ಬ್ಲ್ಯಾಕ್ ಫಂಗಸ್ ಹೊಸ ರೋಗವಲ್ಲ : ಡಿಸಿಎಂ ಅಶ್ವಥ್ ನಾರಾಯಣ್
ಬೆಂಗಳೂರು : ಬ್ಲ್ಯಾಕ್ ಫಂಗಸ್ ಹೊಸ ರೋಗವಲ್ಲ. ನಾನು ಬ್ಲ್ಯಾಕ್ ಫಂಗಸ್ಗೆ ಔಷಧ ಇದೆ ಎಂದು ಹೇಳಿಲ್ಲ ಎಂದು ಡಿಸಿಎಂ ಅಶ್ವಥ್ ನಾರಾಯಣ್ ಹೇಳಿದ್ದಾರೆ.
ರಾಜ್ಯದಲ್ಲಿ ದಿನೇ ದಿನೇ ಬ್ಲಾಕ್ ಫಂಗಸ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಈ ಬಗ್ಗೆ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಬ್ಲ್ಯಾಕ್ ಫಂಗಸ್ಗೆ ಔಷಧ ಇದೆ ಎಂaದು ಹೇಳಿಲ್ಲ.
ಸ್ಟಾಕ್ ಲಭ್ಯವಿದೆ ಎಂದು ನಾನು ಹೇಳಿಕೆ ನೀಡಿಲ್ಲ, ಆದರೆ ಅದಕ್ಕೆ ಪರ್ಯಾಯ ಔಷಧದ ಬಗ್ಗೆ ಹೇಳಿದ್ದೇನೆ.
ಬ್ಲ್ಯಾಕ್ ಫಂಗಸ್ ಹೊಸ ರೋಗವಲ್ಲ. ನನ್ನ ಹೇಳಿಕೆಗೂ ಸುಧಾಕರ್ ಹೇಳಿಯಲ್ಲಿ ವ್ಯತ್ಯಾಸವಿಲ್ಲ ಎಂದು ಹೇಳಿದರು.
ಇನ್ನು ಇದೇ ವೇಳೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಸರ್ಕಾರ ಸಾವಿನ ಸಂಖ್ಯೆಯಲ್ಲಿ ಸುಳ್ಳು ಹೇಳುತ್ತಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅಶ್ವಥ್ ನಾರಾಯಣ್, ಸರ್ಕಾರ ಸಾವಿನ ಸಂಖ್ಯೆ ಸುಳ್ಳು ಹೇಳಿಲ್ಲ.
ಸಾವಿನ ಕಾರಣ ಎಲ್ಲವೂ ದಾಖಲಾಗುತ್ತಿದೆ. ಚಿಕಿತ್ಸೆ, ಅಂತ್ಯಕ್ರಿಯೆ ಎಲ್ಲವೂ ಮಾಹಿತಿ ಇದೆ.
ಸಿದ್ದರಾಮಯ್ಯ ಅವರ ಆರೋಪದಲ್ಲಿ ಹುರುಳಿಲ್ಲ. ಯಾವುದನ್ನೂ ಮರೆಮಾಚುವ ಅವಶ್ಯಕತೆ ಇಲ್ಲ ಎಂದು ಟಾಂಗ್ ನೀಡಿದರು.