ಕುಂದ್ರಾ ವಿರುದ್ಧ ಪೂನಂ ಆರೋಪ  : ಸಿಡಿದೆದ್ದ ಗೆಹನಾ – ಭಾರತ ಗೆದ್ರೆ ಬೆತ್ತಲಾಗು ಅಂತಾ ಕುಂದ್ರಾ ಹೇಳಿದ್ರಾ? ಎಂದು ಪ್ರಶ್ನೆ..???

1 min read

ಕುಂದ್ರಾ ವಿರುದ್ಧ ಪೂನಂ ಆರೋಪ  : ಸಿಡಿದೆದ್ದ ಗೆಹನಾ – ಭಾರತ ಗೆದ್ರೆ ಬೆತ್ತಲಾಗು ಅಂತಾ ಕುಂದ್ರಾ ಹೇಳಿದ್ರಾ? ಎಂದು ಪ್ರಶ್ನೆ..???

ಖ್ಯಾತ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ , ಉದ್ಯಮಿ ರಾಜ್ ಕುಂದ್ರಾ ಅಶ್ಲೀಲ ವಿಡಿಯೋ ನಿರ್ಮಾಣ ಪ್ರಕರಣದಲ್ಲಿ  ಮುಂಬೈ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದು, ವಿಚಾರಣೆ ನಡೆಸಿರುವ ನ್ಯಾಯಾಲುಯವು ಜುಲೈ 23 ರವರೆಗೂ ಅವರನ್ನ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.. ಈ ನಡುವೆ ರಾಜ್ ಕುಂದ್ರ ಶಿಲ್ಪಾ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗ್ತ ಇದ್ದಾರೆ.. ರಾಜ್ ಕುಂದ್ರ ಪೋರ್ನ್ ವಿಡಿಯೋಗಳ ಕುರಿತಾಗಿ ಮಾಡಿದ್ದ ಹಳೆಯ ಟ್ವೀಟ್ ಗಳು ವೈರಲ್ ಆಗ್ತಿವೆ.. ಕೆಲವೊಬ್ರು ರಾಜ್ ಕುಂದ್ರಾ ಪರ ನಿಂತಿದ್ದಾರೆ..

ಇದರ ಬೆನ್ನಲ್ಲೇ ಕಾಂಟ್ರವರ್ಸಿ ಕ್ವೀನ್ , ಬೋಲ್ಡ್ ಹೇಳಿಕೆಗಳನ್ನೇ ನೀಡುತ್ತಾ ಸುದ್ದಿಯಲ್ಲಿರುವ ಮಾದಕ ನಟಿ ಪೂನಂ ಪಾಂಡೆ  ಈ ಹಿಂದೆ ರಾಜ್ ಕದ್ರಾ ವಿರುದ್ಧ ಮಾಡಿದ್ದ ಆರೋಪದ ಸುದ್ದಿ ಈಗ ವೈರಲ್ ಆಗ್ತಿದೆ.. ಹೌದು ಪೂನಂ  2019ರಲ್ಲಿಯೇ ರಾಜ್ ಕುಂದ್ರ ವಿರುದ್ಧ ದೂರು ದಾಖಲಿಸಿದ್ದರು.  ರಾಜ್ ಕುಂದ್ರರನ್ನು ‘ಬ್ಲೂ ಫಿಲ್ಮ್ ದಂಧೆಯ ಮಾಸ್ಟರ್ ಮೈಂಡ್’ ಎಂದು ಆರೋಪಿಸಿದ್ದರು ಎನ್ನುವ ಸುದ್ದಿ ಈಗ  ಬಿ ಟೌನ್ ನಲ್ಲಿ ಹಲ್ ಚಲ್ ಸೃಷ್ಟಿ ಮಾಡಿದೆ.. ರಾಜ್ ಕುಂದ್ರ ಬಂಧನದ ಬೆನ್ನಲ್ಲೇ ಪೂನಂ ಪಾಂಡೆ ಸಖತ್ ಟ್ರೆಂಡಿಂಗ್ ನಲ್ಲಿದ್ದಾರೆ. ಮಾಡೆಲ್, ನಟಿ ಪೂನಂ ಪಾಂಡೆ 2019ರಲ್ಲಿ ರಾಜ್ ಕುಂದ್ರ ವಿರುದ್ಧ ಮಾಡಿರುವ ಗಂಭೀರ ಆರೋಪ ಈಗ ಸದ್ದು ಮಾಡುತ್ತಿದೆ. ಇದೆಲ್ಲದರ ನಡುವೆ ಪೂನಂ ಪಾಂಡೆ ನೀಡುತ್ತಿರುವ ಹೇಳಿಕೆಗಳು ಸಂಚಲನ ಸೃಷ್ಟಿಸುತ್ತಿವೆ. ಕುಂದ್ರಾ ವಿರುದ್ಧ ಪೂನಂ ಆರೋಪಗಳ ಮೇಲೆ ಆರೋಪ ಮಾಡುತ್ತಿದ್ದು, ಶಾಕಿಂಗ್ ವಿಚಾರಗಳನ್ನ ಬಹಿರಂಗಪಡಿಸುತ್ತಿದ್ದಾರೆ.

