ನಟ ಅಲ್ಲು ಅರ್ಜುನ್ ಗೆ ಪೊಲೀಸರು ಮತ್ತೊಮ್ಮೆ ಡ್ರಿಲ್ ನಡೆಸಿದ್ದಾರೆ.
ಷ್ಪ 2′ (Pushpa 2) ಪ್ರೀಮಿಯರ್ ಶೋ ಸಂದರ್ಭದಲ್ಲಿ ಉಂಟಾಗಿದ್ದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಡಪಲ್ಲಿ ಪೊಲೀಸರು ನಟ ಅಲ್ಲು ಅರ್ಜುನ್ (Allu Arjun) ಅವರನ್ನು ಸತತ 4 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ.
ಚಿಕ್ಕಡಪಲ್ಲಿ ಪೊಲೀಸ್ ಠಾಣೆಯಲ್ಲಿ ಎಸಿಪಿ ರಮೇಶ್ ಕುಮಾರ್ ನೇತೃತ್ವದಲ್ಲಿ ಇನ್ಸ್‌ಪೆಕ್ಟರ್ ನಾಯಕ್ ಅವರಿಂದ ಅಲ್ಲು ಅರ್ಜುನ್ ವಿಚಾರಣೆ ನಡೆಸಲಾಗಿದೆ. ಈ ವೇಳೆ ಹಲವು ಪ್ರಶ್ನೆಗಳನ್ನು ಅಲ್ಲು ಅರ್ಜುನ್ ಮುಂದೆ ಇಡಲಾಗಿದೆ.
ಥಿಯೇಟರ್‌ಗೆ ಬರಬೇಡಿ ಎಂದು ಥಿಯೇಟರ್ ಮ್ಯಾನೇಜ್‌ಮೆಂಟ್ ಮೊದಲೇ ಹೇಳಿತ್ತಾ?, ಥಿಯೇಟರ್‌ಗೆ ಬರಲು ಪೊಲೀಸ್ ಅನುಮತಿ ಕೇಳಿದ್ದೀರಾ, ಅದರ ಪ್ರತಿ ಇದೆಯೇ?, ಥಿಯೇಟರ್ ನಲ್ಲಿನ ಪರಿಸ್ಥಿತಿ ಬಗ್ಗೆ ನಿಮ್ಮ ತಂಡ ನಿಮಗೆ ಮಾಹಿತಿ ನೀಡಿತ್ತೇ?, ಥಿಯೇಟರ್ ನಲ್ಲಿ ಭದ್ರತೆ ಹೆಚ್ಚಿಸಲಾಗಿತ್ತೆ? ಎಷ್ಟು ಜನ ಬೌನ್ಸರ್ ನೇಮಕ ಮಾಡಲಾಗಿತ್ತು?, ನೀವು ಥಿಯೇಟರ್ ಗೆ ತೆರಳಲು ಪೊಲೀಸರು ಅನುಮತಿಸಿದ್ದರು. ಇದರ ಮಾಹಿತಿ ನಿಮ್ಮಗಿತ್ತಾ?, ಕಾಲ್ತುಳಿತ ಸಂಭವಿಸಿದ್ದು ಗೊತ್ತಾದರೂ, ಥಿಯೇಟರ್‌ನಿಂದ ಯಾಕೆ ನೀವು ಹೊರಗೆ ಹೋಗಲಿಲ್ಲ? ಸೇರಿದಂತೆ ಹಲವು ಪ್ರಶ್ನೆಗಳನ್ನು ಪೊಲೀಸರು ಕೇಳಿದ್ದಾರೆ.








