಲಾ ಪಂಚಾಯತ್ ನೇಮಕಾತಿ 2025 – ಅಕೌಂಟೆಂಟ್ ಹುದ್ದೆ, ರಾಯಚೂರು ಜಿಲ್ಲಾ ಪಂಚಾಯತ್ ವತಿಯಿಂದ ಅಕೌಂಟೆಂಟ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ಆಫ್‌ಲೈನ್ ಮತ್ತು ಆನ್ಲೈನ್...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2025 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2025 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram