ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗ್ತಿದೆ “ಬಾಯ್ಕಟ್ ಶಾರುಖ್”
ಬಾಲಿವುಡ್ ನ ದಿಲ್ ದಾರ್ ಬಾದ್ ಷಾ , ರೋಮ್ಯಾಂಟಿಕ್ ಸಿನಿಮಾಗಳ ಸರದಾರ ಶಾರುಖ್ ಖಾನ್ ಕೆಲ ವರ್ಷಗಳಿಂದ ಸೈಲೆಂಟ್ ಆಗಿದ್ರು. ಸಿನಿಮಾಗಳು ಬಂದಿರಲಿಲ್ಲ..
ಆದ್ರೆ ಇತ್ತೀಚೆಗೆ ಸಾಲು ಸಾಲು ಸಿನಿಮಾಗಳು ಅನೌನ್ಸ್ ಆದ ನಂತರ ಶಾರುಖ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ..
ಆದ್ರೆ ಶಾರುಖ್ ಇದೀಗ ಸಿಕ್ಕಾಪಟ್ಟೆ ಟ್ರೋಲ್ ಆಗ್ತಾಯಿದ್ದಾರೆ. ಧೀಡೀರ್ ಅಂತ ಸೋಷಿಯಲ್ ಮೀಡಿಯಾದಲ್ಲಿ ಬಾಯ್ಕಟ್ ಶಾರುಖ್ ಖಾನ್ ಅಭಿಯಾನ ಶುರುವಾಗಿದೆ.
ಹೌದು ಶಾರುಕ್ ಅವರು ಈ ಹಿಂದೆ ಪಾಕಿಸ್ತಾನದ ಕ್ರಿಕೆಟರ್ ಪರ ಮಾತನಾಡಿದ್ದಕ್ಕೆ ಇದೀಗ ನೆಟ್ಟಿಗರಿಂದ ಟ್ರೋಲ್ ಆಗ್ತಾಯಿದ್ದಾರೆ.
ಅಲ್ಲದೇ ಶಾರುಖ್ ಖಾನ್ ಮತ್ತು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಇಬ್ಬರು ಒಟ್ಟಿಗೆ ಇರುವ ಹಳೆಯ ಫೋಟೋ ಈಗ ಸಖತ್ ವೈರಲ್ ಆಗ್ತಿದೆ.
ನೆಟ್ಟಿಗರು ಈ ಫೋಟೋ ಶೇರ್ ಮಾಡಿ ಬಾಯ್ಕಟ್ ಶಾರುಖ್ ಎಂದು ಕಿಡಿಕಾರುತ್ತಿದ್ದಾರೆ.
ಮತ್ತೊಂದೆಡೆ ಆಂಟಿ ಫ್ಯಾನ್ಸ್ ವಿರುದ್ಧ ಸಾರುಖ್ ಅಭಿಮಾನಿಗಳು ಕೂಡ ರೊಚ್ಚಿಗೆದ್ದಿದ್ದಾರೆ.
ಶಾರುಖ್ ಪರ ಅಭಿಮಾನಿಗಳು ಅಭಿಯಾನ ಶುರುಮಾಡಿದ್ದಾರೆ.
ಶಾರುಖ್ 5 ವರ್ಷದ ಹಿಂದೆ ನೀಡಿದ್ದ ಹೇಳಿಕೆಗಳು ಈಗ ಧಿಡೀರ್ ವೈರಲ್ ಆಗಿದೆ.
ಅಲ್ಲದೇ ಶಾರುಖ್ ಹೊಸ ಚಿತ್ರ ಪಠಾಣ್ ವಿರುದ್ಧವೂ ನೆಟ್ಟಿಗರು ಕಿಡಿಕಾರುತ್ತಿದ್ದಾರೆ.
ಒಟ್ನಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಬಾಯ್ಕಟ್ ಶಾರುಖ್ ಟ್ರೆಂಡ್ ಆಗ್ತಿದೆ.