ಮತ್ತೊಬ್ಬ ಬಾಲಿವುಡ್ ನ ಯುವ ನಟ ಆತ್ಮಹತ್ಯೆಗೆ ಶರಣು..!
ಮುಂಬೈ: ಬಾಲಿವುಡ್ ನ ಉದಯೋನ್ಮುಖ ನಟ ಸುಶಾಂತ್ ಸಿಂಗ್ ನೇಣಿಗೆ ಶರಣಾದ ಬಳಿಕ ಅನೇಕರು ಅವರದ್ದೇ ಮಾದರಿಯಲ್ಲಿ ದುಡುಕಿ ನಿರ್ಧಾರಗಳನ್ನ ತೆಗೆದುಕೊಂಡು ಜೀವನವನ್ನ ಕೊನೆಗಾಣಿಸಿಕೊಂಡಿದ್ದಾರೆ. ಅದರಂತೆ ‘M S ಧೋನಿ ದಿ ಅನ್ ಟೋಲ್ಡ್ ಸ್ಟೋರಿ’ ಚಿತ್ರದಲ್ಲಿ ಸುಶಾಂತ್ ಸಿಂಗ್ ಜೊತೆಗೆ ಅಭಿನಯಿಸಿದ್ದ ಸಹನಟ ಸಂದೀಪ್ ನಹಾರ್ ಕೂಡ ಇದೀಗ ಆತ್ಮಹತ್ಯೆಗೆ ಶರಣಾಗಿದ್ದಾರೆ.
ತನ್ನ ಅಕ್ರಮ ಸಂಬಂಧ ತಿಳಿದ ಪತ್ನಿ ಕೊಲೆಗೆ ಸುಪಾರಿ ಕೊಟ್ಟ ನೀಚ..!
ಅಕ್ಷಯ್ ಕುಮಾರ್ ಅಭಿನಯದ ‘ಕೇಸರಿ’ ಸೇರಿದಂತೆ ಹಲವಾರು ಚಿತ್ರಗಳಲ್ಲಿ ಅಭಿನಯಿಸಿರುವ ನಟ ಸಂದೀಪ್ ನಹಾರ್ ಮುಂಬೈನ ತಮ್ಮ ನಿವಾಸದಲ್ಲಿಯೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮುಂಬೈನ ಗೊರೆಗಾಂವ್ ವೆಸ್ಟ್ ಎಸ್‌ಆರ್ವಿ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಕೋವಿಡ್ ಲಸಿಕೆ ನೀಡುವ ನೆಪದಲ್ಲಿ ಮನೆಗೆ ಬಂದ ನಕಲಿ ನರ್ಸ್ ಮಾಡಿದ್ದೇನ್ ನೋಡಿ..!
ಪೊಲೀಸರು ಪರಿಶೀಲನೆ ನಡೆಸಿದ್ದು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಸಂದೀಪ್ ನಹಾರ್ ಡೆತ್ ನೋಟ್ ನಲ್ಲಿ ಕೌಟುಂಬಿಕ ಕಿರುಕುಳದ ಬಗ್ಗೆ ಬರೆದಿದ್ದಾರೆ. ಅಲ್ಲದೆ, ಆತ್ಮಹತ್ಯೆ ಮೊದಲು ಫೇಸ್ಬುಕ್ನಲ್ಲಿ ತಮ್ಮ ಪತ್ನಿ ಮತ್ತು ಅತ್ತೆ ಕಿರುಕುಳದ ಬಗ್ಗೆ ವಿಡಿಯೋ ಮಾಡಿ ಹೇಳಿಕೊಂಡಿದ್ದಾರೆ. ಮನೆಯಲ್ಲಿ ನಿರಂತರ ಜಗಳಗಳಿಂದ ಬೇಸತ್ತುಹೋಗಿದ್ದ ಸಂದೀಪ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅಲ್ಲದೇ ತಮ್ಮಸಾವಿಗೆ ಯಾರನ್ನೂ ಸಹ ಹೊಣೆಯಾಗಿಸಬಾರದೆಂದು ಮನವಿ ಮಾಡಿಕೊಂಡಿದ್ದಾರೆ.








