ಮೂರು ವರ್ಷಗಳ ಬಳಿಕ ಭಾರತಕ್ಕೆ ವಾಪಸ್ ಮರಳಿದ ಪ್ರಿಯಾಂಕ ಚೋಪ್ರಾ…
ಅಮೆರಿಕಾದ ಫೇಮಸ್ ಪಾಪ್ ಸಿಂಗರ್ ನಿಕ್ ಜಾನಸ್ ಜೊತೆಗೆ ಮದುವೆಯಾಗಿರುವ ಬಾಲಿವುಡ್ ನ ಸ್ಟಾರ್ ನಟಿ ಪ್ರಿಯಾಂಕಾ ಚೋಪ್ರಾ ಸದ್ಯ ಅಲ್ಲಿಯೇ ಸೆಟಲ್ ಆಗಿದ್ದಾರೆ.. ಮೂರು ವರ್ಷಗಳಿಂದ ತಾಯ್ನಾಡು ಭಾರತದಿಂದ ಅಂತರ ಕಾಯ್ಕೊಂಡಿದ್ದ ಪಿಗ್ಗಿ ಇದೀಗ ಭಾರತಕ್ಕೆ ಕಾಲಿಟ್ಟಿದ್ದಾರೆ..
ಪ್ರಿಯಾಂಕಾ ಚೋಪ್ರಾರರನ್ನ ನೋಡಲು ಮುಂಬೈ ಏರ್ಪೋರ್ಟ್ ಬಳಿ ಅಭಿಮಾನಿಗಳು ಮುಗಿಬಿದ್ದದ್ದು ಕಂಡು ಬಂತು..
ಸದ್ಯ ಪತಿ ಹಾಗೂ ಮಗಳ ಜೊತೆಗೆ ಅಮೆರಿಕಾದಲ್ಲೇ ಸೆಟಲ್ ಆಗಿದ್ದ ಪ್ರಿಯಾಂಕಾ ಚೋಪ್ರಾ ಹಾಲಿವುಡ್ ಸಿನಿಮಾಗಳಲ್ಲೂ ಸಕ್ರಿಯಾರಾಗಿದ್ದಾರೆ.. ಈ ನಡುವೆ ಬಾಲಿವುಡ್ ನ ಸ್ಟಾರ್ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರ ಸಿನಿಮಾದಲ್ಲಿ ನಟಿಸಲಿದ್ದು , ಇದೇ ಸಂಬಂಧ ಭಾರತಕ್ಕೆ ಬಂದಿಳಿದಿದ್ದಾರೆ ಎನ್ನಲಾಗ್ತಿದೆ.
ಕಳೆದ ವಾರ ದೀಪಾವಳಿ ಆಚರಣೆಯ ನಂತರ, ನಟಿ ಮುಂಬೈಗೆ ಮರಳಿದ್ದಾರೆ ಮತ್ತು ಚಲನಚಿತ್ರ ನಿರ್ಮಾಪಕರಾದ ಸಂಜಯ್ ಲೀಲಾ ಬನ್ಸಾಲಿ ಮತ್ತು ವಿಶಾಲ್ ಭಾರದ್ವಾಜ್ ಅವರೊಂದಿಗೆ ಸಂಭವನೀಯ ಸಹಯೋಗದ ಕುರಿತು ಚರ್ಚಿಸಲು ಅವರು ಈಗಾಗಲೇ ಯೋಜಿಸಿದ್ದಾರೆ ಎಂದು ಹೇಳಲಾಗ್ತಿದೆ.
bollywood actor priyanka chopra return india after three years