2021ರ ಬಾಲಿವುಡ್ ನ ಟಾಪ್ 5 ನಟಿಯರಿವರು..!! ನಂಬರ್ 1 ನಟಿ ಯಾರು..???
2021ರಲ್ಲಿ ಬಾಲಿವುಡ್ ನ ಟಾಪ್ ನಟಿಯರು ಯಾರೆಂದು ಮೂಡ್ ಆಫ್ ದಿ ನೇಶನ್ ಹೆಸರಿನಲ್ಲಿ ಸಮೀಕ್ಷೆಯೊಂದನ್ನ ನಡೆಸಲಾಗಿದ್ದು, ಟಾಪ್ 1 ರಲ್ಲಿ ಅಚ್ಚರಿಯ ಹೆಸರು ಬಹಿರಂಗವಾಗಿದೆ. ಮೊದಲ ಸ್ಥಾನದಲ್ಲಿ ಬಾಲಿವುಡ್ ನಟಿ ಕತ್ರಿನಾ ಕೈಫ್ ಸ್ಥಾನ ಗಳಿಸಿದ್ದಾರೆ.. 2ನೇ ಸ್ಥಾನದಲ್ಲಿದ್ದಾರೆ ಬಾಲಿವುಡ್ ನ ಕ್ವೀನ್ ದೀಪಿಕಾ ಪಡುಕೋಣೆ , ಮೂರನೇ ಸ್ಥಾನದಲ್ಲಿ ಪ್ರಿಯಾಂಕಾ ಚೋಪ್ರಾ , ನಾಲ್ಕನೇ ಸ್ಥಾನದಲ್ಲಿ ಕಂಗನಾ ರಣಾವತ್ , ಐದನೇ ಸ್ಥಾನದಲ್ಲಿ ಕರೀನಾ ಕಪೂರ್ ಇದ್ದಾರೆ..
ಅಂದ್ಹಾಗೆ ಕತ್ರೀನಾ ಕೈಫ್ ಹೇಗೆ ನಂಬರ್ ಸ್ಥಾನದಲ್ಲಿದ್ದಾರೆ ಅನ್ನೋದನ್ನ ಯೋಚಿಸಿದ್ರೆ ಉತ್ತರ ಸಾಕಷ್ಟು ಸಿಗುತ್ತವೆ. ಆದ್ರೆ 2 ಕಾರಣಗಳು ಹೈಲೈಟ್ ಆಗುತ್ತವೆ.. ಒಂದು ಅವರ ಮದುವೆಯ ಸಸ್ಪೆನ್ಸ್ , ಸೀಕ್ರೆಟ್ , ಟ್ರೆಮಡಿಂಗ್ , ಎರಡನೇಯದ್ದು , ಅಕ್ಷಯ್ ಕುಮಾರ್ ಹಾಗೂ ಅವರ ನಟನೆಯ ಸೂರ್ಯವಂಶಿ ಸಿನಿಮಾ ಬ್ಲಾಕ್ ಬಾಸ್ಟರ್ ಆಗಿ ಬಾಕ್ಸ್ ಆಫೀಸ್ ನಲ್ಲಿ ರೆಕಾರ್ಡ್ ಮಾಡಿದ್ದು..
ಇನ್ನೂ ದೀಪಿಕಾ ಪಡುಕೋಣೆ ಅತಿಥಿ ಪಾತ್ರಗಳಲ್ಲಿ ಬಿಟ್ಟು ಪೂರ್ಣ ಪ್ರಮಾಣದಲ್ಲಿ ನಾಯಕಿಯಾಗಿರುವ ಸಿನಿಮಾ ಕಳೆದ ಒಂದು ವರ್ಷದಿಂದೀಚೆಗೆ ಬಿಡುಗಡೆ ಆಗೇ ಇಲ್ಲ.. ಆದ್ರೂ 83 ಸಿನಿಮಾದಲ್ಲಿ ಪತಿ ರಣವೀರ್ ಸಿಂಗ್ ಜೊತೆಗೆ ಬಣ್ಣ ಹಚ್ಚಿದ್ದ ಕಾರಣಕ್ಕೆ ಲೈಮ್ ಲೈಟ್ ನಲ್ಲಿಯೇ ಇದ್ದವರು..
ಐಟಂ ಹಾಡಿಗೆ ಸೊಂಟ ಬಳುಕಿಸಿ ಕೋಟಿ ಕೇಳುವ ನಟಿಯರಿವರು….
ಮತ್ತೊಂದೆಡೆ ಪ್ರಿಯಾಂಕಾ. ಪತಿ ನಿಕ್ ಜಾನಸ್ ಜೊತೆಗಿನ ಡಿವೋರ್ಸ್ ವದಂತಿ… ಅವರ ಅಭಿನಯದ ಮ್ಯಾಟ್ರಿಕ್ಸ್ ( ಹಾಲಿವುಡ್ ಸಿನಿಮಾ ) ರಿಲೀಸ್ ನಿಂದ ಸುದ್ದಿಯಲ್ಲೇ ಇದ್ದವರು. ಕಂಗನಾ ರಣಾವತ್ ಯಾವಾಗಲೂ ಟಾಪ್ 5 ನಟಿಯರಲ್ಲಿ ಗುರುತಿಸಿಕೊಳ್ಳುವ ನಟಿಯೇ..ಸದಾ ವಿವಾದಾತ್ಮಕ ಹೇಳಿಕೆಗಳ ಮೂಲಕಸುದ್ದಿಯಲ್ಲಿರುತ್ಥಾರೆ ಕಂಗನಾ.. ಕರೀನಾ ಕಪೂರ್ 2 ನೇ ಮಗುವಿನ ಜನನದ ನಂತರ ಸಿನಿಮಾರಂಗದಿಂದ ದೂರವೇ ಇದ್ದಾರೆ.. ಹಾಗೇ ನೋಡಿದ್ರೆ , ವರ್ಷಗಳಿಂದೀಚೆಗೆ ಅವರ ಸಿನಿಮಾ ಯಾವುದೂ ರಿಲೀಸ್ ಆಗದೇ ಇದ್ರು ಅವರ ಫ್ಯಾನ್ ಫಾಲೋವರ್ಸ್ ಗಳಿಂದ ಅವರು ಸದಾ ಟ್ರೆಂಡ್ ಆಗ್ತಿದ್ದರು..