ADVERTISEMENT
Monday, February 2, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ರಾಜ್ಯ

ನನ್ನದು ಗಾಂಧಿ ಸಂತತಿ, ಹೇಡಿ ಸಾವರ್ಕರ್ ಸಂತತಿಯಲ್ಲ; ಬಿಜೆಪಿಯವರ ನಮಸ್ತೆ ಸದಾ ವತ್ಸಲೆ ಮರೆತು ನಮಸ್ತೆ ಸದಾ ರೌಡಿ ಕೋತ್ವಾಲನೇ ಜಪ: ಬಿ ಕೆ ಹರಿಪ್ರಸಾದ್ ಗುಡುಗು

BK Hariprasad vs BJP

Shwetha by Shwetha
February 1, 2026
in ರಾಜ್ಯ, Newsbeat, Politics, State, ರಾಜಕೀಯ
Share on FacebookShare on TwitterShare on WhatsappShare on Telegram

ಬೆಂಗಳೂರು: ಸದನಗಳ ಘನತೆ, ಗೌರವ ಮತ್ತು ರಾಜಕೀಯ ನೈತಿಕತೆಯ ವಿಚಾರವಾಗಿ ಆಡಳಿತರೂಢ ಕಾಂಗ್ರೆಸ್ ಮತ್ತು ಪ್ರತಿಪಕ್ಷ ಬಿಜೆಪಿ ನಡುವಿನ ವಾಕ್ಸಮರ ತಾರಕಕ್ಕೇರಿದೆ. ಇದೀಗ ಕಾಂಗ್ರೆಸ್ ಹಿರಿಯ ನಾಯಕ ಹಾಗೂ ವಿಧಾನ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ಅವರು ಬಿಜೆಪಿ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಘ ಪರಿವಾರದ ವಿರುದ್ಧ ಕಟುವಾದ ಪದಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಜೆಪಿಯಿಂದ ನೈತಿಕತೆಯ ಪಾಠ ಭೂತದ ಬಾಯಲ್ಲಿ ಭಗವದ್ಗೀತೆ

Related posts

ಭಾರತದ ಬಜೆಟ್ ಮಂಡಿಸುವುದು ಅಮೆರಿಕದ ಅಧ್ಯಕ್ಷರೇ? ಕೇಂದ್ರದ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ

ಭಾರತದ ಬಜೆಟ್ ಮಂಡಿಸುವುದು ಅಮೆರಿಕದ ಅಧ್ಯಕ್ಷರೇ? ಕೇಂದ್ರದ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ

February 2, 2026
ಬಜೆಟ್ -2026 : ಬೆಂಗಳೂರನ್ನು ಗ್ಲೋಬಲ್ ಸಿಟಿ ಎಂದ ಪ್ರಧಾನಿ ಮೋದಿ ನಯಾಪೈಸೆ ಅನುದಾನ ನೀಡಲಿಲ್ಲ; ಕೇಂದ್ರದ ವಿರುದ್ಧ ಡಿಸಿಎಂ ಡಿಕೆ ಶಿವಕುಮಾರ್ ಕೆಂಡಾಮಂಡಲ

ಬಜೆಟ್ -2026 : ಬೆಂಗಳೂರನ್ನು ಗ್ಲೋಬಲ್ ಸಿಟಿ ಎಂದ ಪ್ರಧಾನಿ ಮೋದಿ ನಯಾಪೈಸೆ ಅನುದಾನ ನೀಡಲಿಲ್ಲ; ಕೇಂದ್ರದ ವಿರುದ್ಧ ಡಿಸಿಎಂ ಡಿಕೆ ಶಿವಕುಮಾರ್ ಕೆಂಡಾಮಂಡಲ

