ಮತ್ತೊಮ್ಮೆ ಡ್ರಗ್ಸ್ ಕಂಟಕ , ದೀಪಿಕಾ ಪಡುಕೋಣೆ ಮ್ಯಾನೇಜರ್ ಗೆ ಬಂಧನದ ಭೀತಿ..!
ಸುಮಾರು ದಿನಗಳ ಹಿಂದೆ ಸಖತ್ ಸಂಚಲನ ಸೃಷ್ಟಿ ಮಾಡಿದ್ದ ಬಾಲಿವುಡ್ , ಸ್ಯಾಂಡಲ್ ವುಡ್ ಡ್ರಗ್ ಲಿಂಕ್ ಕೇಸ್ ಸ್ವಲ್ಪ ದಿನಗಳಿಂದ ತಣ್ಣಗಾಗಿತ್ತು.. ಇದೀಗ ಮತ್ತೊಮ್ಮೆ ಹೈಪ್ ಪಡೆದುಕೊಳ್ಳುವ ಸಾಧ್ಯತೆ ದಟ್ಟವಾಗಿದೆ.. ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ದೀಪಿಕಾ ಪಡುಕೋಣೆ ಮಾಜಿ ಮ್ಯಾನೇಜರ್ ಕರಿಶ್ಮಾ ಪ್ರಕಾಶ್ ಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ. ಬಾಲಿವುಡ್ ಡ್ರಗ್ಸ್ ಪ್ರಕರಣದಲ್ಲಿ ಕರಿಶ್ಮಾ ಪ್ರಕಾಶ್ ಸಹ ಆರೋಪಿ ಆಗಿದ್ದು, ಬಂಧನದಿಂದ ಬಚಾವಾಗಲು ಕರಿಶ್ಮಾ ಪ್ರಕಾಶ್ ನ್ಯಾಯಾಲಯದ ಮೊರೆ ಹೋಗಿದ್ದರು.
ಹೊಂಬಾಳೆ 11ನೇ ಸಿನಿಮಾ – ‘ಕಾಂತಾರ’ ನಾಗಿ ಕಿಚ್ಚ ಹೊತ್ತಿಸಲು ಬಂದ ರಿಷಬ್..!
ಆದರೆ ಕರಿಶ್ಮಾ ಪ್ರಕಾಶ್ ಸಲ್ಲಿಸಿದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನ್ಯಾಯಾಲಯವು ರದ್ದು ಮಾಡಿದೆ. ಹೀಗಾಗಿ ಕರಿಶ್ಮಾಗೆ ಬಂಧನದ ಭೀತಿ ಎದುರಾಗಿದೆ. ಅಕ್ಟೋಬರ್ ನಲ್ಲಿಯೇ ನಿರೀಕ್ಷಣಾ ಜಾಮೀನು ಕೋರಿ ಕರಿಶ್ಮಾ ಅರ್ಜಿ ಹಾಕಿದ್ದರು. ಆದರೆ ಎನ್‌ಸಿಬಿ ತಂಡವು ಕರಿಶ್ಮಾಗೆ ನಿರೀಕ್ಷಣಾ ಜಾಮೀನು ನೀಡಲು ವಿರೋಧ ವ್ಯಕ್ತಪಡಿಸಿ ಹಲವು ದಾಖಲೆಗಳನ್ನು ನ್ಯಾಯಾಲಯದ ಮುಂದಿಟ್ಟಿತು. ಡಿಫೆನ್ಸ್, ಪ್ರಾಸಿಕ್ಯೂಷನ್ ಎರಡೂ ಪಕ್ಷದವರ ವಾದ ಆಲಿಸಿದ ನ್ಯಾಯಾಧೀಶ ವಿವಿ ವಿದ್ವಾನ್ ನಿರೀಕ್ಷಣಾ ಜಾಮೀನು ಅರ್ಜಿಯನ್ನು ರದ್ದು ಮಾಡಿದರು. ಆದರೆ ಆಗಸ್ಟ್ 25ರ ಒಳಗಾಗಿ ಬಾಂಬೆ ಹೈಕೋರ್ಟ್‌ನಲ್ಲಿ ನಿರೀಕ್ಷಣಾ ಜಾಮೀನಿಗೆ ಕರಿಶ್ಮಾ ಅರ್ಜಿ ಹಾಕಿಕೊಳ್ಳಬಹುದು ಎಂದು ನ್ಯಾಯಾಧೀಶರು ಹೇಳಿದ್ದಾರೆ. ಕಳೆದ ವರ್ಷ ಬಾಲಿವುಡ್ ನಟ ಸುಶಾಂತ್ ಸಿಂಗ್ ಸಾವಿನ ಬಳಿಕ ತನಿಖೆಯ ವೇಳೆ ಡ್ರಗ್ಸ್ ಪ್ರಕರಣ ಹೊರಗೆ ಬಂದಿತ್ತು. ಈ ಬಗ್ಗೆ ತನಿಖೆ ಆರಂಭಿಸಿದ ಎನ್‌ಸಿಬಿಯು ಸುಶಾಂತ್ ಸಿಂಗ್ ಗೆಳತಿ ರಿಯಾ ಚಕ್ರವರ್ತಿ, ಆಕೆಯ ಸಹೋದರ, ಧರ್ಮ ಪ್ರೊಡಕ್ಷನ್‌ನ ಕ್ಷಿತಿಜ್ ಪ್ರಸಾದ್, ಸುಶಾಂತ್ ಸಿಂಗ್‌ನ ಕೆಲವು ಗೆಳೆಯರು, ಮನೆಗೆಲದ ವ್ಯಕ್ತಿ, ಕೆಲವು ಡ್ರಗ್ ಪೆಡ್ಲರ್‌ಗಳು ಸೇರಿ ಸುಮಾರು 20ಕ್ಕೂ ಹೆಚ್ಚು ಮಂದಿಯನ್ನು ಎನ್‌ಸಿಬಿ ಬಂಧಿಸಿತ್ತು.
BIGGBOSS 8 : ಕಿಚ್ಚ ಸುದೀಪ್ ಅವರಿಂದಾಗಿ ವೈಷ್ಣವಿ ಹೆಸರು ಬದಲಾಯಿಸಲಿದ್ದಾರೆ ಪೋಷಕರು..!
ಈ ಪೈಕಿ ದೊಡ್ಡ ದೊಡ್ಡ ಸ್ಟಾರ್ ನಟಿಯರನ್ನೂ ವಿಚಾರಣೆ ನಡೆಸಲಾಗಿತ್ತು.. ದೀಪಿಕಾ ಪಡುಕೋಣೆ, ಸಾರಾ ಅಲಿ ಖಾನ್ , ರಕುಲ್ ಪ್ರೀತ್ , ಶ್ರದ್ಧಾ ಕಪೂರ್ ವಿಚಾರಣೆ ನಡೆಸಿದ್ದ NCB ಕೊನೆಗೆ ಕ್ಲೀನ್ ಚಿಟ್ ನೀಡಿತ್ತು. ಅಲ್ಲದೇ ಅರ್ಜುನ್ ರಾಮ್‌ಪಾಲ್, ಅರ್ಜುನ್ ರಾಮ್ ಪಾಲ್ ಪತ್ನಿ ಗೇಬ್ರಿಯಲ್, ಗೇಬ್ರಿಯಲ್ ಳ ಸಹೋದರ, ಅರ್ಜುನ್ ರಾಮ್‌ಪಾಲ್ ಸಹೋದರಿ ಕೋಮಲ್ ರಾಮ್‌ಪಾಲ್, ನಿರ್ಮಾಪಕ ಕರಣ್ ಜೋಹರ್, ಕಮಿಡಿಯನ್ ಭಾರತಿ ಸಿಂಗ್ ಮತ್ತು ಆಕೆಯ ಪತಿ ಹರ್ಷ ಸೇರಿ ಇನ್ನೂ ಹಲವು ಸೆಲೆಬ್ರಿಟಿಗಳನ್ನು ವಿಚಾರಣೆ ನಡೆಸಲಾಗಿತ್ತು. ಸ್ಯಾಂಡಲ್ ವುಡ್‌ನಲ್ಲೂ ಡ್ರಗ್ಸ್ ಪ್ರಕರಣ ಸಂಬಂಧ ಹಲವರಿಗೆ ಕಂಟಕ ಎದುರಾಗಿತ್ತು.. ಅನೇಕರ ವಿಚಾರಣೆ ನಡೆದಿತ್ತು.. ಸಂಜನಾ ಗಲ್ರಾನಿ , ರಾಗಿಣಿ ದ್ವಿವೇದಿ ಸುಮಾರು 3 ತಿಂಗಳ ಕಾಲ ಪರಪ್ಪನ ಅಗ್ರಹಾರದಲ್ಲಿ ಸೆರೆವಾಸ ಅನುಭವಿಸಿ ಮರಳಿ ಬಳಿಕ ಜಾಮೀನು ಪಡೆದು ಹೊರಗೆ ಬಂದಿದ್ದಾರೆ.. 








