ಬೆಂಗಳೂರಿನ ಶಾಲೆಗಳಿಗೆ ಹುಸಿ ಬಾಂಬ್ ಬೆದರಿಕೆ ಪ್ರಕರಣ
ಪ್ರಕರಣದ ತನಿಖೆ ನಡೆಸುಉತ್ತಿರುವ ಪೊಲೀಸರಿಗೆ ಸಿಕ್ಕ ಮಹತ್ವದ ಸುಳಿವು
ಮೇಲ್ ಗಳ ಕಳಿಸೋದ್ರ ಹಿಂದಿದೆ 17 ರ ಬಾಲಕನ ಕೈವಾಡ
ತಮಿಳುನಾಡು ಮೂಲದ ಸಲೀಂ ಪ್ರಕರಣದ ಮಾಸ್ಟರ್ ಮೈಂಡ್
ಕಳೆದು ತಿಂಗಳು ಇಡೀ ರಾಜ್ಯಾದ್ಯಂತ ಸಂಚಲನವನ್ನೇ ಸೃಷ್ಟಿ ಮಾಡಿದ್ದ ಶಾಲೆಗಳಿಗೆ ಬಾಂಬ್ ಬೆದರಿಕೆ ಮೇಲ್ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಇದೀಗ ಮಹತ್ವದ ಸುಳಿವೊಂದು ಸಿಕ್ಕಿದೆ.. ಬೆಂಗಳೂರಿನ ಹತ್ತಕ್ಕೂ ಅಧಿಕ ಶಾಲೆಗಳಿಗೆ ಹುಸಿ ಬಾಂಬ್ ಕರೆ ಬಂದಿತ್ತು. ಮೇಲ್ ಮಾಡಿದ್ದ ದುಷ್ಕರ್ಮಿಗಳು ಪವರ್ ಫುಲ್ ಬಾಂಬ್ ಇರಿಸಲಾಗಿದ್ದು, ನೂರಾರು ಜೀವಗಳನ್ನು ಉಳಿಸಿಕೊಳ್ಳಿ ಎಂದು ಹೇಳಿದ್ದರು.
ಈ ಹುಸಿ ಬಾಂಬ್ ಮೇಲ್ ಕಳುಹಿಸಲು 17 ವರ್ಷದ ಬಾಲಕ ಎಂದು ತಿಳಿದು ಬಂದಿದೆ. ಪೊಲೀಸರು ಪತ್ತೆ ಮಾಡಿದ್ದು, ತನಿಖೆ ಮುಂದುವರಿಸಿದ್ದಾರೆ. ಇದರ ಹಿಂದೆ ತಮಿಳುನಾಡು ಮೂಲದ ಸಲೀಂ ಎಂಬಾತನ ಕೈವಾಡವಿರುವುದು ಗೊತ್ತಾಗಿದೆ..
ಸಾಫ್ಟ್ ವೇರ್ ಕಂಪನಿ ಮಾಡುವ ಆಶಯ ಹೊಂದಿದ್ದ ಬಾಲಕ ಸಲೀಂ ತಾನು ಸಿದ್ಧಪಡಿಸಿದ್ದ ಕಂಪ್ಯೂಟರ್ ಪ್ರೋಗ್ರಾಂನ್ನು ವಿದೇಶಿಯರಿಗೆ ಮಾರಾಟ ಮಾಡಿದ್ದನು. ಇದೇ ಸಾಫ್ಟ್ ವೇರ್ ನಿಂದ ದುಷ್ಕರ್ಮಿಗಳು ಬೆಂಗಳೂರು ಮತ್ತು ಭೋಪಾಲ್ ಶಾಲೆಗಳಿಗೆ ಬೆದರಿಕೆಯ ಮೇಲ್ ಕಳುಹಿಸಿದ್ದರು ಎನ್ನಲಾಗಿದೆ.
ಅಂದ್ಹಾಗೆ ಈತ ಬೋಟ್ ಸಾಫ್ಟ್‌ವೇರ್ ಪ್ರೊಗ್ರಾಮ್ ಡೆವೆಲಪ್ ಮಾಡಿದ್ದನು ಎಂಬ ಮಾಹಿತಿ ಸಿಕ್ಕಿದೆ . ಇದೊಂದು ಮಲ್ಟಿಪಲ್ ಮೇಲ್ ಕಳಿಸುವ ಸಾಫ್ಟ್‌ವೇರ್ ಬೋಟ್ ಆಗಿದೆ. ಇದನ್ನು ಟೆಲಿಗ್ರಾಂ ಆಪ್ ಮೂಲಕ ವಿದೇಶಿಯರಿಗೆ ಸಲೀಂ ಕಳುಹಿಸಿದ್ದನು. 200 ಡಾಲರ್ ಬಿಟ್ ಕಾಯಿನ್ ಮೂಲಕ ಸಾಫ್ಟ್‌ವೇರ್ ಮಾರಾಟ ಮಾಡಿರುವ ಮಾಹಿತಿ ಲಭ್ಯವಾಗಿದೆ.