ಆದ್ರೆ ಪೂನಂ ವಿರುದ್ಧ ಮಾಡೆಲ್ ಖ್ಯಾತ ಮಾಡೆಲ್ ಗೆಹನಾ ವಸಿಸ್ತ್ ತಿರುಗಿಬಿದ್ದಿದ್ದಾರೆ.. ರಾಜ್ ಕುಂದ್ರಾ ಅರೆಸ್ಟ್ ಆದಾಗಿನಿಂದಲೂ ಅವರಿಗೆ ಬೆಂಬಲಿಸುತ್ತಾ ಬಂದಿರುವ ಗೆಹನಾ ಅಶ್ಲೀಲ ವಿಡಿಯೋಗಳನ್ನ ಶೂಟ್ ಮಾಡುತ್ತಿರಲಿಲ್ಲ.. ಅವು ಬೋಲ್ಡ್ ವಿಡಿಯೋಗಳು. ನಾನು ಕೂಡ 3 ಚಿತ್ರಗಳಲ್ಲಿ ನಟಿಸಿದ್ದು, ಸಂಬಳವನ್ನೂ ಸರಿಯಾಗಿ ನೀಡಿದ್ದಾರೆ.. ಯಾವುದೇ ರೀತಿಯಾದ ಬಲವಂತ ಮಾಡಿಲ್ಲ.. ಎರಿಯೋಟಿಕ್ ಚಿತ್ರಗಳನ್ನ ಪಾರ್ನ್ ವಿಡಿಯೋಗಳ ಜೊತೆಗೆ ಸೇರಿಸಬೇಡಿ ಎಂದಿದ್ದರು.. ಇದೀಗ ಗೆಹನಾ ಪೂನಂ ವಿರುದ್ಧ  ಮುಗಿಬಿದ್ದಿದ್ದಾರೆ.

ಈ ಕೇಸ್‌ನಲ್ಲಿ ರಾಜ್ ಕುಂದ್ರಾ ಮಾಸ್ಟರ್‌ ಮೈಂಡ್, ಎಲ್ಲದಕ್ಕೂ ಶಿಲ್ಪಾ ಶೆಟ್ಟಿ ಪತಿಯೇ ಕಾರಣ ಎಂದು ಪೂನಂ ದೂರಿದ್ದರು. ಇದಕ್ಕೆ ತಿರುಗೇಟು ಕೊಟ್ಟಿರುವ ಗೆಹನಾ,  ರಾಜ್ ಕುಂದ್ರಾ ಸಂಸ್ಥೆ ಸ್ಥಾಪಿಸುವುದಕ್ಕೂ ಮೊದಲೇ ಪೂನಂ ಪಾಂಡೆ ಇಂತಹ ವಿಡಿಯೋಗಳಲ್ಲಿ ನಟಿಸಿದ್ದರು. 2011ರಲ್ಲಿ ಭಾರತ ಗೆದ್ದರೆ ಬೆತ್ತಲಾಗು ಅಂತಾ ಕುಂದ್ರಾ ಹೇಳಿದ್ರಾ ನಿನಗೆ..?  ಎಂದು ಪ್ರಶ್ನಿಸಿದ್ದಾರೆ.  ಅಂದ್ಹಾಗೆ ಗೆಹನಾ ಇದೇ ಪ್ರಕರಣದಲ್ಲಿ ಐದು ತಿಂಗಳು ಜೈಲು ಶಿಕ್ಷೆ ಅನುಭವಿಸಿದ್ದರು.

