ಹೆಂಡತಿ ಓಡಿಹೋದ ಸಿಟ್ಟು.. ಸೈಕೋ ಸೀರಿಯಲ್ ಕಿಲ್ಲರ್ ಗೆ ಬಲಿಯಾದ 18 ಅಮಾಯಕ ಮಹಿಳೆಯರು ..!
ಹೈದರಾಬಾದ್ : ಮದುವೆಯಾದ ಕೆಲವೇ ತಿಂಗಳಲ್ಲಿ ತನ್ನ ಹೆಂಡತಿ ಪರ ಪುರುಷನೊಂದಿಗೆ ಓಡಿಹೋಗಿದ್ದ ಕಾರಣಕ್ಕೆ ಮಾನಸಿಕವಾಗಿ ಸೈಕೋ ಆಗಿಬಿಟ್ಟಿದ್ದ ಪತಿಯೋರ್ವ 18 ಅಮಾಯಕ ಮಹಿಳೆಯ ಜೀವ ತೆಗೆದಿದ್ದಾನೆ. ಹೌದು ಹೆಂಡತಿ ಮೇಲಿನ ದ್ವೇಷಕ್ಕೆ ಈತ ಈವರೆಗೂ ಸುಮಾರು ಹದಿನೆಂಟು ಮಹಿಳೆಯರನ್ನು ಕೊಲೆ ಮಾಡಿದ್ದಾನೆ. ಇದೀಗ ಈ ಸೀರಿಯಲ್ ಕಿಲ್ಲರ್ ನನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ. 45 ವರ್ಷದ ಮೈನಾ ರಾಮುಲು ಬಂಧಿತ ಆರೋಪಿಯಾಗಿದ್ದಾನೆ. ಇತ್ತೀಚೆಗಷ್ಟೇ ನಡೆದಿದ್ದ ಇಬ್ಬರು ಮಹಿಳೆಯರ ಕೊಲೆ ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ ಈತನ ಅಸಲಿಯತ್ತು ಗೊತ್ತಾಗಿದೆ.
ಟ್ರ್ಯಾಕ್ಟರ್ ಜಾಥಾ ಹಿಂಸಾಚಾರ : 300 ಕ್ಕೂ ಅಧಿಕ ಪೊಲೀಸರಿಗೆ ಗಾಯ
ಮಾನಸಿಕ ಅಸ್ವಸ್ಥತೆಯಿದ್ದ ರಾಮುಲುನನ್ನು ಈ ಮುನ್ನ 21 ಪ್ರಕರಣಗಳಿಗೆ ಸಂಬಂಧಿಸಿದಂತೆ ಜೈಲಿಗೆ ಹಾಕಲಾಗಿತ್ತು. ಹದಿನಾರು ಮಹಿಳೆಯರ ಕೊಲೆಗಳು, ನಾಲ್ಕು ಆಸ್ತಿಪಾಸ್ತಿ ಸಂಬಂಧಿ ಪ್ರಕರಣ ಹಾಗೂ ಪೊಲೀಸ್ ಕಸ್ಟಡಿಯಿಂದ ಪರಾರಿಯಾದ ಪ್ರಕರಣಗಳು ಈತನ ಮೇಲಿದ್ದವು. ಅಲ್ದೇ ಈತ ಮೋಸ್ಟ್ ವಾಂಟೆಡ್ ಕೈದಿಯಾಗಿದ್ದ . ಈತನಿಗೆ ಜೀವಾವಧಿ ಶಿಕ್ಷೆಯನ್ನು ನೀಡಲಾಗಿತ್ತು. ನಂತರ ಈತನನ್ನು ಮಾನಸಿಕ ರೋಗಿಗಳ ಆಸ್ಪತ್ರೆಗೆ ಸೇರಿಸಿದ್ದು, ಅಲ್ಲಿಂದಲೂ ಈತ ಎಸ್ಕೇಪ್ ಆಗಿದ್ದ. ಮತ್ತೆ ರಾಮುಲುನನ್ನು ಬಂಧಿಸಲಾಗಿತ್ತು. ಆನಂತರ ತೆಲಂಗಾಣ ಹೈಕೋರ್ಟ್ ನಲ್ಲಿ ಸಲ್ಲಿಸಿದ್ದ ಮನವಿ ಮೇರೆಗೆ ಕಳೆದ ಜುಲೈನಲ್ಲಿ ಈತನ ಬಿಡುಗಡೆಯಾಗಿತ್ತು.
ಕಾಶ್ಮೀರದ ಕುಲ್ಗಾಮ್ ನಲ್ಲಿ ಗಸ್ತು ತಿರುಗುತ್ತಿದ್ದ ಸೇನೆಯ ಮೇಲೆ ಉಗ್ರರ ದಾಳಿ..!
