ಪ್ರಿಯಾಂಕಾ ಫ್ಯಾಷನ್ ಶೈಲಿಗೆ ದಂಗಾದ ನೆಟ್ಟಿಗರು : ಟ್ರೋಲ್ ಗಳಲ್ಲಿ ‘ಪಿಂಕಿ’ ಮಿಂಚಿಂಗ್..!
ಫ್ಯಾಷನ್ ಐಕಾನ್ ಎಂದೇ ಖ್ಯಾತಿ ಗಳಿಸಿರುವ ಬಾಲಿವುಡ್ ನಟಿ ಪ್ರಯಾಂಕಾ ಡಿಫರೆಂಟ್ ಫ್ಯಾಶನ್ ಸ್ಟೈಲ್ ನ ಭಿನ್ನ ವಿಭಿನ್ನ , ವಿಚಿತ್ರ ಬಟ್ಟೆಗಳನ್ನ ತೊಟ್ಟು ಪ್ರಿಯಾಂಕಾ ಚೋಪ್ರಾ ಆಗಾಗ ಸುದ್ದಿಯಲ್ಲಿರುತ್ತಾರೆ.ಆದ್ರೆ ಅವರ ವಿಭಿನ್ನ ಫ್ಯಾಶನ್ ಶೈಲಿಯನ್ನ ಇಷ್ಟ ಪಡೋ ಜನರಿಗಿಂತ ಅಪಹಾಸ್ಯ ಮಾಡೋರೆ ಹೆಚ್ಚು. ಆಗಾಗ ಪ್ರಿಯಾಂಕಾ ಬಟ್ಟೆ ವಿಚಾರವಾಗಿಯೇ ಸಾಕಷ್ಟು ಟ್ರೋಲ್ ಗೂ ಗುರಿಯಾಗ್ತಾರೆ. ನೆಟ್ಟಿಗರಿಂದ ನಗೆಪಾಟಲಿಗೀಡಾಗ್ತಾರೆ. ಇದೀಗ ಮತ್ತೆ ಅಂತಹದ್ದೇ ಟ್ರೋಲ್ ಗೆ ಗುರಿಯಾಗಿದ್ದಾರೆ. ಬಾಲಿವುಡ್ ನ ಬ್ಯೂಟಿ ಪ್ರಿಯಾಂಕಾ ಅವರ ಆತ್ಮಚರಿತ್ರೆ ಅನ್ ಫಿನಿಶಿಡ್ ಬಿಡುಗಡೆ ಆಗಿದ್ದು, ಉತ್ತಮವಾಗಿ ಸೇಲ್ ಕೂಡ ಆಗ್ತಿದೆ.
ಆದ್ರೆ ಮ್ಯಾಗಜಿನ್ ಗೆ ವಿಚಿತ್ರವಾಗಿ ಫೋಟೋಶೂಟ್ ಮಾಡಿಸಿರುವ ಪ್ರಿಯಾಂಕಾ ಚೋಪ್ರಾ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ರಾರಾಜಿಸುತ್ತಿವೆ. ವಿಚಿತ್ರ ಬಟ್ಟೆ ಧರಿಸಿರುವ ಫೋಟೋ ವೈರಲ್ ಆಗ್ತಿದೆ. ಈ ಬಟ್ಟೆ ಧರಿಸಿರುವ ಪ್ರಿಯಾಂಕಾ ಫೋಟೋಗಳು ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ. ನೆಟ್ಟಿಗರು ತರಹೇವಾರಿ ಮೇಮ್ ಗಳನ್ನು ಮಾಡಿ ಶೇರ್ ಮಾಡುತ್ತಿದ್ದಾರೆ.
‘ಕಿರಿಕ್ ರಾಣಿ’ ರಶ್ಮಿಕಾಗೆ ‘ಕನ್ನಡತಿ’ ಕೃತಿ ಶೆಟ್ಟಿ ಸವಾಲ್…!
ಚೆಂಡಿನ ಹಾಗೆ ಇರುವ ಬಟ್ಟೆ ಧರಿಸಿ ಪ್ರಿಯಾಂಕಾ ಕ್ಯಾಮರಾಗೆ ಪೋಸ್ ನೀಡಿದ್ದಾರೆ. ಹಸಿರು ಬಣ್ಣದ ಬಟ್ಟೆಯ ಮೇಲೆ ಕಪ್ಪು ಬಣ್ಣದ ಚುಕ್ಕಿಗಳಿವೆ. ಪ್ರಿಯಾಂಕಾ ಧರಿಸಿರುವ ಈ ಬಟ್ಟೆ ಈಗ ಟ್ರೋಲ್ ಪೇಜ್ ಗಳಲ್ಲಿ ರಾರಾಜಿಸುತ್ತಿವೆ. ಆದ್ರೆ ಎಲ್ಲಾ ನಟರಂತೆ ಟ್ರೋಲ್ ಗಳನ್ನ ನೋಡಿ ಚುಪ್ ಆಗದ ಪ್ರಿಯಾಂಕಾ ಟ್ರೋಲ್ ಗಳಿಗೆ ಮೆಚ್ಚುಗೆ ವ್ಯಕ್ತಪಿಡಿಸಿದ್ದಾರೆ. ಹೌದು ಕ್ರಿಯೇಟಿವ್ ಆಗಿರುವ ಟ್ರೋಲ್ ಗಳನ್ನು ನೋಡಿ ಪ್ರಿಯಾಂಕಾ ಖುಷಿ ಪಟ್ಟು, ಕೆಲವು ಟ್ರೋಲ್ ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಧನ್ಯವಾದ ತಿಳಿಸಿದ್ದಾರೆ.
ಪ್ರಿಯಾಂಕಾ ಧರಿಸಿರುವ ಬಟ್ಟೆಯನ್ನು ಪಂಜಾಬಿ ಪೊಲೀಸರಿಗೆ ಹೋಲಿಸಲಾಗಿದೆ. ವಿರಾಟ್ ಕೊಹ್ಲಿ ಬಾಲನ್ನ ಕ್ಯಾಚ್ ಹಿಡಿಯುತ್ತಿರುವ ಹಾಗೆ ಆ ಬಾಲಿನಲ್ಲಿ ಪ್ರಿಯಾಂಕಾ ಅವರನ್ನ ಎಡಿಟ್ ಮಾಡಿರುವ ಫೋಟೋಗಳು ಹರಿದಾಡ್ತಿವೆ. ಸಾಲದಕ್ಕೆ ಆಟಂ ಬಾಂಬ್ ಪಟಾಕಿಗಳ ನಡುವೆಪ್ರಿಯಾಂಕಾ ವಿಚಿತ್ರ ಬಟ್ಟೆಗಳ ಫೋಟೋ ಎಡಿಟ್ ಮಾಡಿ ಶೇರ್ ಮಾಡಿದ್ದಾರೆ ಟ್ರೋಲಿಗರು. ಆದ್ರೆ ಪ್ರಿಯಾಂಕಾ ಈ ಎಲ್ಲಾ ಟ್ರೋಲ್ ಗಳನ್ನ ಶೇರ್ ಮಾಡಿಕೊಂಡು ಧನ್ಯವಾದಗಳನ್ನ ತಿಳಿಸಿದ್ದಾರೆ.