ಮುಂದುವರೆದು , ರಾಜ್ ಕುಂದ್ರಾ ತನ್ನ ಸಂಸ್ಥೆ ಪ್ರಾರಂಭಿಸುವುದಕ್ಕೂ ಮೊದಲೇ ಪೂನಂ ಪಾಂಡೆ ಅಂತಹ ವಿಡಿಯೋಗಳಲ್ಲಿ ನಟಿಸಿದ್ದಾರೆ. ಆದರೆ, ಅಶ್ಲೀಲ ಜಗತ್ತಿಗೆ ನನ್ನನ್ನು ಕುಂದ್ರಾ ತಳ್ಳಿದರು ಎಂದು ಹೇಳಿದ್ರೆ ಜನರು ನಂಬಲು ಸಾಧ್ಯವೇ? 2011ರಲ್ಲಿ ಭಾರತ ಗೆದ್ದರೆ ಬೆತ್ತಲಾಗುತ್ತೇನೆ ಎಂದು ಹೇಳಿದ್ದಳು. ಆಗಿನ್ನು ಕುಂದ್ರಾ ಕಂಪನಿ ಶುರು ಮಾಡಲೇ ಇರಲಿಲ್ಲ  ಎಂದು ತಿರುಗೇಟು ಕೊಟ್ಟಿದ್ದಾರೆ.

ಇದೇ ವೇಳೆ ಈಗ ಪೂನಂ ಪಾಂಡೆ, ರಾಜ್ ಕುಂದ್ರಾ ಜೊತೆಯಲ್ಲಿಲ್ಲ. ಪತಿ ಜೊತೆಯಲ್ಲಿದ್ದಾಳೆ, ಈಗಲೂ ಪತಿ ಜೊತೆ ಎಂಎಂಎಸ್ ವಿಡಿಯೋ ಮಾಡ್ತಾಳೆ. ಇದನ್ನೆಲ್ಲಾ ಕುಂದ್ರಾ ಮಾಡಲು ಹೇಳಿದ್ರಾ..?, ಒಬ್ಬ ಮನುಷ್ಯ ಸಿಲುಕಿಕೊಂಡಿದ್ದಾನೆ ಅಂದ್ರೆ ಎಲ್ಲರೂ ಪರಿಸ್ಥಿತಿ ಲಾಭ ಪಡೆಯಲು ಪ್ರಯತ್ನಿಸುತ್ತಾರೆ ಎಂದು ಟೀಕಿಸಿದ್ದಾರೆ.

ಫೆಬ್ರವರಿಯಲ್ಲಿ ಮಾಡೆಲ್ ಗೆಹನಾ ಅವರನ್ನು ಇದೇ ಪ್ರಕರಣದಲ್ಲಿ ಬಂಧಿಸಲಾಗಿತ್ತು. ಐದು ತಿಂಗಳ ಕಾಲ ಜೈಲಿನಲ್ಲೇ ಕಳೆದಿದ್ದರು. ಈ ಬಗ್ಗೆ ಮಾತನಾಡಿದ್ದ ಗೆಹನಾ , ನಾನು ಮಾಡದ ಅಪರಾಧಕ್ಕೆ ಅಮೂಲ್ಯವಾದ ಐದು ತಿಂಗಳು ಜೈಲಿನಲ್ಲಿ ಕಳೆದೆ. ನನ್ನ ಖಾತೆಯನ್ನು ಸ್ಥಗಿತಗೊಳಿಸಲಾಗಿದೆ. ನನ್ನ ಮೊಬೈಲ್, ಲ್ಯಾಪ್ ಟ್ಯಾಪ್ ಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ನನ್ನ ಜೀವನವನ್ನು ನರಕಕ್ಕೆ ತಳ್ಳಲಾಗಿದೆ. ನಾನು ಜೈಲಿನಿಂದ ಹೊರಬಂದ ಬಳಿಕ ನನ್ನ ಬಳಿ ಹಣವಿರಲಿಲ್ಲ. ನಾನು ಹೃದಯಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದೇನೆ. ನಾನು ಆಸ್ಪತ್ರೆಗೂ ದಾಖಲಾಗಿದ್ದೆ ಎಂದು ಅಳಲು ತೋಡಿಕೊಂಡಿದ್ದರು.

