ನವಜಾತ ಶಿಶುವಿನ ತಲೆ ಕತ್ತರಿಸಿ ತಾಯಿಯ ಗರ್ಭದಲ್ಲಿ ಬಿಟ್ಟ ವೈದ್ಯರು…

1 min read

ನವಜಾತ ಶಿಶುವಿನ ತಲೆ ಕತ್ತರಿಸಿ ತಾಯಿಯ ಗರ್ಭದಲ್ಲಿ ಬಿಟ್ಟ ವೈದ್ಯರು…

ನವಜಾತ ಶಿಶುವಿನ ತಲೆಯನ್ನು ಕತ್ತರಿಸಿ ತಾಯಿಯ ಗರ್ಭದಲ್ಲಿ ಬಿಟ್ಟಿರುವ ಘಟನೆ ಪಾಕಿಸ್ತಾನದ ಸಿಂದ್ ಪ್ರಾಂತ್ಯದಲ್ಲಿ ನಡೆದಿದೆ.  ಪಾಕಿಸ್ತಾನಿ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಯ ಘೋರ ನಿರ್ಲಕ್ಷ್ಯದಿಂದ ಮಹಿಳೆ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.

ಸಂತ್ರಸ್ತೆ 32 ವರ್ಷ ವಯಸ್ಸಿನ ಹಿಂದೂ ಮಹಿಳೆಯಾಗಿದ್ದು, ಈ ದುರಂತ ಘಟನೆಯು ಮಾಧ್ಯಮಗಳಲ್ಲಿ ಬಂದ ನಂತರ, ಸಿಂಧ್ ಸರ್ಕಾರ ಎಚ್ಚೆತ್ತುಕೊಂಡು  ತನಿಖೆಗೆ ಆದೇಶಿಸಿದೆ. ಪ್ರಕರಣದ ತಳಹದಿಯನ್ನ ಭೇಧಿಸಲು ಮತ್ತು ಅಪರಾಧಿಗಳನ್ನು ಕಂಡುಹಿಡಿಯಲು ವೈದ್ಯಕೀಯ ಮಂಡಳಿಯನ್ನು ರಚಿಸಲಾಗಿದೆ.

ಈ ಹಿಂದೂ ಮಹಿಳೆ ಥಾರ್ಪಾರ್ಕರ್ ಜಿಲ್ಲೆಯ ದೂರದ ಹಳ್ಳಿಯಿಂದ ಬಂದಿದ್ದು  ಚಿಕಿತ್ಸೆಗಾಗಿ ಗ್ರಾಮೀಣ ಆರೋಗ್ಯ ಕೇಂದ್ರಕ್ಕೆ (RHC) ಸೇರಿಕೊಂಡಿದ್ದರು. ಅಲ್ಲಿ ಯಾವುದೇ ಸ್ತ್ರೀರೋಗತಜ್ಞರು ಲಭ್ಯವಿಲ್ಲದ ಕಾರಣ, ಅನನುಭವಿ ಸಿಬ್ಬಂದಿಯಿಂದ ಅವರ ಶಸ್ತ್ರಚಿಕಿತ್ಸೆಯನ್ನು ಮಾಡಲಾಯಿತು.  ಇದು ಮಗು ತಾಯಿಯ ಜೀವಕ್ಕೆ ಕಂಟಕ ತಂದಿದೆ.

ಭಾನುವಾರ ಶಸ್ತ್ರಚಿಕಿತ್ಸೆ ವೇಳೆ ತಾಯಿಯ ಹೊಟ್ಟೆಯಲ್ಲಿದ್ದ ನವಜಾತ ಶಿಶುವಿನ ತಲೆಯನ್ನು ಕತ್ತರಿಸಿ ಒಳಗೆ ಬಿಟ್ಟಿದ್ದಾರೆ. ಇದಾದ ನಂತರ ಗರ್ಭಿಣಿಯ ಆರೋಗ್ಯ ಸ್ಥಿತಿ ಗಂಭೀರವಾದಾಗ  ಅಂತಿಮವಾಗಿ ಆಕೆಯ LUMHS ಗೆ ಕರೆತರಲಾಗಿದೆ. ಇಲ್ಲಿ  ನವಜಾತ ಶಿಶುವಿನ ಉಳಿದ ದೇಹವನ್ನು ತಾಯಿಯ ಗರ್ಭದಿಂದ ತೆಗೆದುಹಾಕಲಾಯಿತು, ಗರ್ಭಿಣಿ ಜೀವವನ್ನ ಉಳಿಸಲಾಗಿದೆ.

ಮಗುವಿನ ತಲೆ ಒಳಗೆ ಸಿಕ್ಕಿಹಾಕಿಕೊಂಡಿದೆ ಮತ್ತು ತಾಯಿಯ ಗರ್ಭಾಶಯವೂ ಗಾಯಗೊಂಡಿದೆ.  ಮಹಿಳೆಯ ಜೀವವನ್ನು ಉಳಿಸಲು, ಆಕೆಯ ಹೊಟ್ಟೆಯನ್ನು ತೆರೆದು ನವಜಾತ ಶಿಶುವಿನ ತಲೆಯನ್ನು ಹೊರತೆಗೆಯಬೇಕಾಯಿತು ಎಂದು ಜಮ್ಶೋರೊದಲ್ಲಿರುವ  ಲಿಯಾಕತ್ ವೈದ್ಯಕೀಯ ಮತ್ತು ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ (LUMHS) ಸ್ತ್ರೀರೋಗ ಶಾಸ್ತ್ರದ ಘಟಕದ ಮುಖ್ಯಸ್ಥರಾದ ಪ್ರೊಫೆಸರ್ ರಹೀಲ್ ಸಿಕಂದರ್ ಹೇಳಿದ್ದಾರೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd