ಕೋವಿಡ್… ಬ್ಲ್ಯಾಕ್ ಫಂಗಸ್…ಈಗ ವೈಟ್ ಫಂಗಸ್ ಹಾವಳಿ ಶುರು..!
ನವದೆಹಲಿ: ದೇಶದಲ್ಲಿ ಕೋವಿಡ್ 2ನೇ ಅಲೆ ಭೀತಿಗೆ ಜನ ತತ್ತರಿಸಿ ಹೋಗಿದ್ದಾರೆ. ಆಕ್ಸಿಜನ್ ಕೊರೆತ, ಬೆಡ್ ಕೊರತೆ ಮತ್ತೊಂದೆಡೆ , ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೇ , ಚಿಕಿತ್ಸೆಗೆ ಹಣವಿಲ್ಲದೇ ಪರದಾಡುವ ಸ್ಥಿತಿ ಇದೆ.. ದಿನೇ ದಿನೇ , ಸೋಂಕಿತರ ಸಂಖ್ಯೆ , ಸಾವಿನ ಸಂಖ್ಯೆ ಹೆಚ್ಚಾಗ್ತಲೇ ಇದೆ..
ಈ ನಡುವೆ ದೇಶದ , ಹಾಗೂ ರಾಜ್ಯ , ಬೆಂಗಳೂರಿನಲ್ಲೂ ಬ್ಲಾಕ್ ಫಂಗಸ್ ವೈರಸ್ ನ ಕಾಟ ಶುರುವಾಗಿದೆ.. ಇದ್ರಿಂದಾಗಿ ಈಗಾಗಲೇ ಹಲವು ಜೀವಗಳು ಹೋಗಿದವೆ. ಹೀಗಾಗಿ ಜನ ಮತ್ತಷ್ಟು ಆತಂಕ್ಕೆ ಒಳಗಾಗಿದ್ದಾರೆ.
ಇದು ಸಾಲದಕ್ಕೆ ಈಗ ದೇಶಕ್ಕೆ ವೈಟ್ ಫಂಗಸ್ ಕಾಟ ಶುರುವಾಗಿದೆ. ಬಿಹಾರದಲ್ಲಿ 4 ಮಂದಿಯಲ್ಲಿ ವೈಟ್ ಫಂಗಸ್ ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ. ಈಗಾಗಲೇ ಬಿಹಾರದ ಪಟ್ನಾದಲ್ಲಿ 4 ಮಂದಿಯಲ್ಲಿ ವೈಟ್ ಫಂಗಸ್ ಪತ್ತೆಯಾಗಿದೆ. ಆರೋಗ್ಯ ತಜ್ಞರ ಪ್ರಕಾರ ಬ್ಲ್ಯಾಕ್ ಫಂಗಸ್ ಗಿಂತಲೂ ವೈಟ್ ಫಂಗಸ್ ಹೆಚ್ಚು ಅಪಾಯಕಾರಿಯಾಗಿದೆ. ಅಲ್ಲದೇ ಇದು ಶ್ವಾಸಕೋಶ ಸೇರಿ ದೇಹದ ಉಗುರು, ಚರ್ಮ, ಹೊಟ್ಟೆ, ಕಿಡ್ನಿ, ಬಾಯಿಗೂ ಹಾನಿ ಮಾಡುತ್ತದೆ ಎನ್ನಲಾಗಿದೆ.
ವೈಟ್ ಫಂಗಸ್ ಶ್ವಾಸಕೋಶಕ್ಕೂ ಸೋಂಕು ತರುತ್ತದೆ ಮತ್ತು ಸೋಂಕಿತ ರೋಗಿಯ ಮೇಲೆ ಎಚ್‍ಆರ್ ಸಿಟಿ ಸ್ಕ್ಯಾನ್ ನಡೆಸಿದಾಗ ಕೋವಿಡ್-19 ಗೆ ಹೋಲುವ ಸೋಂಕು ಪತ್ತೆಯಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.
ವೈಟ್ ಫಂಗಸ್ ಗೆ ಆಂಟಿ-ಫಂಗಲ್ ಇಂಟ್ರಾವೆನಸ್ ಇಂಜೆಕ್ಷನ್ ನೀಡಲಾಗುತ್ತದೆ. ಒಂದು ಡೋಸ್ 3,500 ರೂ. ದರವಿದ್ದು ಎಂಟು ವಾರಗಳವರೆಗೆ ನೀಡಬೇಕಾಗುತ್ತದೆ. ಇದು ರೋಗದ ವಿರುದ್ಧ ಪರಿಣಾಮಕಾರಿಯಾದ ಏಕೈಕ ಔಷಧವಾಗಿದೆ.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.