ಬಾಲಿವುಡ್ ನಟ ಅರ್ಜುನ್ ರಾಂಪಾಲ್ ಗೆ ಕೊರೋನಾ ಪಾಸಿಟಿವ್: ನಾವೆಲ್ಲರೂ ಒಟ್ಟಾಗಿ ಕೊರೋನಾವನ್ನು ತೊಲಗಿಸೋಣ – ರಾಂಪಾಲ್ ಟ್ವೀಟ್

1 min read
Bollywood actor Arjun Rampal test Corona Positive

ಬಾಲಿವುಡ್ ನಟ ಅರ್ಜುನ್ ರಾಂಪಾಲ್ ಗೆ ಕೊರೋನಾ ಪಾಸಿಟಿವ್: ನಾವೆಲ್ಲರೂ ಒಟ್ಟಾಗಿ ಕೊರೋನಾವನ್ನು ತೊಲಗಿಸೋಣ – ರಾಂಪಾಲ್ ಟ್ವೀಟ್

ಬಾಲಿವುಡ್ ತಾರೆಯರು ಕೊರೋನಾ ವೈರಸ್‌ ಸೋಂಕಿಗೆ ತುತ್ತಾಗುತ್ತಿದ್ದಾರೆ. ಕೆಲವು ದಿನಗಳ ಹಿಂದೆ ನಟ ಸೋನು ಸೂದ್ ಗೆ ಕೊರೋನಾ ಪಾಸಿಟಿವ್ ಎಂಬ ಸುದ್ದಿ ಬಂದಿದ್ದರೆ, ಬಳಿಕ ಅರ್ಜುನ್ ರಾಂಪಾಲ್ ಅವರಿಗೆ ಸಹ ಕೊರೋನಾ ಸೋಂಕು ದೃಢಪಟ್ಟಿದೆ. ‌
ಅರ್ಜುನ್ ರಾಂಪಾಲ್ ಸ್ವತಃ ತಾವೇ ತಮಗೆ ಕೋವಿಡ್ -19 ಪಾಸಿಟಿವ್ ಬಂದಿರುವ ಮಾಹಿತಿ ನೀಡಿದ್ದಾರೆ.
Bollywood actor Arjun Rampal test Corona Positive

ನನಗೆ ಕೋವಿಡ್ -19 ಪರೀಕ್ಷೆಯಲ್ಲಿ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಅರ್ಜುನ್ ತಮ್ಮ ಪೋಸ್ಟ್‌ನಲ್ಲಿ ಬರೆದಿದ್ದಾರೆ. ನಾನು ಕೊರೋನಾದ ಗುಣಲಕ್ಷಣಗಳನ್ನು ಹೊಂದಿಲ್ಲವಾದರೂ, ನನ್ನನ್ನು ಪ್ರತ್ಯೇಕಿಸಿಕೊಂಡಿದ್ದೇನೆ. ಔಷಧಿಗಳನ್ನು ಸಹ ತೆಗೆದುಕೊಳ್ಳುತ್ತಿದ್ದೇನೆ. ಅಗತ್ಯವಿರುವ ಎಲ್ಲಾ ಪ್ರೋಟೋಕಾಲ್‌ಗಳನ್ನು ನಾನು ಅನುಸರಿಸುತ್ತಿದ್ದೇನೆ. ಕಳೆದ ಹತ್ತು ದಿನಗಳಲ್ಲಿ ನನ್ನೊಂದಿಗೆ ಸಂಪರ್ಕಕ್ಕೆ ಬಂದ ಎಲ್ಲ ಜನರು, ಅಗತ್ಯವಿರುವ ಎಲ್ಲ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಿ‌ ಎಂದು ಅವರು ‌ಮನವಿ‌ ಮಾಡಿದ್ದಾರೆ.

ಇದು ನಮಗೆ ತುಂಬಾ ಕೆಟ್ಟ ಸಮಯ. ಆದರೆ ನಾವು ಇದರ ಬಗ್ಗೆ ಜಾಗೃತರಾಗಿದ್ದರೆ ಕೆಲವೇ ದಿನಗಳಲ್ಲಿ ನಾವು ಅದನ್ನು ತೊಡೆದುಹಾಕಬಹುದು. ಒಟ್ಟಾಗಿ ನಾವು ಕೊರೋನಾವನ್ನು ಸೋಲಿಸಬಹುದು ಎಂದು ಅವರು ಹೇಳಿದ್ದಾರೆ.

ಹಿಂದೆ ಕೊರೋನಾ ಸಮಯದಲ್ಲಿ ಲಾಕ್‌ಡೌನ್‌ ಜಾರಿಯಲಿದ್ದ ಸಮಯದಲ್ಲಿ ಜನರಿಗೆ ಸಹಾಯ ಮಾಡಿದ ನಟ ಸೋನು ಸೂದ್ ಅವರು ಕೂಡ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ. ಜನರಿಗೆ ನಿರಂತರವಾಗಿ ಸಹಾಯ ಮಾಡುವುದನ್ನು ಮುಂದುವರಿಸುತ್ತೇನೆ ಎಂದು ಸೋನು ಹೇಳಿದ್ದು, ಎಂತಹ ಪರಿಸ್ಥಿತಿಯಲ್ಲಿ, ಯಾರಿಗೆ ಸಹಾಯ ಬೇಕಾದರೂ, ಹೇಳಲು ಹಿಂಜರಿಯಬೇಡಿ ಎಂದು ವಿನಂತಿ ಮಾಡಿದ್ದಾರೆ.
Bollywood actor Arjun Rampal test Corona Positive

ವಿಕಿ ಕೌಶಲ್, ಕತ್ರಿನಾ ಕೈಫ್ ಮತ್ತು ಭೂಮಿ ಪೆಡ್ನೇಕರ್ ಕೂಡ ಹಿಂದಿನ ದಿನಗಳಲ್ಲಿ ಕೊರೋನಾ ಸೋಂಕಿಗೆ ತುತ್ತಾಗಿದ್ದರು. ಇದೀಗ ಈ ಸ್ಟಾರ್ ಗಳು ತಮಗೆ ಕೋವಿಡ್ -19 ಟೆಸ್ಟ್ ನೆಗೆಟಿವ್ಸ್ ಬಂದಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದಾರೆ.
ಕೊರೋನಾ ಸೋಂಕಿಗೆ ಸರಿಯಾದ ಸಮಯದಲ್ಲಿ ಚಿಕಿತ್ಸೆಯನ್ನು ಪ್ರಾರಂಭಿಸಿದರೆ ಮತ್ತು ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೆ ಸೋಲಿಸುವುದು ಕಷ್ಟದ ಕೆಲಸವಲ್ಲ ಎಂಬ ಸಂದೇಶವನ್ನು ಅವರು ನೀಡಿದ್ದಾರೆ. ಸೂಪರ್ ಸ್ಟಾರ್‌ಗಳಾದ ಅಕ್ಷಯ್ ಕುಮಾರ್ ಮತ್ತು ಕಾರ್ತಿಕ್ ಆರ್ಯನ್ ಕೂಡ ಈ ಹಿಂದೆ ಕೊರೋನಾ ಸೋಂಕಿನಿಂದ ಗುಣಮುಖರಾಗಿದ್ದಾರೆ.‌

#Bollywood #actor #ArjunRampal

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd