ಬಾಲಿವುಡ್ ಬಾದ್ ಶಾ ಸಲ್ಮಾನ್ ಖಾನ್ ಗೆ ಹಾವು ಕಡಿತ…
ಬಾಲಿವುಡ್ ಬಾದ್ ಶಾ…. ಸಲ್ಮಾನ್ ಖಾನ್ ಗೆ ತಮ್ಮ ಒಡೆತನದ ಪನ್ವೆಲ್ ಫಾರ್ಮ್ ಹೌಸ್ ನಲ್ಲಿ ಹಾವು ಕಚ್ಚಿದೆ. ಬಳಿಕ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಭಾನುವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಆಸ್ಪತ್ರೆಯಿಂದ ಬಿಡುಗಡೆಯಾಗಿ ತಮ್ಮ ತೋಟದ ಮನೆಗೆ ಮರಳಿದ್ದಾರೆ. ಇದೀಗ ಅವರ ಆರೋಗ್ಯ ಚೆನ್ನಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಸಲ್ಮಾನ್ ಅವರ ತೋಟದ ಮನೆಯ ಸುತ್ತಲೂ ಅನೇಕ ಮರಗಳು ಮತ್ತು ಗಿಡಗಳಿದ್ದುವೆ, ಈ ಪ್ರದೇಶವು ಬೆಟ್ಟಗಳಿಂದ ಆವೃತವಾಗಿರುವುದರಿಂದ ಇಲ್ಲಿಗೆ ಹಲವು ಹಾವುಗಳು ಬರುತ್ತಿರುತ್ತವೆ. ಸಲ್ಮಾನ್ ಖಾನ್ ಅವರನ್ನು ಮುಂಬೈನ ಕಾಮೋಥೆಯಲ್ಲಿರುವ ಎಂಜಿಎಂ ಆಸ್ಪತ್ರೆಗೆ ಮಧ್ಯಾಹ್ನ 3 ಗಂಟೆಗೆ ದಾಖಲಿಸಲಾಗಿದೆ. ಮಾಹಿತಿ ಪ್ರಕಾರ ಸಲ್ಮಾನ್ ಖಾನ್ ಸದ್ಯ ತಮ್ಮ ಫಾರ್ಮ್ ಹೌಸ್ ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.
ಡಿಸೆಂಬರ್ 27 ರಂದು ಸಲ್ಮಾನ್ ಖಾನ್ ಹುಟ್ಟುಹಬ್ಬದ ಕಾರಣ ಅವರ ಕುಟುಂಬ ಸದಸ್ಯರು ಮತ್ತು ಸ್ನೇಹಿತರು ತೋಟದ ಮನೆಗೆ ತಲುಪಿದ್ದರು. ಈ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಸದ್ಯ ಸಲ್ಮಾನ್ ವಿಶ್ರಾಂತಿ ಪಡೆಯುತ್ತಿರುವುದರಿಂದ ಹುಟ್ಟುಹಬ್ಬದಂದು ಅದ್ಧೂರಿ ಆಚರಣೆ ನಡೆಯುವ ಸಾಧ್ಯತೆ ಕಡಿಮೆ ಇದೆ.
ಸಲ್ಮಾನ್ ಖಾನ್ ಇತ್ತೀಚೆಗೆ ಅಂತಿಮ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಇದಲ್ಲದೆ, ‘ಬಿಗ್ ಬಾಸ್ 15’ ರಿಯಾಲಿಟಿ ಶೋ ಅನ್ನು ಹೋಸ್ಟ್ ಮಾಡುತ್ತಿದ್ದಾರೆ. ಅವರ ಮುಂಬರುವ ಚಿತ್ರ ‘ಟೈಗರ್ 3’ ಚಿತ್ರೀಕರಣ ಇನ್ನಷ್ಟೇ ಆಗಬೇಕಿದೆ. ಇದಲ್ಲದೇ ಸೂರಜ್ ಬರ್ಜಾತ್ಯಾ ಅವರ ಚಿತ್ರವೊಂದು ಅವರ ಖಾತೆಯಲ್ಲಿದೆ. ಕೆಲವೇ ದಿನಗಳ ಹಿಂದೆ ಅವರು ‘ಬಜರಂಗಿ ಭಾಯಿಜಾನ್’ ಸೀಕ್ವೆಲ್ ಮಾಡುವುದಾಗಿ ಖಚಿತಪಡಿಸಿದ್ದರು.