ಇದೀಗ ಮತ್ತೆ ತನ್ನ ಹಳೇ ಚಾಳಿಯನ್ನೆ ಮುಂದುವರೆಸಿದ್ದಾನೆ. ಇತ್ತೀಚೆಗೆ ಕಾವಲ ಅನಂತಯ್ಯ ಎಂಬುವವರು ತಮ್ಮ ಹೆಂಡತಿ ವೆಂಕಟಮ್ಮ ಅವರು ಕಾಣೆಯಾಗಿರುವ ಬಗ್ಗೆ ದೂರು ನೀಡಿದ್ದರು. ಈ ಪ್ರಕರಣದ ತನಿಖೆ ಶುರುಮಾಡಿದ ಹೈದರಾಬಾದ್ ಉತ್ತರ ವಲಯ ಪೊಲೀಸರಿಗೆ ವೆಂಕಟಮ್ಮ ಅವರ ಮೃತದೇಹ ಅಂಕುಶಪುರದ ರೈಲ್ವೆ ಟ್ರ್ಯಾಕ್ ಬಳಿ ಪತ್ತೆಯಾಗಿತ್ತು. ಸುಮಾರು 500 ಸಿಸಿ ಟಿವಿ ಫುಟೇಜ್ ಗಳನ್ನು ಪರಿಶೀಲಿಸಿದ ಬಳಿಕ ಹೈದರಾಬಾದ್ ನಗರ ಪೊಲೀಸ್ ಪಡೆ ಹಾಗೂ ರಾಚಕೊಂಡ ಪೊಲೀಸರು ಈತನನ್ನು ಬಂಧಿಸಿದ್ದಾರೆ.
ಟ್ರ್ಯಾಕ್ಟರ್ ರ್ಯಾಲಿ ಗಲಭೆ : ಇಂದು ದೆಹಲಿ, ಕೆಂಪು ಕೋಟೆಯಲ್ಲಿ ಬಿಗಿ ಭದ್ರತೆ..!
ರಾಮುಲು ಕಲ್ಲು ಕುಟ್ಟುವ ಕೆಲಸ ಮಾಡುತ್ತಿದ್ದ. ಈತನಿಗೆ 21 ವಯಸ್ಸಿರುವಾಗಲೇ ಮದುವೆಯಾಗಿತ್ತು. ಆದ್ರೆ ಮದುವೆಯಾದ ಕೆಲವೇ ದಿನಗಳಲ್ಲಿ ಆತನ ಹೆಂಡತಿ ಪರಪುರುಷನೊಂದಿಗೆ ಓಡಿಹೋಗಿದ್ದಳು. ಆಗಿನಿಂದ ಈತನಿಗೆ ಮಹಿಳೆಯರ ಮೇಲೆ ದ್ವೇಶ ಹುಟ್ಟಲಿಕ್ಕೆ ಶುರುವಾಯ್ತು. ನಂತರ ಮಹಿಳೆಯರನ್ನೇ ಗುರಿಯಾಗಿಸಿಕೊಂಡು ಕೊಲೆ ಮಾಡಲು ಆರಂಭಿಸಿದ. ಇದುವರೆಗೂ 18 ಮಹಿಳೆಯರನ್ನು ಕೊಲೆ ಮಾಡಿದ್ದಾನೆ. ಹಣದ ಆಮಿಷ ಒಡ್ಡಿ ಅವರನ್ನು ಕರೆಸಿಕೊಂಡು, ಅವರೊಂದಿಗೆ ಮದ್ಯ ಸೇವಿಸಿ ನಂತರ ಅವರನ್ನು ಬರ್ಬರವಾಗಿ ಕೊಲೆ ಮಾಡಿ ಅವರ ಬಳಿ ಇದ್ದ ವಸ್ತುಗಳನ್ನು ದೋಚಿಕೊಂಡು ಪರಾರಿಯಾಗುತ್ತಿದ್ದ ಎನ್ನಲಾಗಿದೆ.
ಕೇಂದ್ರ ಬಜೆಟ್ 2021 – ಪರೋಕ್ಷ ತೆರಿಗೆಗಳ ಹೆಚ್ಚಳ ಸಾಧ್ಯತೆ..!
ಕಾಶ್ಮೀರದ ಕುಲ್ಗಾಮ್ ನಲ್ಲಿ ಗಸ್ತು ತಿರುಗುತ್ತಿದ್ದ ಸೇನೆಯ ಮೇಲೆ ಉಗ್ರರ ದಾಳಿ..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel