ರಾಯಚೂರು: ಸರ್ಕಾರಿ ಅಧಿಕಾರಿಯೊಬ್ಬರಿಗೆ ಸೈಬರ್ ವಂಚಕರು ಬ್ಲ್ಯಾಕ್ ಮೇಲ್ ಮಾಡಿರುವ ಘಟನೆಯೊಂದು ನಡೆದಿದೆ.
ಹಟ್ಟಿ ಚಿನ್ನದ ಗಣಿ (Hatti Gold Mine) ಸಿನಿಯರ್ ಗೇಜ್ ಆಪರೇಟರ್ ಗೆ ಈ ರೀತಿ ವಂಚಿಸಲಾಗಿದೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಹೇಂದ್ರ ಎಂಬುವವರಿಗೆ ಈ ರೀತಿಯ ಬ್ಲ್ಯಾಕ್ ಮೇಲ್ ಮಾಡಲಾಗಿದೆ. ಗಣಿಯಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಅಧಿಕಾರಿಯ ಮೊಬೈಲ್ ಗೆ ಲಿಂಕ್ ಬಂದಿದೆ. ಅವರು ಈ ಲಿಂಕ್ ಕ್ಲಿಕ್ ಮಾಡಿದ್ದಾರೆ. ನಂತರ ಮಹೇಂದ್ರ ವಿಡಿಯೋ ಕಾಲ್ನಲ್ಲಿ ನಗ್ನ ಸ್ಥಿತಿಯಲ್ಲಿನ ಯುವತಿ ಜೊತೆ ಮಾತನಾಡುತ್ತಿರುವ ರೀತಿಯ ವಿಡಿಯೋ ರೀತಿಯಲ್ಲಿ ಕ್ರಿಯೆಟ್ ಮಾಡಲಾಗಿದೆ.
ಆ ನಂತರ ಆರೋಪಿಗಳು ಈ ವಿಡಿಯೋ ಇಟ್ಟುಕೊಂಡು ಕಳೆದೊಂದು ವರ್ಷದಿಂದ ಹಣಕ್ಕಾಗಿ ಮಹೇಂದ್ರ ಅವರಿಗೆ ನಿರಂತರ ಬ್ಯ್ಲಾಕ್ ಮೇಲ್ ಮಾಡಿದ್ದಾರೆ. ಇದರಿಂದ ಮನನೊಂದ ಅಧಿಕಾರಿ ದೂರು ನೀಡಿದ್ದಾರೆ.