BMTC | ಪರಿಸರ ಸ್ನೇಹ್ನಿಯಾಗ್ತಿದೆ ಬಿಎಂಟಿಸಿ.. ಆದ್ರೆ
ಬೆಂಗಳೂರು : ರಾಜ್ಯ ರಾಜಧಾನಿಯ ನರನಾಡಿ ಬಿಎಂಟಿಸಿ ಇದೀಗ ಪರಿಸರ ಸ್ನೇಹಿಯಾಗುತ್ತಿದೆ.
ನಗರದಲ್ಲಿ ಈಗಾಗಲೇ 300ಕ್ಕೂ ಹೆಚ್ಚು ಎಲೆಕ್ಟ್ರಿಕ್ ಬಸ್ ಗಳು ರಸ್ತೆಗಿಳಿದಿದ್ದು, ಈ ವರ್ಷದ ಅಂತ್ಯಕ್ಕೆ ಇನ್ನೂ 1000 ಇವಿ ಬಸ್ ಗಳು ರಸ್ತೆಗೆ ಇಳಿಯಲಿವೆ.
ಸದ್ಯ ನಗರದಲ್ಲಿ 300 ಕ್ಕೂ ಹೆಚ್ಚು ಎಲೆಕ್ಟ್ರಿಕ್ ಬಸ್ ಗಳು ಸಾರ್ವಜನಿಕರ ಸೇವೆಗೆ ಲಭ್ಯವಿದೆ.
ಈ ವರ್ಷದಾಂತ್ಯಕ್ಕೆ ಹೊಸದಾಗಿ 921 ಇವಿ ಬಸ್ ಗಳನ್ನು ರಸ್ತೆಗೆ ಇಳಿಸಲು ಬಿಎಂಟಿಸಿ ಯೋಜನೆ ಮಾಡಿಕೊಂಡಿದೆ.
ಈ ಬಸ್ ಗಳಿಂದ ಪರಿಸರಕ್ಕೆ ಪ್ರಯಾಣಿಕರಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ.

ಆದ್ರೆ ಇದರಿಂದ ಹೊಸ ಪ್ರಶ್ನೆ ಮತ್ತು ಸಮಸ್ಯೆ ಹುಟ್ಟಿಕೊಂಡಿದೆ.
ಅದು ಏನಂದರೇ ಹೊಸ ಬಸ್ ಗಳು ಬಂದರೇ ಹಳೆಯ ಡಿಸೇಲ್ ಬಸ್ ಗಳ ಗತಿಯೇನು ?
ಜೊತೆಗೆ ಬಿಎಂಟಿಸಿಯನ್ನ ಖಾಸಗೀಕರಣ ಮಾಡಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಮುಂದಾಗಿದ್ದು, ಮುಂದೆ ನೌಕರರು ಬೀದಿಪಾಲಾಗುತ್ತಾರೆ.
ಬಿಎಂಟಿಸಿ ಕಾರ್ಮಿಸಕ ಬದುಕು ಅತಂತ್ರವಾಗಲಿ ಅಂತಾ ಬಿಎಂಟಿಸಿ ಕಾರ್ಮಿಕರ ಆತಂಕವಾಗಿದೆ.