February 2, 2026

ಸದನಗಳ ಘನತೆ ಮತ್ತು ಗೌರವವನ್ನು ಮೂರಾಬಟ್ಟೆ ಮಾಡಿರುವ ಬಿಜೆಪಿಯವರಿಂದ ಘನತೆ, ಗೌರವ ಹಾಗೂ ಸಂಸ್ಕೃತಿಯ ಬಿಟ್ಟಿ ಪಾಠ ಕೇಳುವುದು ಮತ್ತು ಭೂತದ ಬಾಯಲ್ಲಿ ಭಗವದ್ಗೀತೆ ಕೇಳುವುದು ಒಂದೇ. ಇಂಥವರಿಂದ ನೈತಿಕತೆಯ ಪಾಠ ಕಲಿಯುವುದು ಹೇಸಿಗೆತನದ ಪರಮಾವಧಿ ಎಂದು ಹರಿಪ್ರಸಾದ್ ಜರಿದಿದ್ದಾರೆ. ಚಿಂತಕರ ಚಾವಡಿಯಲ್ಲಿ ಬಾಯ್ತುರಿಕೆಗೆ ಮಾತನಾಡುವ ನಾಯಕರನ್ನೇ ಆಯ್ಕೆ ಮಾಡುವ ಪರಂಪರೆ ಹೊಂದಿರುವ ಬಿಜೆಪಿ, ಮಹಿಳೆಯರ ಬಗ್ಗೆ ಮತ್ತು ಜನಪ್ರತಿನಿಧಿಗಳ ಬಗ್ಗೆ ಉದುರಿಸುವ ಒಂದೊಂದು ಮುತ್ತುಗಳನ್ನು ನೋಡಿ ಜನ ಸಾಮಾನ್ಯರು ಹಾದಿ ಬೀದಿಯಲ್ಲಿ ಉಗಿಯುತ್ತಿರುವುದನ್ನು ಮರೆತಂತಿದೆ ಎಂದು ಕಿಡಿಕಾರಿದ್ದಾರೆ.

ನಮಸ್ತೆ ಸದಾ ವತ್ಸಲೇ ಬದಲು ರೌಡಿ ಕೋತ್ವಾಲನ ಜಪ

ಸಂಘ ಪರಿವಾರದ ವಿರುದ್ಧ ನೇರ ವಾಗ್ದಾಳಿ ನಡೆಸಿದ ಹರಿಪ್ರಸಾದ್, ಆರ್.ಎಸ್.ಎಸ್ ಹಾಗೂ ಬಿಜೆಪಿ ಇತ್ತೀಚಿಗೆ ನಮಸ್ತೆ ಸದಾ ವತ್ಸಲೇ ಪ್ರಾರ್ಥನೆಯನ್ನು ಮರೆತು, ನಮಸ್ತೆ ಸದಾ ರೌಡಿ ಕೋತ್ವಾಲನೇ ಎಂದು ಶುರು ಮಾಡಿದ್ದಾರೆ. ಕೇಂದ್ರದ ಗೃಹ ಸಚಿವನೇ ಕೊಲೆಯ ಕೇಸ್ ಹಾಕಿಸಿಕೊಂಡು, ಗೂಂಡಾಗಿರಿ ಮಾಡಿ, ಸುಪ್ರೀಂ ಕೋರ್ಟಿನಿಂದ ಗಡಿಪಾರಾದವನ ಚೇಲಾಗಳೇ ತುಂಬಿ ತುಳುಕುತ್ತಿರುವ ಬಿಜೆಪಿಗೆ ರೌಡಿ ಕೋತ್ವಾಲನೇ ಗುರು ಎಂದು ಗಂಭೀರ ಆರೋಪ ಮಾಡಿದ್ದಾರೆ. ಬಿಜೆಪಿಯಲ್ಲಿ ರೌಡಿಗಳು, ರೇಪಿಸ್ಟ್ ಗಳು ಹಾಗೂ ಕೊಲೆಗಡುಕರಿಗಾಗಿಯೇ ಪ್ರತ್ಯೇಕ ಮೋರ್ಚಾ ಇರುವಾಗ ರೌಡಿ ಕೋತ್ವಾಲನ ಜಪ ಇಲ್ಲದೇ ಅವರಿಗೆ ನಿದ್ದೆ ಕೂಡ ಬರುವುದಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಚಿಂತಕರ ಚಾವಡಿಯೇ ಎಗರಿ ಹೋಗಿದೆ

