ನವದೆಹಲಿ: ಭಾರತ ಹಾಗೂ ವಿದೇಶಿ ವಿಮಾನಗಳು ಸೇರಿದಂತೆ 20ಕ್ಕೂ ಅಧಿಕ ವಿಮಾನಗಳಿಗೆ ಬಾಂಬ್ ಬೆದರಿಕೆ (Bomb Threats) ಕರೆ ಬಂದಿದ್ದು, ಐಪಿ ವಿಳಾಸವನ್ನು (IP addresses) ಕೇಂದ್ರ ಗುಪ್ತಚರ ಸಂಸ್ಥೆಗಳು ಪತ್ತೆ ಹಚ್ಚಿವೆ. ಐಪಿ ವಿಳಾಸಗಳು ಲಂಡನ್ ಮತ್ತು ಜರ್ಮನಿಯಲ್ಲಿ ಪತ್ತೆಯಾಗಿವೆ ಎಂದು ವರದಿಯಾಗಿದೆ.
ಅಕ್ಟೋಬರ್ 14ರಿಂದ 17ರ ವರೆಗೆ ಸುಮಾರು 20ಕ್ಕೂ ಅಧಿಕ ವಿಮಾನಗಳಿಗೆ ಬಾಂಬ್ ಬೆದರಿಕೆ ಬಂದಿರುವ ಪ್ರಕರಮಗಳು ವರದಿಯಾಗಿವೆ. ಭಾರತ ಸೇರಿದಂತೆ ಅನೇಕ ವಿದೇಶಿ ವಿಮಾನಗಳಿಗೂ (Indian flights) ಬೆದರಿಕೆಯ ಕರೆ ಬಂದಿವೆ.
ಭದ್ರತಾ ಪಡೆಗಳು ತಪಾಸಣೆ ನಡೆಸಿದ ನಂತರ ಅವು ಹುಸಿ ಬಾಂಬ್ ಬೆದರಿಕೆ ಎಂಬುವುದು ತಿಳುದ ಬಂದಿದೆ. ಆದರೆ, ಕೇಂದ್ರ ಗುಪ್ತಚರ ಸಂಸ್ಥೆ ಬೆದರಿಕೆ ಮೂಲವನ್ನು ಪತ್ತೆ ಹಚ್ಚುವ ಕೆಲಸಕ್ಕೆ ಮುಂದಾಗಿತ್ತು. ಲಂಡನ್ ಮತ್ತು ಜರ್ಮನಿಯಲ್ಲಿ ವಿಳಾಸ ಪತ್ತೆಯಾಗಿದ್ದು, ಎಕ್ಸ್ ಖಾತೆಗಳನ್ನು ನಿಷ್ಕ್ರಿಯಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಗುಪ್ತಚರ ಸಂಸ್ಥೆಯ ಉನ್ನತ ಅಧಿಕಾರಿಯೊಬ್ಬರು, ನಾವು ಪ್ರಾಥಮಿಕ ವರದಿಗಳನ್ನು ಸ್ವೀಕರಿಸಿದ್ದೇವೆ. ಈ ಮೂರು ಪ್ರತ್ಯೇಕ ಹ್ಯಾಂಡಲ್ ಗಳಿಂದ ಪೋಸ್ಟ್ ಮಾಡಲಾಗಿದೆ. ಲಂಡನ್ನಲ್ಲಿ ಪತ್ತೆಯಾದ 2 ಐಪಿ ವಿಳಾಸ ಸಾಮಾನ್ಯ ವಿಳಾಸವಾಗಿದೆ ಎಂದು ವರದಿ ಹೇಳಿವೆ.