ಪೂನಂ ಮಾಡಿರುವ ಆರೋಪಗಳೇನು..?

ರಾಷ್ಟ್ರೀಯ ಮಾಧ್ಯಮಕ್ಕೆ ಹೇಳಿಕೆ ನೀಡಿರುವ ಪೂನಂ ‘ನನ್ನನ್ನು ಬೆದರಿಸಿ ಒಪ್ಪಂದಕ್ಕೆ ಸಹಿ ಮಾಡಿಸಿಕೊಂಡಿದ್ದರು. ಅವರು ಹೇಳಿದಂತೆ ಚಿತ್ರೀಕರಣ ಮಾಡಬೇಕಿತ್ತು. ಫೋಸ್ ಕೊಡಬೇಕಿತ್ತು. ಇಲ್ಲವಾದಲ್ಲಿ ನನ್ನ ಖಾಸಗಿ ಸಂಗತಿಗಳನ್ನು ಸೋರಿಕೆ ಮಾಡುವುದಾಗಿ ಹೇಳುತ್ತಿದ್ದರು’ಎಂಬ ವಿಚಾರ ಹೊರಹಾಕಿದ್ದಾರೆ.  ನಾನು ಅವರ ಒಪ್ಪಂದಿಂದ ಹಿಂದಕ್ಕೆ ಸರಿದಾಗ ನನ್ನ ಖಾಸಗಿ ಸಂದೇಶಗಳನ್ನು ಲೀಕ್ ಮಾಡಿದರು.  ಕಾಲ್ ಮಾಡಿ, ನಿಮಗಾಗಿ ನಾನು ನಗ್ನವಾಗಲು ಸಿದ್ದ  ಅಂತಹ ಸಂಭಾಷೆಗಳೊಂದಿಗೆ ವೈಯಕ್ತಿಕ ನಂಬರ್ ಸೋರಿಕೆ ಮಾಡಿದರು  ಎಂದು ದೂರಿದ್ದಾರೆ. ಇದಾದ ಮೇಲೆ ನನಗೆ ಎಲ್ಲಾ ಕಡೆಯಿಂದಲೂ ಫೋನ್ ಕಾಲ್ ಬರುವುದಕ್ಕೆ ಶುರುವಾಯಿತು. ಸಾವಿರಾರು ಸಂಖ್ಯೆಯಲ್ಲಿ ಫೋನ್ ಕಾಲ್ ಬಂತು. ಜನರು ನನಗೆ ಅಶ್ಲೀಲ ವಿಡಿಯೋ ಮತ್ತು ಫೋಟೋಗಳನ್ನು ಕಳುಹಿಸಲು ಶುರು ಮಾಡಿದರು. ಅಸಭ್ಯವಾಗಿ ವರ್ತಿಸಿದರು. ಆ ಸಮಯದಲ್ಲಿ ನನಗೆ ಏನಾದರೂ ತೊಂದರೆ ಉಂಟಾಗಬಹುದು ಎಂಬ ಭಯದಿಂದ ಮನೆ ಬಿಟ್ಟು ಹೋದೆ ಎಂದು ಪೂನಂ ಬಹಿರಂಗಪಡಿಸಿದ್ದಾರೆ.

ರಾಜ್ ಕುಂದ್ರಾ ಅವರ ಅರ್ಮ್ಸ್ ಪ್ರೈಮ್ ಮೀಡಿಯಾ ಸಂಸ್ಥೆ ಜೊತೆ ಪೂನಂ ಪಾಂಡೆ ಒಪ್ಪಂದ ಮಾಡಿಕೊಂಡಿದ್ದರು. ಈ ಒಪ್ಪಂದ ಮುಗಿದ ಬಳಿಕವೂ ರಾಜ್ ಕುಂದ್ರ ಮತ್ತು ಅವರ ಸಹಚರರು ತನ್ನ ವಿಡಿಯೋ ತುಣುಕುಗಳನ್ನು ಮತ್ತು ಸಿನಿಮಾಗಳನ್ನು ನಿರ್ದಾಕ್ಷಿಣ್ಯವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿ ಪೂನಂ ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದ್ದರು. ಆಗ ರಾಜ್ ಕುಂದ್ರಾ ಈ ಆರೋಪಗಳನ್ನು ನಿರಾಕರಿಸಿದರು. ಇದೀಗ ರಾಜ್ ಕುಂದ್ರಾ ಅರೆಸ್ಟ್ ಬೆನ್ನಲ್ಲೇ ಅವರ ಹಲೇ ಟ್ವೀಟ್ ಗಳು , ಪೂನಂ ಆರೋಪ ಸುದ್ದಿಗಳೂ ಕೂಡ ವೈರಲ್ ಆಗತೊಡಗಿವೆ..

ವರ್ಷದ ಫೆಬ್ರವರಿಯಲ್ಲಿ ಈ ಬಗ್ಗೆ ದೂರು ದಾಖಲಾಗಿತ್ತು, ತನಿಖೆ ವೇಳೆ ಪ್ರಕರಣದ ಮುಖ್ಯ ಆರೋಪಿ ರಾಜ್ ಕುಂದ್ರಾ ಎಂದು ತಿಳಿದುಬಂದಿದ್ದು ಅವರ ವಿರುದ್ಧ ಪ್ರಾಥಮಿಕ ಸಾಕ್ಷ್ಯಗಳನ್ನು ಒಟ್ಟುಗೂಡಿಸಿಕೊಂಡ ಬಳಿಕ ಅವರನ್ನು ಬಂಧಿಸಲಾಗಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ. ರಾಜ್ ಕುಂದ್ರಾ ಉದ್ಯಮಿ ಆಗಿದ್ದು, ಐಪಿಎಲ್ ತಂಡ ರಾಜಸ್ಥಾನ ರಾಯಲ್ಸ್‌ನ ಮಾಲೀಕರು ಸಹ ಆಗಿದ್ದಾರೆ.  ಈ ನಡುವೆ ಮಾಡೆಲ್ ಒಬ್ಬರು ರಾಜ್ ಕುಂದ್ರಾ ಬೆಂಬಲಕ್ಕೆ ಬಂದಿದ್ದು, ರಾಜ್ ಕುಂದ್ರ ತಪ್ಪು ಮಾಡಿಲ್ಲ.. ಪಾರ್ನ್ ವಿಡಿಯೋಸ್ ಶುಟ್ ಮಾಡಿಸಿಲ್ಲ. ಇವು ಬೋಲ್ಡ್ ವಿಡಿಯೋಸ್. ಎರಿಯೋಟಿಕ್ ವಿಡಿಯೋಗಳನ್ನ ಪಾರ್ನ್ ವಿಡಿಯೋಗಳ ಜೊತೆಗೆ ಸೇರಿಸಬೇಡಿ ಎಂದಿದ್ದಾರೆ. ಕಳೆದ ವರ್ಷದಿಂದ ಅಶ್ಲೀಲ ಚಿತ್ರೀಕರಣ ದಂಧೆಯ ಹಿಂದೆ ಬಿದ್ದಿದ್ದ ಪೊಲೀಸರು ದೊಡ್ಡ ಜಾಲವನ್ನು ಪತ್ತೆ ಮಾಡಿ 9 ಜನರನ್ನು ಬಂಧಿಸಿದ್ದಾರೆ. ಅಲ್ಲದೇ ಇನ್ನೂ ಅನೇಕರ ಹೆಸರುಗಳು ಕೇಳಿ ಬರ್ತಿವೆ ಎನ್ನಲಾಗಿದೆ..

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd