ಕಾರವಾರ : ವ್ಯಕ್ತಿಯೊಬ್ಬ ವಿವಾಹಿತ ಮಹಿಳೆಯನ್ನು ಲೈಂಗಿಕತೆಗೆ ಬಳಸಿಕೊಂಡು ಹಣ ಕೊಡುವಂತೆ ಬ್ಲ್ಯಾಕ್ಮೇಲ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಲಾಗಿದೆ.
ಕಾರವಾರದ (Karwar) ಮಹಿಳಾ ಠಾಣೆ ಪೊಲೀಸರು ಮಂಗಳೂರಿನ ಪುತ್ತೂರಿನ ಆರ್ಲಪದವು ಮೂಲದ ಪ್ರಶಾಂತ್ ಭಟ್ ಮಾಣಿಲ ಎಂಬಾತನನ್ನು ಬಂಧಿಸಿದ್ದಾರೆ. ವಿವಾಹಿತ ಮಹಿಳೆಯೊಬ್ಬರು ಸಂಗೀತದಲ್ಲಿ ಆಸಕ್ತಿ ಹೊಂದಿದ್ದರು. ಹೀಗಾಗಿ ಇವರು ಕ್ಲಬ್ ಹೌಸ್ ಆಪ್ ನಲ್ಲಿ ಹಾಡುತ್ತಿದ್ದರು. ಈ ಸಂದರ್ಭದಲ್ಲಿ ಪ್ರಶಾಂತ್ ಭಟ್ ಪರಿಚಯವಾಗಿದ್ದಾನಂ. ನಂತರ ಇಬ್ಬರೂ ಪ್ರೀತಿಯಲ್ಲಿ ಬಿದ್ದಿದ್ದಾರೆ.
ಅಲ್ಲದೇ, ಜನೇವರಿ ತಿಂಗಳಲ್ಲಿ ಆರೋಪಿಯು ಭೇಟಿಯಾಗುವುದಕ್ಕಾಗಿ ಹೋಟೆಲ್ ನಲ್ಲಿ ರೂಂ ಬುಕ್ ಮಾಡಿದ್ದ. ಆಗ ಅಲ್ಲಿ ಪ್ರೀತಿಯ ನಾಟಕವಾಡಿ ಮಹಿಳೆಯನ್ನು ಸೆಕ್ಸ್ ಗೆ ಬಳಸಿಕೊಂಡಿದ್ದಾನೆ. ನಂತರ ಮತ್ತೆ ಅದೇ ಲಾಡ್ಜ್ ಗೆ ಕರೆಯಿಸಿಕೊಂಡಿದ್ದಾನೆ. ಈ ಸಂದರ್ಭದಲ್ಲಿ ಖಾಸಗಿ ಕ್ಷಣಗಳನ್ನು ರೆಕಾರ್ಡ್ ಮಾಡಿದ್ದಾನೆ. ನಂತರ ವಿಡಿಯೋ ಕಾಲ್ ಮಾಡಿ ಬೆತ್ತಲಾಗುವಂತೆ ಹೇಳಿ ಫೋಟೋ ತೆಗೆದುಕೊಂಡಿದ್ದಾನೆ. ಆನಂತರ ವಿಡಿಯೋ ಕಳುಹಿಸಿ ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡಿದ್ದಾನೆ. ಮೊದಲು 25 ಸಾವಿರ ರೂ. ಹಣ ಪಡೆದಿದ್ದಾನೆ. ನಂತರ 7 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದಾನೆ. ಅಲ್ಲದೇ, ಮಹಿಳೆಯ ತಾಯಿ ಹಾಗೂ ಸ್ನೇಹಿತರಿಗೂ ಖಾಸಗಿ ಕ್ಷಣಗಳ ಚಿತ್ರಗಳನ್ನು ಕಳುಹಿಸಿದ್ದಾನೆ. ವಿಷಯ ತಿಳಿದ ಪದಿ ಕಾರವಾರದ ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದು, ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.