ಚರ್ಮಕ್ಕೆ ಚರ್ಮ ಸ್ಪರ್ಶವಾಗದೇ ಇದ್ರೆ ಅದು ಲೈಂಗಿಕ ದೌರ್ಜನ್ಯವಲ್ಲ ಎಂದಿದ್ದ ಹೈಕೋರ್ಟ್ : ತೀರ್ಪಿಗೆ ತಡೆ ನೀಡಿದ ‘ಸುಪ್ರೀಂ’
ಇತ್ತೀಚೆಗಷ್ಟೇ ಕಳೆದ ವಾರ ಬಾಂಬೆ ಹೈಕೋರ್ಟ್ ನಾಗ್ಪುರ ಪೀಠ ನೀಡಿದ್ದ ತೀರ್ಪೊಂದು ಇಡೀ ದೇಶಾದ್ಯಂತ ತೀವ್ರ ವಿರೋಧಕ್ಕೆ ಕಾರಣವಾಗಿತ್ತು. ಭಾರಿ ವಿವಾದ ಸೃಷ್ಟಿ ಮಾಡಿತ್ತು. ಸಾಮಾಜಿಕ ಜಾಲತಾಣದಲ್ಲಿ ತೀರ್ಪಿನ ವಿರುದ್ಧ ದೊಡ್ಡ ಮಟ್ಟದ ಆಂದೋಲನವೇ ಶುರುವಾಗಿತ್ತು. ಹೈಕೋರ್ಟ್ ತೀರ್ಪಿನ ಕುರಿತು ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಕೂಡಲೇ ಸುಪ್ರೀಂಕೋರ್ಟ್ ಹೈಕೋರ್ಟ್ ನ ತೀರ್ಪಿಗೆ ಇಂದು ತಡೆ ನೀಡಿದೆ.
ಡೊನಾಲ್ಡ್ ಟ್ರಂಪ್ ವಾಗ್ದಂಡನೆಯಿಂದ ಖುಲಾಸೆಗೊಳ್ಳುವ ಸಾಧ್ಯತೆ
12 ವರ್ಷದ ಬಾಲಕಿಯೊಬ್ಬ ಎದೆಯನ್ನು ಸ್ಪರ್ಶಿಸಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪಿಗೆ ಸೆಷನ್ಸ್ ಕೋರ್ಟ್ ಪೋಕ್ಸೋ ಕಾಯ್ದೆ ಅಡಿ ನೀಡಿದ್ದ ಶಿಕ್ಷೆಯನ್ನು ರದ್ದು ಮಾಡುವ ಮೂಲಕ ಕೋರ್ಟ್ ಈ ರೀತಿ ತೀರ್ಪು ನೀಡಿತ್ತು. ಹೌದು ಬಟ್ಟೆ ಬಿಚ್ಚದೇ ಮಹಿಳೆಯ ಅಂಗಾಂಗವನ್ನು ಪುರುಷನೊಬ್ಬ ಸ್ಪರ್ಶ ಮಾಡಿದರೆ ಅದು ಲೈಂಗಿಕ ದೌರ್ಜನ್ಯವಾಗುವುದಿಲ್ಲ. ಅಂದ್ರೆ ಚರ್ಮಕ್ಕೆ ಚರ್ಮ ಸ್ಪರ್ಷವಾಗದೇ ಇದ್ದರೆ ಅದನ್ನ ಲೈಂಗಿಕ ದೌರ್ಜನ್ಯವೆಂದು ಪರಿಗಣಿಸಲಾಗುವುದಿಲ್ಲ ಎಂದು ಬಾಂಬೆ ಹೈಕೋರ್ಟ್ ನಾಗ್ಪುರ ಪೀಠ ತೀರ್ಪು ನೀಡಿತ್ತು.
ಹೆಂಡತಿ ಓಡಿಹೋದ ಸಿಟ್ಟು.. ಸೈಕೋ ಸೀರಿಯಲ್ ಕಿಲ್ಲರ್ ಗೆ ಬಲಿಯಾದ 18 ಅಮಾಯಕ ಮಹಿಳೆಯರು ..!
2016ರಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಹೈಕೋರ್ಟ್ ಈ ತೀರ್ಪು ನೀಡಿತ್ತು. ಸತೀಶ್ ಎಂಬಾಂತ ಬಾಲಕಿಗೆ ಚಾಲಕೇಟ್ ಆಮಿಷ ಒಡ್ಡಿ ಮನೆಗೆ ಕರೆದುಕೊಂಡು ಹೋಗಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ. ಆಕೆಯ ಖಾಸಗಿ ಭಾಗಗಳನ್ನು ಮುಟ್ಟಿ ಹಿಂಸೆ ನೀಡಿದ್ದ. ಈ ಹಿನ್ನೆಲೆಯಲ್ಲಿ ಆತನ ವಿರುದ್ಧ ದೂರು ದಾಖಲು ಮಾಡಲಾಗಿತ್ತು. ಸೆಷನ್ಸ್ ಕೋರ್ಟ್ ಪೋಕ್ಸೋ ಕಾಯ್ದೆ ಅಡಿ ಶಿಕ್ಷೆ ವಿಧಿಸಿತ್ತು. ಅದರೆ ಇದರ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಪುಷ್ಪಾ ಗನೇಡಿವಾಲಾ ಅವರು, ಆರೋಪಿ ಬಟ್ಟೆಯ ಮೇಲಿನಿಂದ ಆ ರೀತಿ ಸ್ಪರ್ಶಿಸಿರುವ ಕಾರಣ, ಇದು ಪೋಕ್ಸೋ ಕಾಯ್ದೆ ಅಡಿ ಲೈಂಗಿಕ ದೌರ್ಜನ್ಯದ ವ್ಯಾಖ್ಯಾನಕ್ಕೆ ಬರುವುದಿಲ್ಲ. ಲೈಂಗಿಕ ದೌರ್ಜನ್ಯ ಆಗಬೇಕಿದ್ದರೆ ದೇಹಕ್ಕೆ ದೇಹದ ಸ್ಪರ್ಶ ಆಗಬೇಕು ಎಂದಿದ್ದರು. ಈ ತೀರ್ಪು ಪ್ರಕಟವಾಗುತ್ತಲೇ ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿತ್ತು.
ಟ್ರ್ಯಾಕ್ಟರ್ ಜಾಥಾ ಹಿಂಸಾಚಾರ : 300 ಕ್ಕೂ ಅಧಿಕ ಪೊಲೀಸರಿಗೆ ಗಾಯ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








