ಬುಕ್ ಮೈ ಶೋನವರು ಕನ್ನಡ ಸಿನಿಮಾಗೆ ಅಪಮಾನ ಮಾಡ್ತಿದ್ದಾರೆ ಎಂದು ಸಾಗುತ ದೂರ ದೂರ ನಿರ್ದೇಶಕ ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ..
ಕನ್ನಡ ಸಿನಿಮಾಗಳಿಗೆ ತಮಗೆ ಇಷ್ಟ ಬಂದಂತೆ ರೇಟಿಂಗ್ಸ್ ಕೊಡ್ತಿದ್ದಾರೆ.ದುಡ್ಡಿಗಾಗಿ ಬೇಡಿಕೆ ಇಡ್ತಿದ್ದಾರೆ. ದುಡ್ಡು ಕೊಟ್ರೆ ರೇಟಿಂಗ್ಸ್ ಕೊಡೋದಾಗಿ ದಂಧೆ ಮಾಡೋಕೆ ಶುರು ಮಾಡಿದ್ದಾರೆ, ಈ ಮಾಫಿಯಾ ಕೊನೆಯಾಗಬೇಕು. ಹಾಗಾಗಿ ನಾನು ಬುಕ್ ಮೈ ಶೋ ಆಫೀಸ್ ಮುಂದೆ ಆತ್ಮಹತ್ಯೆ ಮಾಡ್ಕೋತೀನಿ ಎಂದು ಅಳಲು ತೋಡಿಕೊಂಡಿದ್ದಾರೆ.
ಫೆಬ್ರವರಿ 14 ರ ವ್ಯಾಲೆಂಟೈನ್ಸ್ ಡೇ ದಿನದಂದು ರವಿ ನಿರ್ದೇಶನದ ‘ಸಾಗುತ ದೂರ ದೂರ’ ಬಿಡುಗಡೆಯಾಗಿ. ಜನರಿಂದ ಸಿನಿಮಾಗೆ ಒಳ್ಳೆಯ ರೆಸ್ಪಾನ್ಸ್ ಸಿಗ್ತಿದೆ. ಆದ್ರೆ ಬುಕ್ ಮೈ ಶೋ ರೇಟಿಂಗ್‌ನಿಂದ ಸಿನಿಮಾ ಶೋಗೆ ಸಮಸ್ಯೆ ಆಗ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ..
ನಮ್ಮ ಕನ್ನಡದವರೇ ಒಂದು ಆ್ಯಪ್ ಸೃಷ್ಟಿಸಬೇಕು. ಬುಕ್ ಮೈ ಶೋನಿಂದ ಕನ್ನಡ ಸಿನಿಮಾಗಳ ಕಗ್ಗೊಲೆ ಆಗ್ತಿದೆ. ಈ ಬಗ್ಗೆ ಯಾವ ಕನ್ನಡ ಪರ ಸಂಘಟನೆಗಳು ಸಪೋರ್ಟ್ ಮಾಡ್ತಿಲ್ಲ ಎಂದು ತಮ್ಮ ದುಃಖವನ್ನ ಹೊರಹಾಕಿದ್ದಾರೆ..