ಕಾರವಾರ: 40 ಜನರಿದ್ದ ಮೀನುಗಾರಿಕಾ ಬೋಟ್ ನಾಪತ್ತೆಯಾಗಿರುವ ಘಟನೆ ನಡೆದಿದೆ.
ಅರಬ್ಬಿ ಸಮುದ್ರದಲ್ಲಿ (Arabian Sea) ಹವಾಮಾನ ವೈಪರೀತ್ಯದಿಂದಾಗಿ ಬೋಟ್ ಮುಳುಗಿದ್ದು, ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಬೆಲೇಕೇರಿಯಲ್ಲಿ (Bilikere) ನಡೆದಿದೆ.
ಗೋವಾ ಮೂಲದ ಬೋಟ್ ಇದಾಗಿದ್ದು ,ಇಂಜಿನ್ ನಲ್ಲಿ ಸಮಸ್ಯೆಯಾಗಿ ಗಾಳಿಯ ರಭಸಕ್ಕೆ ತೇಲಿ ಹೋಗಿದೆ. ಹೀಗಾಗಿ ಕೋಸ್ಟ್ ಗಾರ್ಡ್ (Coast Guard) ಸಿಬ್ಬಂದಿ ಬೋಟ್ ಹುಡುಕುವ ಕಾರ್ಯಾಚರಣೆ ಆರಂಭಿಸಿದ್ದಾರೆ. ಸದ್ಯ ನಾಲ್ವತ್ತು ಜನ ಮೀನುಗಾರರ ರಕ್ಷಣಾ ಕಾರ್ಯಕ್ಕೆ ತೊಡಕಾಗಿದೆ.