ನಟಿ ಪರಿಣಿತಿ ಚೋಪ್ರಾ (Parineeti Chopra) ಹಾಗೂ ಸಂಸದ ರಾಘವ್ ಚಡ್ಡಾ (Raghav Chadha) ಅವರು ಹಲವು ದಿನಗಳಿಂದ ಒಟ್ಟೊಟ್ಟಿಗೆ ಸುತ್ತಾಡುತ್ತಿದ್ದರು ಎಂಬ ವಿಷಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಸದ್ಯ ಇದಕ್ಕೆ ಪುಷ್ಟಿ ಸಿಕ್ಕಿದ್ದು, ಇಬ್ಬರೂ ಸದ್ದಿಲ್ಲದೇ ಎಂಗೇಜ್ ಮೆಂಟ್ (Engagement) ಮಾಡಿಕೊಂಡಿದ್ದಾರೆ.
ದೆಹಲಿಯ (Delhi) ಇಂಡಿಯಾ ಗೇಟ್ ಬಳಿಯ ಕಪುರ್ತಲ ಹೌಸ್ ಉಂಗುರ ಬದಲಾಯಿಸಿಕೊಂಡಿದ್ದಾರೆ. ಸಾಂಪ್ರದಾಯಿಕ ಶೈಲಿಯಲ್ಲಿ ನಡೆದ ನಿಶ್ಚಿತಾರ್ಥ ಸಮಾರಂಭದಲ್ಲಿ ಎರಡೂ ಕುಟುಂಬದಿಂದ 150 ಜನರು ಮಾತ್ರ ಭಾಗವಹಿಸಿದ್ದರು ಎನ್ನಲಾಗಿದೆ.
ನಿಶ್ಚಿತಾರ್ಥ ಸಮಾರಂಭಂದಲ್ಲಿ ರಾಜಕೀಯ ಗಣ್ಯರು, ತಾರೆಯರು ಹಾಗೂ ಕ್ರೀಡಾಪಟುಗಳು ಭಾಗಿಯಾಗಿದ್ದಾರೆ. ಪರಿಣಿತಿ ಸಹೋದರಿ ಪ್ರಿಯಾಂಕಾ ಚೋಪ್ರಾ, ಮನೀಶ್ ಮಲ್ಹೋತ್ರಾ ಸೇರಿದಂತೆ ಹಲವರು ಸಮಾರಂಭಕ್ಕೆ ಸಾಕ್ಷಿಯಾಗಿದ್ದರು.
ನಟಿ ಪರಿಣಿತಿ(Parineeti Chopra), ರಾಘವ್ ಎಂಗೇಜ್ ಮೆಂಟ್ ನಲ್ಲಿ ಪ್ರಿಯಾಂಕಾ ಚೋಪ್ರಾ ದಂಪತಿ, ಆಲಿಯಾ ಭಟ್, ಕತ್ರಿನಾ ಕೈಫ್, ನಟ ಅಕ್ಷಯ್ ಕುಮಾರ್ ಸೇರಿದಂತೆ ಹಲವು ಸೆಲೆಬ್ರಿಟಿಗಳು ಇದ್ದರು ಎನ್ನಲಾಗಿದೆ. ರಾಘವ್ ಚಡ್ಡಾ ಅವರು ಆಪ್ ಪಕ್ಷದಿಂದ ಸಂಸದರಾಗಿದ್ದಾರೆ. ಪರಿಣಿತಿ ಬಾಲಿವುಡ್ ಅಂಗಳದಲ್ಲಿ ಮಿಂಚುತ್ತಿದ್ದಾರೆ.








