ಮಾಲೆ ಧರಿಸಿ ಅಯ್ಯಪ್ಪ ಸ್ವಾಮಿ ದರ್ಶನ ಪಡೆದ ಅಜಯ್ ದೇವಗನ್

1 min read

ಮಾಲೆ ಧರಿಸಿ ಅಯ್ಯಪ್ಪ ಸ್ವಾಮಿ ದರ್ಶನ ಪಡೆದ ಅಜಯ್ ದೇವಗನ್

ಬಾಲಿವುಡ್ ನಟ ಅಜಯ್ ದೇವಗನ್ ಬುಧವಾರ ಶಬರಿಮಲೆಯ ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ್ದಾರೆ. ದೇವಗನ್  ದೇವಸ್ಥಾನಕ್ಕೆ ಸಾಂಪ್ರಾದಾಯಿಕ ಧಿರಿಸಿನಲ್ಲಿ ಬೇಟಿ ಕೊಟ್ಟದಿರುವ ಫೊಟೋಗಳು ವೈರಲ್ ಆಗಿವೆ.  52 ವರ್ಷ ವಯಸ್ಸಿನ ಅಜಯ್ ಕಪ್ಪು ವಸ್ತ್ರವನ್ನ ಧರಿಸಿ ಹಿರುಮುಡಿ ಹೊತ್ತು ಪಂಪಾ ನದಿಯಿಂದ ಶಬರಿಮಲೆ ಬೆಟ್ಟಕ್ಕೆ ಚಾರಣ ನಡೆಸಿದ್ದಾರೆ.

ಮೂಲಗಳ ಪ್ರಕಾರ, 11 ದಿನಗಳ ಕಾಲ, ದೇವಗನ್ ನೆಲದ (ಚಾಪೆ) ಮೇಲೆ ಮಲಗಿ ಮತ್ತು ಕಪ್ಪು ಬಟ್ಟೆ ಧರಿಸಿದ್ದರು. ಸಂಪ್ರದಾಯದಂತೆ  ಊಟ ಉಪಹಾರ ಪೂಜೆ ಭಜನೆ ಸೇರಿದಂತೆ ಹಲವು ನಿಯಮಗಳನ್ನ ಪಾಲಿಸಿ ಅಯ್ಯಪ್ಪನ ಆಶಿರ್ವಾದ ಪಡೆದಿದ್ದಾರೆ.  ವೈರಲ್ ಚಿತ್ರದಲ್ಲಿ, ಅಜಯ್ ಬರಿಗಾಲಿನಲ್ಲಿ  ನಡೆಯುವುದನ್ನ ಕಾಣಬಹುದು, ಇದು ಸಹ ಆಚರಣೆಯ ಒಂದು ಭಾಗ.

ಅಜಯ್ ದೇವಗನ್ ಅಭಿನಯದ RRR  ಸಿನಿಮಾ ಈಗಾಗಲೇ ಬಿಡುಗಡೆಯಾಗಬೇಕಿತ್ತು.  ಕರೋನಾ ಕಾರಣದಿಂದ ಚಿತ್ರ ಬಿಡುಗಡೆಯಾಗಿಲ್ಲ . ಕೈತಿ, ರೈಡ್ 2 ಮತ್ತು ಸಿಂಗಮ್ 3 ಸೇರಿದಂತೆ ಹಲವಾರು ಪ್ರಾಜೆಕ್ಟ್‌ಗಳಲ್ಲಿ ಸಹ ದೇವಗನ್ ಕೈ ಜೊಡಿಸಿದ್ದಾರೆ.

ಸಮನ್ವಿ ಸಾವಿಗೆ ಲಾರಿ ಚಾಲಕನ ಅಜಾಗರೂಕತೆ ಕಾರಣ

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd