ಕುಂದ್ರಾಗೆ 14 ದಿನಗಳ ಬಂಧನ – ಅಶ್ಲೀಲ ದಂಧೆಯಲ್ಲಿ ಕನ್ನಡ ನಟಿ..? ಪ್ರಕರಣದ ಬಗ್ಗೆ ಗೆಹನಾ ಬಿಚ್ಚಿಟ್ಟ ಸತ್ಯವೇನು..?
ಮುಂಬೈ: ಬಾಲಿವುಡ್ ನ ಸ್ಟಾರ್ ನಟಿ ಶಿಲ್ಪಾ ಶೆಟ್ಟಿ ಪತಿ , ಉದ್ಯಮಿ ರಾಜ್ ಕುಂದ್ರಾ ಅಶ್ಲೀಲ ವಿಡಿಯೋಗಳ ನಿರ್ಮಾಣ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದು, 14 ದಿನಗಳ ವರೆಗೂ ಮತ್ತೆ ಅವರನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.. ಈ ನಡುವೆ ಪ್ರಕರಣದ ಆರಂಭದಿಂದಲೂ ರಾಜ್ ಕುಂದ್ರಾ ವಿರುದ್ಧ ಆರೋಪ ಮಾಡುತ್ತಲೇ ಬಂದಿರುವ ನಟಿ ಶರ್ಲಿನ್ ಗೂ ಬಂಧನ ಭೀತಿ ಎದುರಾಗಿದೆ.. ಹೀಗಾಗಿಯೇ ನಟಿ ಶೆರ್ಲಿನ್ ಚೋಪ್ರಾ ನಿರೀಕ್ಷಣಾ ಜಾಮೀನು ಕೋರಿ ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದಾರೆ. ರಾಜ್ ಕುಂದ್ರಾಗೆ ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿದೆ.
ಅಲ್ಲದೇ ಪ್ರಕರಣದಲ್ಲಿ ಅನೇಕರ ಹೆಸರುಗಳು ಕೇಳಿ ಬರುತ್ತಿದೆ.. ಕನ್ನಡದ ಕೋದಂಡರಾಮ , ನಮ್ಮಣ್ಣದಂತಹ ಹಲವು ಸಿನಿಮಾಗಳಲ್ಲಿ ನಟಿಸಿರುವ ನಟಿ ಫ್ಲೋರಾ ಸೈನಿ ಹೆಸರು ಕೇಳಿಬರುತ್ತಿದ್ದು, ಪೊಲೀಸರಿಂದ ನಟಿಗೆ ಸಮನ್ಸ್ ಜಾರಿಯಾಗುವ ಸಾಧ್ಯತೆ ದಟ್ಟವಾಗಿದೆ. ಹಲವು ನಟಿಯರನ್ನು ಮತ್ತು ಮಾಡೆಲ್‍ಗಳನ್ನು ಬಳಸಿಕೊಂಡು ರಾಜ್‍ಕುಂದ್ರಾ ನೀಲಿ ಚಿತ್ರಗಳನ್ನು ನಿರ್ಮಾಣ ಮಾಡುತ್ತಿದ್ದರು ಎನ್ನುವ ಆರೋಪ ಕೇಳಿಬಂದಿತ್ತು. ಆದರೆ ಇದೀಗ ಕನ್ನಡದ ಕೆಲವು ಚಿತ್ರಗಳಲ್ಲಿ ನಟಿಸಿರುವ ಫ್ಲೋರಾ ಸೈನಿ ಹೆಸರನ್ನು ಕೂಡ ಈಗ ಎಳೆದು ತರಲಾಗಿದೆ.
ಹಿಂದಿ, ತೆಲುಗು, ತಮಿಳು ಮತ್ತು ಪಂಜಾಬಿ ಸಿನಿಮಾ ಪ್ರೇಕ್ಷಕರಿಗೂ ಅವರು ಪರಿಚಿತರಾಗಿದ್ದಾರೆ. ಆದರೆ ಇವರ ಹೆಸರು ನೀಲಿ ಚಿತ್ರಗಳ ದಂಧೆಯ ವಿಷಯದಲ್ಲಿ ಪ್ರಸ್ತಾಪ ಆಗಲು ಕಾರಣವಾಗಿರುವುದು ರಾಜ್ ಕುಂದ್ರಾ ಮತ್ತು ಉಮೇಶ್ ಕಾಮತ್ ಎಂಬುವವರ ನಡುವೆ ನಡೆದ ವಾಟ್ಸ್ ಆ್ಯಪ್ ಚಾಟ್ ಮಾಡಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ನಟಿ , ನಾನು ಸುಮ್ಮನೆ ಮೌನವಾಗಿದ್ದರೆ, ನಾನು ಏನೋ ಮುಚ್ಚಿಡುತ್ತಿದ್ದೇನೆ ಎಂದು ಜನರು ಊಹಿಸುತ್ತಾರೆ. ಇಬ್ಬರು ವ್ಯಕ್ತಿಗಳು ಅವರ ಚಾಟ್‍ನಲ್ಲಿ ನನ್ನ ಬಗ್ಗೆ ಚರ್ಚೆ ಮಾಡುತ್ತಾರೆ ಎಂದರೆ ಅವರ ಕೃತ್ಯದಲ್ಲಿ ನಾನೂ ಭಾಗಿ ಆಗಿದ್ದೇನೆ ಎಂದರ್ಥವಲ್ಲ ಎಂದು ಹೇಳಿದ್ದಾರೆ.
ನಾನು ಯಾವುದೇ ಸಿನಿಮಾ ಹಿನ್ನೆಲೆಯ ಕುಟುಂಬದಿಂದ ಬಂದವಳಲ್ಲ. ಹಾಗಾಗಿ ನನ್ನ ಹೆಸರನ್ನು ಇದರಲ್ಲಿ ಎಳೆದು ತರಲಾಗಿದೆ. ಇದರಿಂದ ನನ್ನ ಹೆಸರು ಕೆಡಿಸಲು ಸಾಧ್ಯವಿಲ್ಲ. ರಾಜ್‍ಕುಂದ್ರಾ ಅಥವಾ ಅವರ ಕಡೆಯವರು ನನ್ನನ್ನು ಯಾವತ್ತೂ ಭೇಟಿ ಆಗಿಲ್ಲ. ಒಂದು ವೇಳೆ ಅವರು ನನಗೆ ಆಫರ್ ನೀಡಿದ್ದರೂ ಕೂಡ ನಾನು ಒಪ್ಪಿಕೊಳ್ಳುತ್ತಿರಲಿಲ್ಲ. ಯಾಕೆಂದರೆ ಈ ರೀತಿಯ ಹೊಸ ಪ್ಲಾಟ್‍ಫಾರ್ಮ್‍ಗಳಲ್ಲಿ ನಾನು ನಟಿಸುತ್ತಿಲ್ಲ ಎಂದು ಇನ್ಸ್ಟಾಗ್ರಾಮ್ ನಲ್ಲಿ ವಿಡಿಯೋ ಶೇರ್ ಮಾಡಿ ಸ್ಪಷ್ಟನೆ ನೀಡಿದ್ದಾರೆ.. ಈ ನಡುವೆ ಮತ್ತೊಂದು ಹೊಸ ಟ್ವಿಸ್ಟ್ ಪ್ರಕರಣಕ್ಕೆ ಸಿಕ್ಕಿದೆ.. ಆರಂಭದಿಂದಲೂ ಕುಂದ್ರಾಗೆ ಸಪೋರ್ಟ್ ಮಾಡುತ್ತಾ ಬಂದಿರುವ ಮಾಡೆಲ್ ಗೆಹನಾ ಪ್ರಕರಣ ಸಂಪೂರ್ಣ ಮಾಹಿತಿ ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ.
ಗೆಹನಾ ವಸಿಷ್ಠಿ ಪ್ರಕರಣದ ಬಗ್ಗೆ ಹಾಗೂ ರಾಜ್ ಕುಂದ್ರಾಗೂ ಅವರಿಗೂ ಇರುವ ಸಂಬಂಧ. ಅಶ್ಲೀಲ ವಿಡಿಯೋ ಪ್ರಕರಣ, ತಾವು ರಾಜ್ ಕುಂದ್ರಾ ಸಂಸ್ಥೆಗಾಗಿ ಮಾಡಿ ಕೊಡುತ್ತಿದ್ದ ವಿಡಿಯೋ ಎಲ್ಲದರ ಬಗ್ಗೆ ವಿವರವಾಗಿ ಮಾತನಾಡಿ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಕಳೆದ ವರ್ಷದ ಅಕ್ಟೋಬರ್ ವೇಳೆಗೆ ನನಗೆ ರಾಜ್‌ಕುಂದ್ರಾ ಮ್ಯಾನೇಜರ್‌ನಿಂದ ಕರೆ ಬಂತು. ನಿಮ್ಮ ವೈಯಕ್ತಿಕ ಆಪ್ ಮಾಡಿಕೊಡುತ್ತೇವೆ. ಈಗಾಗಲೇ ಶೆರ್ಲಿನ್, ಪೂನಂ ಪಾಂಡೆಗೆ ಮಾಡಿಕೊಟ್ಟಿದ್ದೇವೆ. ನೀವು ಒಂದು ಆಪ್ ಮಾಡಿಕೊಳ್ಳಿ. ನಿಮಗೆ ಒಪ್ಪಿಗೆಯಾಗುವ ಕಂಟೆಂಟ್ ಅನ್ನೇ ನೀವು ಹಾಕಿರಿ. ಬಂದ ಹಣವನ್ನು ಹಂಚಿಕೊಳ್ಳೋಣ ಎಂದರು. ರಾಜ್ ಅನ್ನು ಸಹ ನಾನು ಭೇಟಿಯಾದೆ, ಅವರು ಸಹ ನಿಮಗೆ ಸರಿ ಎನಿಸುವ ವಿಡಿಯೋಗಳನ್ನಷ್ಟೆ ಹಾಕಿರಿ, ಗ್ಲಾಮರಸ್ ಆಗಿಯೇ ಇರಬೇಕೆಂಬ ಒತ್ತಡ ಇಲ್ಲ ಎಂದಿದ್ದರು ಎಂದು ಮಾಹಿತಿ ನೀಡಿದ್ದಾರೆ.
ಅಲ್ಲದೇ ನಾನು ಜನವರಿ ವರೆಗೆ ಆಪ್ ನಡೆಸಿದೆ ನಂತರ ಅದನ್ನು ಬಂದ್ ಮಾಡಿದೆ. ಆ ನಂತರ ಮತ್ತೆ ಅವರು ನನ್ನನ್ನು ಸಂಪರ್ಕಿಸಿ ಹಾಟ್‌ಶಾಟ್ಸ್ ಆಪ್‌ಗಾಗಿ ಸಿನಿಮಾ ಒಂದನ್ನು ಮಾಡಿಕೊಡಲು ಕೇಳಿದರು. ಅಂತೆಯೇ ನಾನು ಒಪ್ಪಿಕೊಂಡು ಸಿನಿಮಾ ಮಾಡುತ್ತಿದ್ದೆ. ನಟ-ನಟಿಯರ ವಿಷಯವನ್ನು ನಮ್ಮ ಮ್ಯಾನೇಜರ್ ನೋಡಿಕೊಳ್ಳುತ್ತಿದ್ದರು. ಶೂಟ್ ಸಹ ಚೆನ್ನಾಗಿಯೇ ನಡೆಯುತ್ತಿತ್ತು ಎಂದು ತಿಳಿಸಿದ್ದಾರೆ. ಫೆಬ್ರವರಿಯಲ್ಲಿ ಏಕಾ-ಏಕಿ ನಮ್ಮ ಸೆಟ್ ಮೇಲೆ ಪೊಲೀಸರು ದಾಳಿ ನಡೆಸಿ ಕೆಲವರನ್ನು ಬಂಧಿಸಿದರು. ಆಗ ನಾನು ಸೆಟ್ ನಲ್ಲಿ ಇರಲಿಲ್ಲ. ನಂತರ ನನ್ನ ಮನೆಗೂ ಬಂದು ವಾರೆಂಟ್ ಇಲ್ಲದೆ ಮನೆಯನ್ನೆಲ್ಲ ಹುಡುಕಿ ಮೊಬೈಲ್, ಲ್ಯಾಪ್‌ಟಾಪ್ ಎಲ್ಲವನ್ನೂ ಹೊತ್ತೊಯ್ದರು. ಒಂದು ದಿನ ಪೂರ್ತಿ ನನ್ನ ಮನೆಯಲ್ಲೇ ಪೊಲೀಸರು ಇದ್ದರು. ನನ್ನನ್ನು ಎರಡು ದಿನ ವಿಚಾರಣೆ ನಡೆಸಿ, ರಾಜ್ ಕುಂದ್ರಾ ಬಗ್ಗೆ ಪ್ರಶ್ನೆ ಕೇಳಿದರು. ರಾಜ್ ಕುಂದ್ರಾ ವಿರುದ್ಧ ಹೇಳಿಕೆ ನೀಡುವಂತೆ ಸಹ ಹೇಳಿದರು. ಆದರೆ ನಾನು ಒಪ್ಪಲಿಲ್ಲ ಎಂದಿದ್ದಾರೆ.
ಅಷ್ಟೇ ಅಲ್ಲದೆ, ಸಿಸಿಬಿಯವರು ಮನೆ ತಪಾಸಣೆ ನಡೆಸಿದ ಬಳಿಕ ನನ್ನ ಮನೆಯಲ್ಲಿದ್ದ 10 ಲಕ್ಷ ಮೌಲ್ಯದ ಆಭರಣಗಳು ಸಹ ಮಾಯವಾಗಿವೆ ಎಂದು ಆರೋಪಿಸಿದ್ದಾರೆ . ಬಳಿಕ ನನ್ನನ್ನು ಬಂಧಿಸಲಾಯಿತು. ನನ್ನ ಪೊಲೀಸ್ ಕಸ್ಟಡಿ ಅವಧಿ ಮುಗಿದ ಬಳಿಕ ನನಗೆ ಜಾಮೀನು ದೊರಯಿತು. ಆ ನಂತರ ಮತ್ತೆ ನನ್ನನ್ನು ಬೇರೆ ಠಾಣೆಯ ಪೊಲೀಸರು ಬಂಧಿಸಿದರು. ನನ್ನ ವಿರುದ್ಧ ಸಾಮೂಹಿಕ ಅತ್ಯಾಚಾರದ ಪ್ರಕರಣ ದಾಖಲಾಗಿತ್ತು. ಅತ್ಯಾಚಾರ ದೂರು ನೀಡಿದ್ದ ಮಹಿಳೆಯನ್ನು ಠಾಣೆಯಲ್ಲಿ ಭೇಟಿಯಾದೆ. ಸಾಮೂಹಿಕ ಅತ್ಯಾಚಾರ ನಡೆಯುವಾಗ ನೀವು ಸುಮ್ಮನೆ ಕೂತು ನೋಡುತ್ತಿದ್ದಿರಿ ಎಂದು ಆಕೆ ದೂರಿದಳು ಎಂದು ಹೇಳಿದ್ದಾರೆ..
ಇನ್ನೂ ಆಕೆ ತನ್ನ ಮೇಲೆ ಅತ್ಯಾಚಾರ ಆಗಿದೆ ಎಂದು ಆರೋಪಿಸಿರುವ ದಿನವೇ ಆಕೆ ಸೆಟ್ ನಲ್ಲಿ ಡಾನ್ಸ್ ಮಾಡುತ್ತಿರುವ ವಿಡಿಯೋ ನನ್ನ ಬಳಿ ಇದೆ. ಚಿತ್ರೀಕರಣದ ಸಂಭಾವನೆ ಕಳಿಸಿದ ದಾಖಲೆಗಳು ಇವೆ. ಆ ಚಿತ್ರೀಕರಣ ಆದಮೇಲೆ ಆಕೆ ಪ್ರತಿದಿನ ಸಂದೇಶ ಕಳಿಸಿ, ನನಗೆ ನಿಮ್ಮ ಇನ್ನೊಂದು ಸಿನಿಮಾದಲ್ಲಿ ಅವಕಾಶ ಕೊಡಿ ಎಂದು ಕೇಳಿರುವ ಸಂದೇಶಗಳು ಇವೆ. ಆ ಸಿನಿಮಾಕ್ಕಾಗಿ ಪ್ರೊಮೋಷನ್ ವಿಡಿಯೋ ಕೊಟ್ಟಿದ್ದಾಳೆ. ಆಕೆ ತನ್ನ ಮೇಲೆ ಅತ್ಯಾಚಾರವಾಗಿದೆ ಎಂದು ಹೇಳಿದ ದಿನದಿಂದ ಸತತವಾಗಿ ಹತ್ತು ದಿನ ಪ್ರತಿದಿನ ಒಂದೊಂದು ಟಿಕ್ ಟಾಕ್ ವಿಡಿಯೋ ಮಾಡಿ ಹಾಕಿದ್ದಾಳೆ. ಸಾಮೂಹಿಕ ಅತ್ಯಾಚಾರವಾದ ಮಹಿಳೆಯೊಬ್ಬಳು ಇದನ್ನೆಲ್ಲ ಮಾಡುತ್ತಾಳೆಯೇ ಎಂದು ಪ್ರಶ್ನಿಸಿದ್ದಾರೆ.