ಸದನದಲ್ಲೇ ಸರ್ಕಾರದ ಸಚಿವೆಯನ್ನು ವೇಶ್ಯೆ ಎಂದು ಕರೆದವನನ್ನು ಚಿಂತಕರ ಚಾವಡಿಗೆ ಸದಸ್ಯ ಮಾಡಿರುವ ಬಿಜೆಪಿಯ ಸಂಸ್ಕೃತಿ ಯಾವುದು? ಮಹಿಳೆಯರನ್ನು ತುಚ್ಛವಾಗಿ ಮಾತಾಡುವ ನಾಯಕನನ್ನು ಬಿಜೆಪಿ ಪಕ್ಷ ಮುಂಬಾಗಿಲಿನಿಂದ ಆಯ್ಕೆ ಮಾಡಿದ್ದಿರೋ ಅಥವಾ ಹಿಂಬಾಗಿಲಿನಿಂದ ಆಯ್ಕೆ ಮಾಡಿದ್ದಿರೋ? ರಾತ್ರಿ ಸರ್ಕಾರದ ಕೆಲಸ, ದಿನವಿಡೀ ಮುಖ್ಯಮಂತ್ರಿಯ ಕೆಲಸ ಮಾಡುತ್ತಾರೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿಯನ್ನೇ ಬಹಿರಂಗ ಸಭೆಯಲ್ಲಿ ನಿರ್ಲಜ್ಜೆಯಿಂದ ಮಾತನಾಡಿದ ರವಿ ಕುಮಾರ್ ನನ್ನು ಯಾವ ಮಾನದಂಡದ ಮೇಲೆ ಚಿಂತಕರ ಚಾವಡಿಗೆ ಆಯ್ಕೆ ಮಾಡಿದ್ದೀರಿ? ಇಂತಹ ಸಂಘ ಪರಿವಾರದ ಸಂಸ್ಕೃತಿಯ ವಾರಸುದಾರನ ನುಡಿಮುತ್ತುಗಳಿಂದ ಚಿಂತಕ ಚಾವಡಿಯೇ ಎಗರಿ ಹೋಗಿದೆ ಎಂದು ಲೇವಡಿ ಮಾಡಿದ್ದಾರೆ.

ಪೋಕ್ಸೋ ಆರೋಪಿಗಳೇ ಬಿಜೆಪಿಗೆ ಮಾರ್ಗದರ್ಶಕರು

ಮನೆಗೆ ಕಷ್ಟ ಎಂದು ಬಂದ ಬಾಲಕಿ ಮೇಲೆ ಪೈಶಾಚಿಕ ಕೃತ್ಯ ಎಸಗಿ, ಪೋಕ್ಸೋ ಕೇಸ್ ಅಡಿ ಕೋರ್ಟ್ ಎದುರು ಹಾಜರಾಗದೆ ಸಾರ್ವಜನಿಕವಾಗಿ ಮುಖ ತೋರಿಸಲು ಯೋಗ್ಯತೆ ಇಲ್ಲದ ನಾಯಕನನ್ನು ಮಾರ್ಗದರ್ಶಕ ಮಂಡಳಿಯಲ್ಲಿ ಇಟ್ಟುಕೊಂಡಿರುವ ಬಿಜೆಪಿ ಪಕ್ಷಕ್ಕೆ ಕಿಂಚಿತ್ತಾದರೂ ನಾಚಿಕೆ, ಮಾನ, ಮರ್ಯಾದೆ ಇದೆಯೇ ಎಂದು ಪ್ರಶ್ನಿಸುವ ಮೂಲಕ ಯಡಿಯೂರಪ್ಪ ಅವರ ಮೇಲಿನ ಆರೋಪದ ಬಗ್ಗೆ ಪರೋಕ್ಷವಾಗಿ ಪ್ರಸ್ತಾಪಿಸಿ ತಪರಾಕಿ ಹಾಕಿದ್ದಾರೆ.

ನನ್ನದು ಗಾಂಧಿ ಸಂತತಿ

ಬಿಜೆಪಿಯ ಗೊಡ್ಡು ಬೆದರಿಕೆಗಳಿಗೆ, ಅವಮಾನಗಳಿಗೆ ಹೆದರುವ, ಬಗ್ಗುವ ಹೇಡಿ ನಾನಲ್ಲ.‌ ನನ್ನದು ಗಾಂಧಿ ಸಂತತಿಯೇ ಹೊರತು ಹೇಡಿ ಸಾವರ್ಕರ್ ಸಂತತಿಯಂತೂ ಅಲ್ಲವೇ ಅಲ್ಲ. ಬಿಜೆಪಿಯ ಇಂದ್ರ-ಚಂದ್ರ-ಸತ್ಯಹರಿಶ್ಚಂದ್ರನ ತುಂಡುಗಳ ಬಗ್ಗೆ ರಾಜ್ಯದಲ್ಲಿ ಮಾತ್ರವಲ್ಲ ಇಡೀ ದೇಶದಲ್ಲೇ ಮಾಡಿರುವ ಮಾನಗೇಡಿತನಗಳನ್ನು ಕಂತುಗಳಲ್ಲಿ ಮಾತನಾಡುವಷ್ಟಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ShareTweetSendShare
Join us on:

Related Posts

ಭಾರತದ ಬಜೆಟ್ ಮಂಡಿಸುವುದು ಅಮೆರಿಕದ ಅಧ್ಯಕ್ಷರೇ? ಕೇಂದ್ರದ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ

ಭಾರತದ ಬಜೆಟ್ ಮಂಡಿಸುವುದು ಅಮೆರಿಕದ ಅಧ್ಯಕ್ಷರೇ? ಕೇಂದ್ರದ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ

by Shwetha
February 2, 2026
0

ಬೆಂಗಳೂರು: ಇರಾನ್ ಬದಲಿಗೆ ಭಾರತವು ವೆನೆಜುವೆಲಾದಿಂದ ತೈಲ ಖರೀದಿಸಲಿದೆ ಎಂಬ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆ ಈಗ ಭಾರತೀಯ ರಾಜಕೀಯ ವಲಯದಲ್ಲಿ ಭಾರೀ ಸಂಚಲನ...

ಬಜೆಟ್ -2026 : ಬೆಂಗಳೂರನ್ನು ಗ್ಲೋಬಲ್ ಸಿಟಿ ಎಂದ ಪ್ರಧಾನಿ ಮೋದಿ ನಯಾಪೈಸೆ ಅನುದಾನ ನೀಡಲಿಲ್ಲ; ಕೇಂದ್ರದ ವಿರುದ್ಧ ಡಿಸಿಎಂ ಡಿಕೆ ಶಿವಕುಮಾರ್ ಕೆಂಡಾಮಂಡಲ

ಬಜೆಟ್ -2026 : ಬೆಂಗಳೂರನ್ನು ಗ್ಲೋಬಲ್ ಸಿಟಿ ಎಂದ ಪ್ರಧಾನಿ ಮೋದಿ ನಯಾಪೈಸೆ ಅನುದಾನ ನೀಡಲಿಲ್ಲ; ಕೇಂದ್ರದ ವಿರುದ್ಧ ಡಿಸಿಎಂ ಡಿಕೆ ಶಿವಕುಮಾರ್ ಕೆಂಡಾಮಂಡಲ

by Shwetha
February 2, 2026
0

ಬೆಂಗಳೂರು: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಕೇಂದ್ರ ಬಜೆಟ್ ಬಗ್ಗೆ ಕರ್ನಾಟಕ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬೆಂಗಳೂರನ್ನು ಜಾಗತಿಕ...

