ಸೂಪರ್ ಡೂಪರ್ ಹಿಟ್ ಸಿನೆಮಾವಾದ ಹಾಲಿವುಡ್ ನ ‘ಅವೆಂಜರ್ಸ್’ ಸರಣಿಯ ಸೂಪರ್ ಹೀರೋಗಳಲ್ಲಿ ಒಬ್ಬರಾಗಿ, ‘ಬ್ಲ್ಯಾಕ್ ಪ್ಯಾಂಥರ್’ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಹಾಲಿವುಡ್ ನ ಸ್ಟಾರ್ ನಟ ಚಾಡ್ವಿಕ್ ಬೋಸ್ಮನ್ ಅವರು ನಿಧನರಾಗಿದ್ದಾರೆ. ಹಾಲಿವುಡ್ನಲ್ಲಿ ಸ್ಪೈಡರ್ ಮ್ಯಾನ್, ಸೂಪರ್ಮ್ಯಾನ್, ಹಲ್ಕ್, ಐರನ್ ಮ್ಯಾನ್, ಬ್ಯಾಟ್ಮ್ಯಾನ್ ಹತ್ತು ಹಲವು ಸೂಪರ್ ಹೀರೋ ಪಾತ್ರಗಳಲ್ಲಿ ಕಾಣಿಸಿಕೊಂಡು ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದ ಬೋಸ್ಮನ್ ಸದ್ಯ ಕ್ಯಾನ್ಸರ್ ನಿಂದಾಗಿ ಮೃತಪಟ್ಟಿದ್ದಾರೆ.
2016 ರಿಂದಲೂ ಕ್ಯಾನ್ಸರ್ ನಿಂದ ಬೋಸ್ ಮನ್ ಅವರು ಆಗಿನಿಂದಲೂ ಚಿಕಿತ್ಸೆ ಪಡೆಯುತ್ತಲೇ ಇದ್ದರು. ಆದರೆ ಇದೀಗ ಚಿಕಿತ್ಸೆ ಫಲಕಾರಿಯಾಗದೇ 43 ವರ್ಷದ ಚಿಕ್ಕವಯಸ್ಸಿನಲ್ಲೇ ಬೋಸ್ ಮನ್ ಇಹಲೋಕ ತ್ಯಜಿಸಿದ್ದಾರೆ. 2016 ರಲ್ಲಿ ಕ್ಯಾಪ್ಟನ್ ಅಮೆರಿಕ ಸಿವಿಲ್ ವಾರ್ ಸಿನಿಮಾದಲ್ಲಿ ಮೊದಲ ಬಾರಿಗೆ ಬ್ಲ್ಯಾಕ್ ಪ್ಯಾಂಥರ್ ಆಗಿ ಕಾಣಿಸಿಕೊಂಡ ಚಾಡ್ವಿಕ್ ಬೋಸ್ಮನ್ ನಂತರ ಅವೇಂಜರ್ಸ್ ನ ಎರಡು ಸರಣಿಯಲ್ಲಿ ಮತ್ತದೇ ಬ್ಲ್ಯಾಕ್ ಪ್ಯಾಂಥರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.