ಈ ವಿಡಿಯೋವನ್ನು ದಯವಿಟ್ಟು ಸುಮಲತಾ ಅವರಿಗೆ ತಲುಪಿಸಿ, ನನ್ನ ಅಕ್ಕನಿಗೆ ನ್ಯಾಯ ಕೊಡಿಸಿ : ವಿಜಯಲಕ್ಷ್ಮಿ
ಅಂತಿಮವಾಗಿ ನನ್ನ ವಿರುದ್ಧ ಯಾವುದೇ ಸಾಕ್ಷ್ಯ ಪೊಲೀಸರಿಗೆ ಸಿಗಲಿಲ್ಲ. ಅಲ್ಲದೆ ಅವರು ಹೇಳಿದಂತೆ ನಾನು ರಾಜ್ ಕುಂದ್ರಾ ವಿರುದ್ಧ ಯಾವುದೇ ಹೇಳಿಕೆ ನೀಡಲಿಲ್ಲ ಹಾಗಾಗಿ ನನ್ನನ್ನು ಪ್ರಕರಣದಲ್ಲಿ ಸಿಕ್ಕಿ ಹಾಕಿಸಲು ಈ ತಂತ್ರ ಬಳಸಿದರು. ಮೊದಲ ಬಾರಿಗೆ ಪೊಲೀಸರು ನನಗೆ ನೊಟೀಸ್ ಕಳಿಸಿದಾಗಲೂ ನಾನು ನಿರೀಕ್ಷಣಾ ಜಾಮೀನಿಗೆ ಅರ್ಜಿ ಹಾಕಲಿಲ್ಲ. ಈಗಲೂ ಅಷ್ಟೆ, ನಾನು ತಪ್ಪು ಮಾಡಿಲ್ಲ ಹಾಗಾಗಿ ನಾನು ಧೈರ್ಯವಾಗಿದ್ದೇನೆ. ಇದನ್ನೆಲ್ಲ ನಿಮ್ಮ ಮುಂದೆ ಧೈರ್ಯದಿಂದ ಹೇಳಿಕೊಳ್ಳುತ್ತಿದ್ದೇನೆ ಎಂದಿದ್ದಾರೆ. ಜುಲೈ 19ರಂದು ರಾಜ್ ಕುಂದ್ರಾ ವಿಚಾರಣೆಗೆ ಆಗಮಿಸಿದ್ದರು. ಹೆಚ್ಚಿನ ವಿಚಾರಣೆಗಾಗಿ ಮಧ್ಯಾಹ್ನ 2 ಗಂಟೆಗೆ ರಾಜ್ ಕುಂದ್ರಾರನ್ನ ಪೊಲೀಸರು ಬಂಧಿಸಿದ್ದರು. ರಾಜ್ ಕುಂದ್ರಾ ಪ್ರಕರಣದ ಪ್ರಮುಖ ಆರೋಪಿಯಾಗಿದ್ದು, ಇನ್ನೂ ಹಲವರರನ್ನು ಬಂಧಿಸಲಾಗಿದೆ.