ಬಾಂಬ್ ಸ್ಪೋಟ್ | 7 ಜನರಿಗೆ ಗಾಯ
ಪಾಟ್ನಾ: ಬಾಂಬ್ ಸ್ಫೋಟಗೊಂಡು ಸುಮಾರು 7 ಜನರು ಗಾಯಗೊಂಡಿರುವ ಘಟನೆ ಬಿಹಾರದ ಲಖಿಸರಾಯ್ ಜಿಲ್ಲೆಯಲ್ಲಿ ನಡೆದಿದೆ.
ವಾಲಿಪುರ್ ಗ್ರಾಮದಲ್ಲಿ ಬೆಳಗ್ಗೆ 7 ಗಂಟೆ ಸುಮಾರಿಗೆ ಬಾಂಬ್ ಸ್ಫೋಟಗೊಂಡಿದೆ. ಘಟನೆಯಲ್ಲಿ 7 ಜನರಿಗೆ ಸಣ್ಣಪುಟ್ಟ ಗಾಯಗೊಂಡಿದ್ದು, ಇದೀಗ ಅವರನ್ನು ಪಿಪಾರಿಯಾದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಪ್ರಕರಣ: ಪಿಪಾರಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ಲುಟನ್ ರಜಾಕ್ ಅವರಿಗೆ ಸೇರಿದ ಮನೆಯ ಹಿಂಬದಿಯಲ್ಲಿ ಪ್ಲಾಸ್ಟಿಕ್ ಚೀಲ ಪತ್ತೆಯಾಗಿದ್ದು, ಈ ಚೀಲವನ್ನು ಬಾಲಕನೊಬ್ಬ ತೆರೆದು ನೋಡಿದಾಗ ಬಾಂಬ್ ಸ್ಫೋಟಗೊಂಡಿದೆ. ಅಲ್ಲದೇ ಬಾಲಕನ ಪಕ್ಕದಲ್ಲಿಯೇ ನಿಂತಿದ್ದ ಆರು ಮಂದಿ ಕೂಡ ಗಾಯಗೊಂಡಿದ್ದಾರೆ.
ಘಟನೆ ಕುರಿತು ಪ್ರತಿಕ್ರಿಯಿಸಿದ ಲಖಿಸರಾಯ್ ಎಸ್ಪಿ ಸುಶೀಲ್ ಕುಮಾರ್ ಅದೃಷ್ಟವಶಾತ್ ಬಾಂಬ್ ತೀವ್ರತೆ ಕಡಿಮೆ ಇದೆ. ಸದ್ಯ ಘಟನಾ ಸ್ಥಳವನ್ನು ಪರಿಶೀಲಿಸುತ್ತಿದ್ದ ವೇಳೆ ಇನ್ನೂ ಮೂರು ಕಡಿಮೆ ತೀವ್ರತೆಯ ಬಾಂಬ್ಗಳು ಪತ್ತೆಯಾಗಿದೆ. ಸದ್ಯ ಗಾಯಾಳುಗಳ ಹೇಳಿಕೆಯನ್ನು ಪಡೆದುಕೊಂಡಿದ್ದು, ಬಾಂಬ್ ಹೇಗೆ ಇರಿಸಲಾಯಿತು ಎಂಬುದರ ಕುರಿತಂತೆ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.