ಸುಶಾಂತ್ ಸಿಂಗ್ ಸಾವಿನ ಪ್ರಕರಣ ಈಗಾಗಲೇ ಸಿಬಿಐ ಅಂಗಳದಲ್ಲಿದ್ದು, 7 ಮಂದಿಯ ವಿರುದ್ಧ ದೂರು ದಾಖಲಿಸಿಕೊಂಡಿರುವ ಸಿಬಿಐ ವಿಚಾರಣೆಯನ್ನು ಆರಂಭಿಸಿದೆ. ಇದರ ನಡುವೆ ಬಿಹಾರದಿಂದ ಮಹಾರಾಷ್ಟ್ರಗೆ ಕೇಸ್ ವರ್ಗಾವಣೆ ಮಾಡುವಂತೆ ಕೋರಿ ಸುಪ್ರೀಂ ಕೋರ್ಟ್‍ಗೆ ರಿಯಾ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಇಂದು ನ್ಯಾಯಾಲಯ ನಡೆಸಿದ್ದು, ಸುಶಾಂತ್ ಸಾವಿನ ಪ್ರಕರಣದಲ್ಲಿ ಈವರೆಗೆ ತಮ್ಮ ತನಿಖೆಯ ಭಾಗವಾಗಿ ಸರ್ಕಾರ ಏನು ಮಾಡಿದೆ ಎಂದು ವಿವರವಾದ ಅಫಿಡವಿಟ್ ಸಲ್ಲಿಸುವಂತೆ ಸೂಚಿಸಿದೆ. ಈ ಹಿನ್ನೆಲೆ ಮಹಾರಾಷ್ಟ್ರ ಸರ್ಕಾರ ಇಂದು ಸಂಜೆ ಅಥವಾ ನಾಳೆ ಬೆಳಿಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ಅಫಿಡವಿಟ್ ಸಲ್ಲಿಸಲಿದೆ ಎಂದು ಹೇಳಲಾಗಿದೆ. ಅಫಿಡವಿಟ್ ಅನ್ನು ಮೊಹರು ಕವರ್ನಲ್ಲಿ ಸಲ್ಲಿಸಬಹುದಾಗಿದೆ. ಅಷ್ಟೇ ಅಲ್ಲದೆ ಬಿಹಾರದಿಂದ ಮಹಾರಾಷ್ಟ್ರಗೆ ತನಿಖೆಗಾಗಿ ಬಂದಿದ್ದ ಐಪಿಎಸ್ ಅಧಿಕಾರಿಯನ್ನು ಬಲವಂತವಾಗಿ ಬಂಧಿಸಿದ್ದಕ್ಕಾಗಿ ನ್ಯಾಯಾಲಯ ಮಹಾರಾಷ್ಟ್ರ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ.
ಕುಮಾರಸ್ವಾಮಿ ಮೊದಲು ತಮ್ಮ ರಾಜೀನಾಮೆಯ ಅಸಲಿ ಕಥೆ ಬಿಚ್ಚಿಡಲಿ: ನಿಮ್ಮ ಕುಟುಂಬ ನೈಸ್ ನಲ್ಲಿ ಎಷ್ಟು ಭೂಮಿ ಕಬಳಿಸಿದೆ? ಸೋಮಶೇಖರ್ ವಾಗ್ದಾಳಿ
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಈಗ ರಾಜೀನಾಮೆ ಮತ್ತು ಸ್ಟಿಂಗ್ ಆಪರೇಷನ್ ಗಳ ಮಹಾ ಸಮರ ಶುರುವಾಗಿದೆ. ಸಿದ್ದರಾಮಯ್ಯ ಅವರನ್ನು ಸ್ಟಿಂಗ್ ಆಪರೇಷನ್ ಮೂಲಕ ಸಿಎಂ ಸ್ಥಾನದಿಂದ ಕೆಳಗಿಳಿಸಲಾಗಿದೆ...








