ಗಡಿಯಲ್ಲಿ ಸನ್ನದ್ಧವಾದ ಬೊಫೋರ್ಸ್ ಆರ್ಮಿ – ಚೀನಾಗೆ ಶುರುವಾದ ನಡುಕ.
ಕಳೆದ ಐದಾರು ವರ್ಷಗಳಿಂದ ಬೂದಿ ಮುಚ್ಚಿದ ಕೆಂಡದಂತಿರುವ ಇಂಡೋ ಚೀನಾ ಗಡಿಯಲ್ಲಿ ಮತ್ತೆ ಹೊಗೆಯಾಡುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಅದಕ್ಕೆ ಕಾರಣ ಬೋಫೋರ್ಸ್.. ಭಾರತೀಯ ಸೈನಿಕರ ಬತ್ತಳಿಕೆ ಸೇರಿರುವ ಹೊಸ ಅಸ್ತ್ರ ಬೊಪೋರ್ಸ್ ಗನ್ನುಳ ಜೊತೆ ಬಾರತೀಯ ಆರ್ಮಿ ಚೀನಾ ಗಡಿ ಪಕ್ಕದಲ್ಲಿಯೇ ಯುದ್ಧ ತಾಲೀಮು ನಡೆಸುತ್ತಿರುವುದು ಚೀನಾಗೆ ನುಡುಕ ಸೃಷ್ಟಿಸುತ್ತಿದೆ.
ಅರುಣಾಚಲದ ಎಲ್ ಓ ಸಿ ಗಡಿಯಲ್ಲಿ ಎಂ- 777 ಹೊವಿಟ್ಜರ್ ಮತ್ತು ಬೊಪೋರ್ಸ್ ಗನ್ನುಗಳೊಂದಿಗೆ ಸೈನಿಕರು ತರಬೇತಿ ಶುರುವಿಟ್ಟುಕೊಂಡಿದ್ದಾರೆ. ಸಾಮಾನ್ಯವಾಗಿ ಯದ್ಧಗಳಂತಹ ಸಂಧರ್ಭಗಳಲ್ಲಿ ಈ ಗನ್ನುಗಳನ್ನ ಅತಿ ಹೆಚ್ಚಾಗಿ ಬಳಸುತ್ತಾರೆ. ಸಾಕಷ್ಟು ದೂರದ ಮುಲಕವೇ ಯುದ್ಧ ಟ್ಯಾಂಕರ್ ಮತ್ತು ಶಿಬಿರಗಳನ್ನ ನಾಶ ಮಾಡಲು ಈ ಗನ್ನಗಳನ್ನ ಬಳಸುತ್ತಾರೆ..
ಸುಮಾರು 30 ಕಿಮಿ ದೂರದಿಂದಲೂ ಸಹ ಶತ್ರುಗಳ ಗುರಿಯನ್ನ ನಿಖರವಾಗಿ ತಲುಪ ಬಹುದಾಗಿದೆ. 2014 – 2015 ಅಮೇರಿಕಾ ಜೊತೆ ಮಾಡಿಕೊಂಡಿದ್ದ ಒಪ್ಪಂದದಿಂದಾಗಿ ಭಾರತಕ್ಕೆ 145 ಬೊಪೋರ್ಸ್ ಗನ್ನುಗಳು ಭಾರತಕ್ಕೆ ಬಂದಿದ್ದವು ಈ ಗನ್ನುಗಳು ಬರೊಬ್ಬರಿ 4000 ಕೆ ಜಿ ತೂಕವನ್ನ ಹೊಂದಿವೆ.
ಚೀನಾ ಯಾವತ್ತಿದ್ದರು ಭಾರತಕ್ಕೆ ಮಗ್ಗಲು ಮುಳ್ಳಾಗಿ ಕಾಡುವುದು ಖಚಿತ ಹಾಗಾಗಿ ಅದನ್ನ ಚಾಣಾಕ್ಷತನದಿಂದ ಎದುರಿಸಲು ಭಾರತ ಎಲ್ಲ ಕಡೆಗಳಿಂದಲೂ ತನ್ನ ಶಕ್ತಿಯನ್ನ ಹೆಚ್ಚುಮಾಡಿಕೊಳ್ಳುತ್ತಿದೆ.