Blakrishna vittaldas doshi : ವಿಶ್ವಪ್ರಸಿದ್ಧ ವಾಸ್ತುಶಿಲ್ಪ ತಜ್ಞ ಬಾಲಕೃಷ್ಣ ದೋಶಿ ಇನ್ನಿಲ್ಲ…
ವಿಶ್ವಪ್ರಸಿದ್ಧ ವಾಸ್ತುಶಿಲ್ಪ ತಜ್ಞ ಬಾಲಕೃಷ್ಣ ದೋಶಿ
ಪ್ರಧಾನಿ ಮೋದಿ ಸೇರಿ ಹಲವರ ಸಂತಾಪ
ಗುಜರಾತ್ ನಲ್ಲಿ ತಮ್ಮ ನಿವಾಸದಲ್ಲಿ ನಿಧನ
ಪ್ರಿಟ್ಜ್ಕರ್ ಆರ್ಕಿಟೆಕ್ಚರ್ ಪ್ರಶಸ್ತಿ ,
ರಾಯಲ್ ಗೋಲ್ಡ್ ಮೆಡಲ್ ಎರೆಡೂ ಪಡೆದ ಏಕೈಕ ಭಾರತೀಯ
ರಾಯಲ್ ಗೋಲ್ಡ್ ಮೆಡಲ್ ಮತ್ತು ಪ್ರಿಟ್ಜ್ಕರ್ ಆರ್ಕಿಟೆಕ್ಚರ್ ಪ್ರಶಸ್ತಿ , ಈ ಎರೆಡೂ ಪ್ರಶಸ್ತಿಯನ್ನೂ ಪಡೆದಿದ್ದ ೇಕೈಕ ಭಾರತೀಯರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ , ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ವಿಶ್ವ ವಿಖ್ಯಾತ ವಾಸ್ತುಶಿಲ್ಪಿ ಶ್ರೀ ಬಾಲಕೃಷ್ಣ ವಿಠ್ಠಲ್‌ದಾಸ್ ದೋಶಿ ಅವರು ಇದೀಗ ಇಹಲೋಕ ತ್ಯಜಿಸಿದ್ದಾರೆ..
2020 ರಲ್ಲಿ ಭಾರತದ ಮೂರನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮಭೂಷಣ ಪ್ರಶಸ್ತಿ ಪಡೆದಿದ್ದ ಬಾಲಕೃಷ್ಣ ವಿಠ್ಠಲ್ ದಾಸ್ ದೋಶಿ ಅವರು ತಮ್ಮ 95ನೇ ವಯಸ್ಸಿನಲ್ಲಿ ಗುಜರಾತ್ ನ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ..
ಪ್ರಿಟ್ಜ್‌ಕರ್ ಆರ್ಕಿಟೆಕ್ಚರ್ ಪ್ರಶಸ್ತಿ ವಿಜೇತ ಪೌರಾಣಿಕ ವಾಸ್ತುಶಿಲ್ಪಿ ಬಾಲಕೃಷ್ಣ ವಿ. ದೋಷಿ ಅವರು ನಗರದ ಬನ್ನೇರುಘಟ್ಟ ರಸ್ತೆಯಲ್ಲಿ ಐಕಾನಿಕ್ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್, ಬೆಂಗಳೂರು ಕ್ಯಾಂಪಸ್ ಅನ್ನು ನಿರ್ಮಿಸಿದ್ದಾರೆ, ಇದು ರಾಜ್ಯದಲ್ಲಿ ಅವರ ಏಕೈಕ ಯೋಜನೆಯಾಗಿದೆ.
ಅಗಲಿದ ಗಣ್ಯರಿಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಇನ್ನಿತರ ಗಣ್ಯರು ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ದೋಶಿ ಅವರು ಐಐಎಂ ಬೆಂಗಳೂರು, ಎನ್‌ಐಎಫ್‌ಟಿ ದೆಹಲಿ ಮತ್ತು ಅಹಮದಾಬಾದ್‌ನ ಸಿಇಪಿಟಿ ವಿಶ್ವವಿದ್ಯಾಲಯದಂತಹ ದೇಶದ ಕೆಲವು ಅಪ್ರತಿಮ ರಚನೆಗಳನ್ನು ವಿನ್ಯಾಸಗೊಳಿಸಿದ್ದಾರೆ..
ಅಹಮದಾಬಾದ್‌ನ ಥಾಲ್ತೇಜ್ ಸ್ಮಶಾನದಲ್ಲಿ ಮಂಗಳವಾರ ಮಧ್ಯಾಹ್ನ 2.30ಕ್ಕೆ ಅಂತ್ಯಕ್ರಿಯೆ ನೆರವೇರಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಬಾಲಕೃಷ್ಣ ವಿಠ್ಠಲ್‌ದಾಸ್ ದೋಶಿ ಅವರೊಂದಿಗಿನ ಫೋಟೋ ಜೊತೆ ಸಂತಾಪ ಸೂಚಿಸಿದ್ದು, ಡಾ.ಬಿವಿ ದೋಶಿ ಅವರು ಅದ್ಭುತ ವಾಸ್ತುಶಿಲ್ಪಿ ಮತ್ತು ಪ್ರಸಿದ್ಧ ಸಂಸ್ಥೆಯ ನಿರ್ಮಾತೃ ಆಗಿದ್ದರು. ಮುಂದಿನ ಪೀಳಿಗೆಯವರು ಭಾರತದಾದ್ಯಂತ ಅವರ ಕೆಲಸ ಕಾರ್ಯಗಳನ್ನು ಮೆಚ್ಚುವ ಮೂಲಕ ಅವರ ಶ್ರೇಷ್ಠ ಕೆಲಸಗಳನ್ನು ನೆನಪಿನಲ್ಲಿಟ್ಟುಕೊಳ್ಳುತ್ತಾರೆ. ಅವರ ಅಗಲಿಕೆ ನೋವು ತಂದಿದೆ. ಅವರ ಕುಟುಂಬ ಮತ್ತು ಅಭಿಮಾನಿ ವರ್ಗಕ್ಕೆ ಸಂತಾಪಗಳು ಎಂದು ಟ್ವೀಟ್ ಮಾಡಿದ್ದಾರೆ.
Blakrishna vittaldas doshi demise , PM Modi and others sends Condolences