ಯುವತಿಯ ಪಾಲಿಗೆ ಇನ್ ಸ್ಟಾಗ್ರಾಮ್ ಮೂಲಕ ಬಂದ ಕಾಮಾಂಧ ಜವರಾಯ
ಶಿವಮೊಗ್ಗ: ಸಾಮಾಜಿಕ ಜಾಲತಾಣದಲ್ಲಿ ಯುವತಿಗೆ ಕಿರುಕುಳ ನೀಡಿದ ಪರಿಣಾಮ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿಕಾರಿಪುರ ತಾಲೂಕು ತೂಗರ್ಸಿಯಲ್ಲಿ ನಡೆದಿದೆ.
23 ವರ್ಷದ ಪದವಿ ಯುವತಿ ಮೃತ ದುರ್ದೈವಿ. ಅಪರಿಚಿತ ಯುವಕನೊಬ್ಬ ಯುವತಿಗೆ ಇನ್ ಸ್ಟಾಗ್ರಾಮ್ ನಲ್ಲಿ ಬೆತ್ತಲೆ ಪೋಟೊ ಕಳುಹಿಸು, ಇಲ್ಲದಿದ್ದರೇ ನಿನ್ನ ಫೋಟೋ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುವುದಾಗಿ ಬ್ಲ್ಯಾಕ್ ಮೇಲ್ ಮಾಡಿದ್ದಾನೆ. ಇದರಿಂದ ನೊಂದ ಯುವತಿ ದುರಂತವೊಂದು ಮಾಡಿಕೊಂಡಿದ್ದಾಳೆ.
ನಡೆದಿದ್ದೇನು? : ಯುವಕ ತನ್ನ dilatco ph ಎಂಬ ಇನ್ ಸ್ಟಾಗ್ರಾಮ್ ಖಾತೆ ಮೂಲಕ ಯುವತಿಗೆ ಕರೆ ಮಾಡಿದ್ದಾನೆ. ಕರೆ ನಿನ್ನ ಬೆತ್ತಲೆ ಫೋಟೋ ಕಳುಹಿಸವುಂತೆ ಪಿಡಾಯಿಸಿದ್ದಾನೆ. ಇದಕ್ಕೆ ಯುವತಿ ನಿರಾಕರಿಸಿದ್ದಾಳೆ. ನಂತರ ಯುವಕ ಆಕೆಗೆ ನಿನ್ನ ಪೋಟೊ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುವುದಾಗಿ ಬ್ಲ್ಯಾಕ್ ಮೇಲ್ ಮಾಡಿದ್ದಾನೆ ಎನ್ನಲಾಗುತ್ತಿದೆ.
ಇದರಿಂದ ಭಯಗೊಂಡ ಯುವತಿ ಆ ಯುವಕನಿಗೆ ಇನ್ ಸ್ಟಾಗ್ರಾಂ ನಲ್ಲಿ ಕರೆ ಮಾಡಿ ತನ್ನ ಬೆತ್ತಲೆ ವಿಡಿಯೋವನ್ನು ತೋರಿಸಿದ್ದಾಳಂತೆ. ಈ ವಿಡಿಯೋವನ್ನು ಯುವಕ ರೆಕಾರ್ಡ್ ಮಾಡಿಕೊಂಡು ಯುವತಿಗೆ ಪದೇ ಪದೇ ಬೆತ್ತಲೆ ವಿಡಡಿಯೊ ಕಾಲ್ ಗೆ ಬಾ, ಇಲ್ಲ ನಿನ್ನ ಬೆತ್ತಲೆ ಫೋಟೋ ಕಳುಹಿಸು ಎಂದು ಬೆದರಿಕೆ ಹಾಕಿದ್ದಾನೆ.
ಇದಕ್ಕೆ ಯವತಿ ಒಪ್ಪದಿದ್ದಕ್ಕೆ, ಯುವಕ ನೀನು ತೋರಿಸದೆ ಹೋದರೆ ತನ್ನ ಬಳಿ ಇರುವ ಎಲ್ಲಾ ಸಾಮಾಜಿಕ ಜಾಲತಾಣದಲ್ಲಿ ನಿನ್ನ ಬೆತ್ತಲೆ ಫೋಟೋ, ವಿಡಿಯೋ ಹರಿಬಿಡುವುದಾಗಿ ಬೆದರಿಸಿದ್ದಾನೆ. ನಂತರ ಯುವತಿ ತನಗೆ ಅಪರಿಚಿತ ಯುವಕನಿಂದ ಬಹಳ ಸಮಸ್ಯೆಯಾಗುತ್ತಿದೆ ಎಂದು ತನ್ನ ತಂದೆ ಬಳಿ ಹೇಳಿಕೊಂಡಿದ್ದಳು.
ಈಕೆಯ ತಂದೆ ಹೆದರಬೇಡ, ಇಬ್ಬರು ಶಿರಾಳಕೊಪ್ಪ ಪೊಲೀಸ್ ಠಾಣೆಗೆ ಹೋಗಿ ದೂರು ನೀಡೋಣ ಎಂದು ಸಮಾಧಾನ ಮಾಡಿದ್ದರು. ಆದರೆ ಯುವತಿ ತಾನು ಬಟ್ಟೆ ಬದಲಾಯಿಸಿಕೊಂಡು ಬರುವುದಾಗಿ ಹೇಳಿ ರೂಂಗೆ ಹೋಗಿ ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾಳೆ.
ಮಗಳು ಬಹಳ ಹೊತ್ತಾದರೂ ಬರಲಿಲ್ಲ ಎಂದು ಕೋಣೆಗೆ ಹೋಗಿ ನೋಡಿದಾಗ ಯುವತಿ ಆತ್ಮಹತ್ಯೆ ಮಾಡಿಕೊಂಡ ವಿಚಾರ ತಿಳಿದಿದೆ. ಬಳಿಕ ಯುವತಿಯ ತಂದೆ ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ಇನ್ಸ್ಟಾಗ್ರಾಂನ dilatco ph ಈ ಖಾತೆಯಿಂದ ತನ್ನ ಮಗಳಿಗೆ ಬೆದರಿಕೆ ಕರೆ ಬಂದ ಪರಿಣಾಮ ಆಕೆ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ದೂರು ನೀಡಿದ್ದಾರೆ.