ಬಜೆಟ್ 2026: ಶ್ರೀಗಂಧದ ಕಂಪಿಗೆ ಹೈಸ್ಪೀಡ್ ವೇಗ! ಹೈಟೆಕ್ ಕರ್ನಾಟಕಕ್ಕೆ ಬಂಪರ್ ಕೊಡುಗೆ ನೀಡಿದ ಕೇಂದ್ರ

ಬಜೆಟ್ 2026: ಶ್ರೀಗಂಧದ ಕಂಪಿಗೆ ಹೈಸ್ಪೀಡ್ ವೇಗ! ಹೈಟೆಕ್ ಕರ್ನಾಟಕಕ್ಕೆ ಬಂಪರ್ ಕೊಡುಗೆ ನೀಡಿದ ಕೇಂದ್ರ

by Shwetha
February 2, 2026
0

ನವದೆಹಲಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭಾನುವಾರ ಸಂಸತ್ತಿನಲ್ಲಿ ಮಂಡಿಸಿದ 2026ರ ಕೇಂದ್ರ ಬಜೆಟ್, ಕರ್ನಾಟಕದ ಪಾಲಿಗೆ ಭರಪೂರ ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ದೇಶದ ಆರ್ಥಿಕತೆಯ...

ಕೇಂದ್ರ ಬಜೆಟ್ 2026 : ಐಟಿ ರಿಟರ್ನ್ ಫೈಲ್ ಮಾಡುವ ಮುನ್ನ ಎಚ್ಚರ! ಸಣ್ಣ ತಪ್ಪಿಗೂ ಬೀಳುತ್ತೆ ಭಾರೀ ದಂಡ

ಕೇಂದ್ರ ಬಜೆಟ್ 2026 : ಐಟಿ ರಿಟರ್ನ್ ಫೈಲ್ ಮಾಡುವ ಮುನ್ನ ಎಚ್ಚರ! ಸಣ್ಣ ತಪ್ಪಿಗೂ ಬೀಳುತ್ತೆ ಭಾರೀ ದಂಡ

by Shwetha
February 2, 2026
0

ನವದೆಹಲಿ: ಕೇಂದ್ರ ಸರ್ಕಾರ ಮಂಡಿಸಿರುವ 2026ರ ಸಾಲಿನ ಕೇಂದ್ರ ಬಜೆಟ್ ತೆರಿಗೆ ವಂಚಕರ ನಿದ್ದೆ ಕೆಡಿಸಿದೆ. ಆದಾಯ ತೆರಿಗೆ ವ್ಯವಸ್ಥೆಯಲ್ಲಿ ಪಾರದರ್ಶಕತೆಯನ್ನು ತರುವ ನಿಟ್ಟಿನಲ್ಲಿ ಮತ್ತು ತೆರಿಗೆ...

ದಿನ ಭವಿಷ್ಯ (26-01-2026) Daily Horoscope. ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (02-02-2026) Daily Horoscope. ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
February 2, 2026
0

ದಿನ ಭವಿಷ್ಯ: 02-02-2026 1. ಮೇಷ ರಾಶಿ ಇಂದು ನಿಮಗೆ ಕೆಲಸ ಕಾರ್ಯಗಳಲ್ಲಿ ಉತ್ತಮ ಯಶಸ್ಸು ದೊರೆಯಲಿದೆ. ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದ್ದು, ಕಚೇರಿಯಲ್ಲಿ ಸಹೋದ್ಯೋಗಿಗಳ ಬೆಂಬಲ ಸಿಗಲಿದೆ....

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram