ADVERTISEMENT
Sunday, July 5, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಲಕ್ಷ್ಮಿ ದೇವಿಯ ಆಶೀರ್ವಾದವುಳ್ಳ ರಾಶಿಗಳಾವುವು..? ನಿಮ್ಮ ರಾಶಿಗಿದೆಯೇ ಲಕ್ಷ್ಮಿ ಕೃಪೆ..?

Shwetha by Shwetha
January 13, 2021
in Newsbeat, Saaksha Special, ಎಸ್ ಸ್ಪೆಷಲ್, ನ್ಯೂಸ್ ಬೀಟ್
Lakshmi devi
Share on FacebookShare on TwitterShare on WhatsappShare on Telegram

ಲಕ್ಷ್ಮಿ ದೇವಿಯ ಆಶೀರ್ವಾದವುಳ್ಳ ರಾಶಿಗಳಾವುವು..? ನಿಮ್ಮ ರಾಶಿಗಿದೆಯೇ ಲಕ್ಷ್ಮಿ ಕೃಪೆ..?

ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಪಡೆಯುವುದು ತುಂಬಾ ಕಠಿಣ. ಯಾಕೆಂದರೆ ಆಕೆ ಚಂಚಲ ಸ್ವಭಾವದವಳು. ಆಕೆಯ ಮನಸ್ಸಿಗೆ ಅನುಗುಣವಾಗಿ ಆಕೆ ಒಲಿಯುತ್ತಾಳೆ. ಆದರೆ ಈ 4 ರಾಶಿಯವರು ಲಕ್ಷ್ಮಿ ಪುತ್ರರು. ಈ ರಾಶಿಯವರು ಲಕ್ಷ್ಮಿಯ ಆಶೀರ್ವಾದ ಪಡೆಯಲು ಶ್ರಮಿಸಬೇಕೆಂದಿಲ್ಲ. ಲಕ್ಷ್ಮಿ ಆಶೀರ್ವಾದವಿರುವ ರಾಶಿಗಳಾವುವು..? ಇವರು ಖಂಡಿತ ಅದೃಷ್ಟ ಶಾಲಿಗಳು..!
Lakshmi devi

Related posts

ನೀಟ್ ಹಗರಣದ ಹಿಂದೆ ಆರ್‌ಎಸ್‌ಎಸ್ ಮತ್ತು ಬಿಜೆಪಿ ಸಂಚು: ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ

SIRಗೆ ಸರ್ಕಾರ ಯಾರಿಗೂ ಒತ್ತಾಯ ಮಾಡುತ್ತಿಲ್ಲ: ಗೃಹ ಸಚಿವ ಪ್ರಿಯಾಂಕ್ ಖರ್ಗೆ

July 5, 2026
ರಾಜ್ಯದಲ್ಲಿ ಇಂದು ಭಾರೀ ಮಳೆ ಸಾಧ್ಯತೆ; ಕರಾವಳಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್

ರಾಜ್ಯದಲ್ಲಿ ಇಂದು ಭಾರೀ ಮಳೆ ಸಾಧ್ಯತೆ; ಕರಾವಳಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್

July 5, 2026

ಯಾವ ವ್ಯಕ್ತಿಯು ಶ್ರದ್ಧಾ, ಭಕ್ತಿಯಿಂದ ಲಕ್ಷ್ಮಿ ದೇವಿಯನ್ನು ಪೂಜಿಸುತ್ತಾರೋ ಆ ವ್ಯಕ್ತಿಗಳು ತಮ್ಮ ಜೀವನದಲ್ಲಿ ಎಂದಿಗೂ ಹಣದ ಸಮಸ್ಯೆಯನ್ನು ಎದುರಿಸುವುದಿಲ್ಲ ಎನ್ನುವ ನಂಬಿಕೆಯಿದೆ. ಧರ್ಮಗ್ರಂಥಗಳಲ್ಲಿ, ಲಕ್ಷ್ಮಿ ದೇವಿ ಪೂಜೆಯ ವಿಶೇಷ ಪ್ರಾಮುಖ್ಯತೆಯನ್ನು ಶುಕ್ರವಾರ ಮತ್ತು ದೀಪಾವಳಿಯಲ್ಲಿ ತಿಳಿಸಲಾಗಿದೆ. ಯಾರು ಲಕ್ಷ್ಮಿ ದೇವಿಯನ್ನು ತಮ್ಮ ಶುದ್ಧ ಹೃದಯದಿಂದ ಪೂಜಿಸುತ್ತಾರೋ ಸಮಾಜದಲ್ಲಿ ಅವರ ಪ್ರಾಬಲ್ಯತೆ ಶಾಶ್ವತವಾಗಿರುತ್ತದೆ ಮತ್ತು ಅವರು ಶ್ರೀಮಂತರಾಗುತ್ತಾರೆ ಎನ್ನುವ ನಂಬಿಕೆಯಿದೆ

ಕೆಲವರು ಲಕ್ಷ್ಮಿಯ ಅಪಾರ ಪೂಜೆಯ ಮೂಲಕ ಆಕೆಯ ಕೃಪಾಕಟಾಕ್ಷವನ್ನು ಪಡೆದರೆ, ಇನ್ನು ಕೆಲವು ವ್ಯಕ್ತಿಗಳು ಹುಟ್ಟುತ್ತಲೇ ಲಕ್ಷ್ಮಿ ಪುತ್ರರಾಗಿ ಹುಟ್ಟಿರುತ್ತಾರೆ. ಅವರು ಲಕ್ಷ್ಮಿಯನ್ನು ಒಲಿಸಿಕೊಳ್ಳಲು ಹರಸಾಸಹ ಪಡಬೇಕೆಂದೇನಿಲ್ಲ. ಈ ಅದೃಷ್ಟ ವ್ಯಕ್ತಿಗಳು ಯಾವ ರಾಶಿಯಲ್ಲಿ ಜನಿಸಿರುತ್ತಾರೆ ಗೊತ್ತಾ..? ಯಾವ ರಾಶಿಯವರ ಮೇಲೆ ಲಕ್ಷ್ಮಿ ದೇವಿಯ ಆಶೀರ್ವಾದ ಸದಾಕಾಲ ಇರುತ್ತದೆ ಗೊತ್ತಾ..? ತಮ್ಮ ಜೀವನದುದ್ದಕ್ಕೂ ಹಣದ ಸಮಸ್ಯೆಯನ್ನು ಹೊಂದಿರದ, ಸಮಾಜಿಕ ಗೌರವಕ್ಕೆ ಧಕ್ಕೆ ಬಾರದಂತೆ ಜೀವನ ನಡೆಸುವ ಆ ರಾಶಿಯವರು ಯಾರು ಗೊತ್ತಾ..? ಈ 4 ರಾಶಿಯವರು ಲಕ್ಷ್ಮಿ ಪುತ್ರರಾಗಿರುತ್ತಾರೆ.

1. ವೃಷಭ ರಾಶಿ:
ಇದು ರಾಶಿಚಕ್ರದ ಎರಡನೇ ರಾಶಿ ಚಿಹ್ನೆ. ಈ ಚಿಹ್ನೆಯ ಅಧಿಪತಿ ಶುಕ್ರನಾಗಿರುತ್ತಾರೆ. ಈ ರಾಶಿಚಕ್ರ ಚಿಹ್ನೆಗಳ ಜನರ ಮೇಲೆ ಶುಕ್ರನ ಪರಿಣಾಮ ಯಾವಾಗಲೂ ಇರುತ್ತದೆ. ವೈದಿಕ ಜ್ಯೋತಿಷ್ಯದಲ್ಲಿ, ಶುಕ್ರ ಗ್ರಹವನ್ನು ಸಂತೋಷ, ಸಂಪತ್ತು, ವೈಭವ ಮತ್ತು ಸಮೃದ್ಧಿಯ ಅಂಶವೆಂದು ಪರಿಗಣಿಸಲಾಗುತ್ತದೆ. ಈ ರಾಶಿಚಕ್ರದ ಅಧಿಪತಿಯಾದ ಶುಕ್ರನ ಶುಭ ಪ್ರಭಾವವು ಈ ರಾಶಿಚಕ್ರದ ಮೇಲೆ ಪರಿಣಾಮ ಬೀರುತ್ತದೆ. ವೃಷಭ ರಾಶಿಯ ಜನರು ಯಾವಾಗಲೂ ಅದೃಷ್ಟದಿಂದ ಆಶೀರ್ವದಿಸುತ್ತಾರೆ. ಈ ರಾಶಿಚಕ್ರದ ಜನರು ಎಂದಿಗೂ ಹಣದ ಕೊರತೆಯನ್ನು ಅನುಭವಿಸುವುದಿಲ್ಲ. ಇವರಿಗೆ ಶುಕ್ರನ ಆಶೀರ್ವಾದದೊಂದೊಗೆ ಲಕ್ಷ್ಮಿಯ ಆಶೀರ್ವಾದವೂ ಇರುತ್ತದೆ. ವೃಷಭದವರು ಶ್ರೀಮಂತರಾಗಲು ಅಷ್ಟೇನೂ ಕಷ್ಟ ಪಡಬೇಕೆಂದೇನಿಲ್ಲ.

2. ಕಟಕ ರಾಶಿ:
ಕಟಕ ರಾಶಿಯಲ್ಲಿ ಜನಿಸಿದವರಿಗೆ ಶ್ರೀಮಂತರಾಗಲು ಮತ್ತು ವಿವಿಧ ಐಷಾರಾಮಿ ಜೀವನವನ್ನು ನಡೆಸಲು ಹೆಚ್ಚು ಅವಕಾಶವಿರುತ್ತದೆ. ಈ ರಾಶಿಚಕ್ರದ ಜನರು ಅದೃಷ್ಟವನ್ನು ಯಾವಾಗಲೂ ತಮ್ಮ ಜೊತೆಯಲ್ಲೇ ಇಟ್ಟುಕೊಂಡಿರುತ್ತಾರೆ. ಈ ರಾಶಿಚಕ್ರದ ಜನರ ಮೇಲೆ ಲಕ್ಷ್ಮಿ ದೇವಿಯ ಅನುಗ್ರಹವು ಯಾವಾಗಲೂ ಇರುತ್ತದೆ. ಛಲಗಾರರಾದ ಇವರು ಲಕ್ಷ್ಮಿ ಪುತ್ರರಾಗಿರುತ್ತಾರೆ. ಇವರು ಯಾವುದೇ ಕೆಲಸವನ್ನು ಮಾಡಿದರೂ ಲಕ್ಷ್ಮಿಯ ಆಶೀರ್ವಾದದಿಂದ ಯಶಸ್ಸನ್ನು ಪಡೆಯುತ್ತಾರೆ. ಲಕ್ಷ್ಮಿಯನ್ನು ಪೂಜಿಸಿದರೆ ಇವರಿಗೆ ಸಕಲ ಐಶ್ವರ್ಯಗಳು ದೊರೆಯುವುದು.

3. ಸಿಂಹ ರಾಶಿ:
ಶ್ರಮ ಜೀವಿಗಳಾದ ಸಿಂಹ ರಾಶಿಯವರು ತಮ್ಮ ಐಷಾರಾಮಿ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ಶ್ರಮಿಸುತ್ತಾರೆ. ಆದರೆ ಇವರಿಗೆ ಲಕ್ಷ್ಮಿಯ ಆಶೀರ್ವಾದ ಇರುವುದರಿಂದ ಇವರೆಲ್ಲಾ ಪ್ರಯತ್ನಗಳು ಫಲದಾಯಕವಾಗಿರುತ್ತದೆ. ಲಕ್ಷ್ಮಿ ದೇವಿಯ ಆಶೀರ್ವಾದದಿಂದ ಎಲ್ಲಾ ವಿಷಯಗಳಲ್ಲೂ ಅವರು ಯಶಸ್ಸನ್ನು ಸಾಧಿಸುತ್ತಾರೆ. ಇವರು ಭಕ್ತಿಯಿಂದ ಒಮ್ಮೆ ಲಕ್ಷ್ಮಿಯನ್ನು ಪೂಜಿಸಿದರೆ ಸಾಕು, ಎಲ್ಲಾ ಐಶ್ವರ್ಯವನ್ನು ಪಡೆದುಕೊಳ್ಳುತ್ತಾರೆ.

4. ವೃಶ್ಚಿಕ ರಾಶಿ:
ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಪಡೆದ ರಾಶಿಯಲ್ಲಿ ವೃಶ್ಚಿಕ ರಾಶಿಯೂ ಒಂದು. ಈ ರಾಶಿಚಕ್ರದವರು ಹೆಚ್ಚು ಹಣವನ್ನು ಸಂಪಾದಿಸುವ ಆಶಯವನ್ನು ಹೊಂದಿರುತ್ತಾರೆ. ಆದರೆ ಅವರು ಸಂಪಾದನೆಗೆ ಅಷ್ಟೊಂದು ಶ್ರಮಿಸಬೇಕಾಗಿಲ್ಲ. ಇವರು ಸರಳವಾಗಿ ಲಕ್ಷ್ಮಿಯನ್ನು ಪೂಜಿಸಿದರೂ ಯಾವುದೇ ಹಣ ಸಮಸ್ಯೆ ಇವರಿಗೆ ಎದುರಾಗುವುದಿಲ್ಲ. ಯಾವುದೇ ಕೆಲಸವನ್ನು ಮಾಡಿದರೂ ಅವರು ಅದರಿಂದ ಹಣವನ್ನು ಗಳಿಸುತ್ತಾರೆ. ಯಾವುದೇ ಕೆಲಸವನ್ನು ಆರಂಭಿಸುವ ಮುನ್ನ ಲಕ್ಷ್ಮಿಯನ್ನು ಪೂಜಿಸಿ ಅರಂಭಿಸುವುದರಿಂದ ಆ ಕೆಲಸದಲ್ಲಿ ನೀವು ಆರ್ಥಿಕ ಲಾಭವನ್ನು ಪಡೆದುಕೊಳ್ಳುವಿರಿ.
Lakshmi devi

ಶ್ರೀ ಕ್ಷೇತ್ರ ದುರ್ಗಾಪರಮೇಶ್ವರೀ ಕಟೀಲು
ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ ತಾಂತ್ರಿಕ ಶ್ರೀ ಜ್ಞಾನೇಶ್ವರ್ ರಾವ್ 8548998564 ದೈವಶಕ್ತಿ ಜ್ಯೋತಿಷ್ಯರು ಅಥರ್ವಣವೇದ ಆಧಾರಿತ ಅಷ್ಟಮಂಗಳ ಪ್ರಶ್ನೆ ಅಂಜನ ಶಾಸ್ತ್ರ ದೈವಪ್ರಶ್ನೆ ಜಾತಕ ಆಧಾರಿತವಾಗಿ ನಿಮ್ಮ ಸಮಸ್ಯೆಗಳಿಗೆ ಶ್ರೀ ಕಟೀಲು ದುರ್ಗಾಪರಮೇಶ್ವರಿ ಅಮ್ಮನವರ ದೈವಿಕ ಪೂಜಾ ಶಕ್ತಿಯಿಂದ ನಿಮ್ಮ ಸಮಸ್ಯೆಗಳಿಗೆ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದಿಂದ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ದೂರವಾಣಿ ಸಂಖ್ಯೆ:-call/WhatsApp 85489 98564

ಈ ಮೇಲಿನ 4 ರಾಶಿಯವರ ಮೇಲೆ ಸದಾಕಾಲ ಲಕ್ಷ್ಮಿಯ ಆಶೀರ್ವಾದ ಇರುವುದರಿಂದ ಅವರು ಹೆಚ್ಚು ಲಕ್ಷ್ಮಿ ದೇವಿಯನ್ನು ಪೂಜಿಸಬೇಕೆಂದಿಲ್ಲ. ಆಗಾಗ ಸರಳವಾಗಿ ಲಕ್ಷ್ಮಿಯನ್ನು ಪೂಜಿಸಿ, ತಮ್ಮ ರಾಶಿಗೆ ಅನುಗುಣವಾಗಿ ಲಕ್ಷ್ಮಿ ಮಂತ್ರವನ್ನು ಪಠಿಸಿದರೆ ಸಾಕು. ತಾನಾಗಿಯೇ ಅವರು ಹಣವನ್ನು ಪಡೆಯುತ್ತಾರೆ.

Tags: BlessingLakshmi Devi
ShareTweetSendShare
Join us on:

Related Posts

ನೀಟ್ ಹಗರಣದ ಹಿಂದೆ ಆರ್‌ಎಸ್‌ಎಸ್ ಮತ್ತು ಬಿಜೆಪಿ ಸಂಚು: ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ

SIRಗೆ ಸರ್ಕಾರ ಯಾರಿಗೂ ಒತ್ತಾಯ ಮಾಡುತ್ತಿಲ್ಲ: ಗೃಹ ಸಚಿವ ಪ್ರಿಯಾಂಕ್ ಖರ್ಗೆ

by Shwetha
July 5, 2026
0

SIR ಪ್ರಕ್ರಿಯೆಯಲ್ಲಿ ಲೋಪಗಳಾಗುತ್ತಿವೆ ಎಂಬ ವಿಪಕ್ಷಗಳ ಆರೋಪಕ್ಕೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾನೂನು ಮೀರಿ ಯಾರೂ ಏನನ್ನೂ ಮಾಡಲು...

ರಾಜ್ಯದಲ್ಲಿ ಇಂದು ಭಾರೀ ಮಳೆ ಸಾಧ್ಯತೆ; ಕರಾವಳಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್

ರಾಜ್ಯದಲ್ಲಿ ಇಂದು ಭಾರೀ ಮಳೆ ಸಾಧ್ಯತೆ; ಕರಾವಳಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್

by Shwetha
July 5, 2026
0

ರಾಜ್ಯದಲ್ಲಿ ಮುಂಗಾರು ಚುರುಕುಗೊಂಡಿದ್ದು, ಇಂದು ಮತ್ತು ನಾಳೆ ಹಲವು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ,...

ನಾಡಹಬ್ಬದ ಘನತೆಗೆ ಧಕ್ಕೆ ತರಬೇಡಿ, ಕರಾವಳಿ ಸಂಸ್ಕೃತಿ ಪ್ರದರ್ಶನದ ವಸ್ತುವಲ್ಲ : ದಸರೆಯಲ್ಲಿ ಕಂಬಳದ ಪ್ರದರ್ಶನ ಬೇಡ -ಮೈಸೂರು ರಾಜವಂಶಸ್ಥ ಯದುವೀರ್ ಒಡೆಯರ್ ತೀವ್ರ ವಿರೋಧ

ನಾಡಹಬ್ಬದ ಘನತೆಗೆ ಧಕ್ಕೆ ತರಬೇಡಿ, ಕರಾವಳಿ ಸಂಸ್ಕೃತಿ ಪ್ರದರ್ಶನದ ವಸ್ತುವಲ್ಲ : ದಸರೆಯಲ್ಲಿ ಕಂಬಳದ ಪ್ರದರ್ಶನ ಬೇಡ -ಮೈಸೂರು ರಾಜವಂಶಸ್ಥ ಯದುವೀರ್ ಒಡೆಯರ್ ತೀವ್ರ ವಿರೋಧ

by Shwetha
July 5, 2026
0

ಮೈಸೂರು: ವಿಶ್ವಪ್ರಸಿದ್ಧ ಮೈಸೂರು ದಸರಾ ಮಹೋತ್ಸವದ ಇತಿಹಾಸ ಮತ್ತು ಪರಂಪರೆಗೆ ಧಕ್ಕೆ ತರುವಂತಹ ಯಾವುದೇ ಹೊಸ ಪ್ರಯೋಗಗಳನ್ನು ಮಾಡಬೇಡಿ ಎಂದು ಮೈಸೂರು ರಾಜವಂಶಸ್ಥ ಹಾಗೂ ಸಂಸದ ಯದುವೀರ್...

ಡಿಕೆಶಿ ಕಾಲ್ಗುಣಕ್ಕೇ ರಾಜ್ಯಕ್ಕೆ ಬಂತು ಭೀಕರ ಬರ:ಬರಗಾಲದಲ್ಲೂ ಬೆಂಗಳೂರು ಬಿಟ್ಟು ಕದಲದ ಮಂತ್ರಿಗಳು: ಸರ್ಕಾರದ ಬೇಜವಾಬ್ದಾರಿತನಕ್ಕೆ ಅಶೋಕ್ ಆಕ್ರೋಶ

ಡಿಕೆಶಿ ಕಾಲ್ಗುಣಕ್ಕೇ ರಾಜ್ಯಕ್ಕೆ ಬಂತು ಭೀಕರ ಬರ:ಬರಗಾಲದಲ್ಲೂ ಬೆಂಗಳೂರು ಬಿಟ್ಟು ಕದಲದ ಮಂತ್ರಿಗಳು: ಸರ್ಕಾರದ ಬೇಜವಾಬ್ದಾರಿತನಕ್ಕೆ ಅಶೋಕ್ ಆಕ್ರೋಶ

by Shwetha
July 5, 2026
0

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆ ಸಂಪೂರ್ಣ ಕೈಕೊಟ್ಟು ಅನ್ನದಾತರು ಕಂಗಾಲಾಗಿರುವ ಬೆನ್ನಲ್ಲೇ, ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ರಾಜ್ಯ ಸರ್ಕಾರದ ವಿರುದ್ಧ, ಅದರಲ್ಲೂ ವಿಶೇಷವಾಗಿ...

ಮುದ್ದೆ ಚಪಾತಿಗೆ ಮಸ್ತ್ ಕಾಂಬಿನೇಷನ್- ಹೊಟೇಲ್ ಶೈಲಿಯ ಮಟನ್ ಗ್ರೇವಿ : ಬ್ಯಾಚುಲರ್ಸ್ ರೆಸಿಪಿ ಒಮ್ಮೆ ಟ್ರೈ ಮಾಡಿ

ಮುದ್ದೆ ಚಪಾತಿಗೆ ಮಸ್ತ್ ಕಾಂಬಿನೇಷನ್- ಹೊಟೇಲ್ ಶೈಲಿಯ ಮಟನ್ ಗ್ರೇವಿ : ಬ್ಯಾಚುಲರ್ಸ್ ರೆಸಿಪಿ ಒಮ್ಮೆ ಟ್ರೈ ಮಾಡಿ

by Shwetha
July 5, 2026
0

ಮಟನ್ ಅಡುಗೆ ಮಾಡುವುದು ಎಂದರೆ ದೊಡ್ಡ ಕೆಲಸ ಎಂಬ ಭಾವನೆ ಅನೇಕರಲ್ಲಿದೆ. ಅದರಲ್ಲೂ ಬ್ಯಾಚುಲರ್ ಆಗಿರುವವರಿಗೆ ಅಥವಾ ಅಡುಗೆ ಮನೆಯಲ್ಲಿ ಹೆಚ್ಚು ಸಮಯ ಕಳೆಯಲು ಇಷ್ಟಪಡದವರಿಗೆ ಮಟನ್...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram