ಧ್ರುವ ಸರ್ಜಾ ಪೊಗರು ಫಸ್ಟ್ ಡೇ ಕಲೆಕ್ಷನ್ ಎಷ್ಟು ಗೊತ್ತಾ..!
ಮಾಸ್ ಲುಕ್, ಖರಾಬ್ ಡೈಲಾಗ್ಸ್, ಸಖತ್ ಸಾಂಗ್ಸ್, ಸೆಂಟಿಮೆಂಟ್.. ವಾವ್ ಏನ್ ಸಿನಿಮಾ ಗುರು ಸಖತ್ತಾಗಿದೆ… ಈ ರೀತಿಯಾದ ಸೂಪರ್ ರೆಸ್ಪಾನ್ಸ್ ಸಿಗ್ತಿರೋದು ಮತ್ಯಾವ ಸಿನಿಮಾಗೂ ಅಲ್ಲ. ಅದೇ ಸ್ಯಾಂಡಲ್ ವುಡ್ ಹೈ ಓಲ್ಟೇಜ್ ಸಿನಿಮಾ ಪೊಗರು. ಥಿಯೇಟರ್ ಗಳಲ್ಲಿ ಪೊಗರು ಹವಾಗೆ ಅಭಿಮಾನಿಗಳು ಫಿದಾ ಆಗಿ ಶಿಳ್ಳೆ ಚಪ್ಪಾಳೆಗಳನ್ನ ಬಾರಿಸುತ್ತಾ ಕುಣಿದು ಕುಪ್ಪಳಿಸಿದ್ದಾರೆ. ಈ ಸಿನಿಮಾ ಮೊದಲಿಗೆ ರೌಡಿಸಂ ಆಧರಿತ ಅಥವ ಮಾಸ್ ಆಡಿಯನ್ಸ್ ಇಷ್ಟವಾಗುವ ಸಿನಿಮಾ ಎಂದೇ ಎಲ್ಲರೂ ಅಂದುಕೊಂಡಿದ್ರು. ಆದ್ರೆ ಸರ್ಫೈಸ್ ಎಂಬಂತೆ ಸಿನಿಮಾದಲ್ಲಿ ಆ ಎಮೋಷನ್ ಆಡಿಯನ್ಸ್ ಗಳನ್ನ ಕನೆಕ್ಟ್ ಮಾಡುತ್ತೆ. ಒಂದು ಚೂರು ರೋಮ್ಯಾನ್ಸ್, ಫ್ಲಾಶ್ ಬ್ಯಾಕ್ ,ಧ್ರುವ ಸ್ಟನ್ನಿಂಗ್ ಲುಕ್ಸ್ ಅಭಿಮಾನಿಗಳ ಹೃದಯ ಮುಟ್ಟಿದೆ.
ವಾಟ್ಸಾಪ್ ಗೆ ಟಕ್ಕರ್ ಕೊಲು ಬರುತ್ತಿದೆ ಮೇಡ್ ಇನ್ ಇಂಡಿಯಾ ‘ವಾಟ್ಸಾಪ್’..!
ಈ ನಡುವೆ ಈ ಸಿನಿಮಾದ ಮೊದಲ ದಿನದ ಗಳಿಕೆ ಎಷ್ಟೆಂದು ಚಿತ್ರತಂಡ ಅಧಿಕೃತವಾಗಿ ಘೋಷಿಸಿದೆ. ಮೊದಲ ದಿನವೇ ಚಿತ್ರ 10.5 ಕೋಟಿ ರೂ. ಗಳಿಕೆ ಮಾಡಿರುವುದಾಗಿ ಧ್ರುವ ಸರ್ಜಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ. ಇದು ಚಿತ್ರರಂಗದ ಪಾಲಿಗೆ ಶುಭ ಸುದ್ದಿಯೇ ಸರಿ. ಈ ಸಿನಿಮಾದ ಬಗ್ಗೆ ಭಾರೀ ಕ್ರೇಜ್ ಇತ್ತು. ಅದೀಗ ಗಳಿಕೆಯ ಮೂಲಕ ನಿಜವಾಗಿದೆ. ಈ ವರ್ಷದ ಮೊದಲ ಹಿಟ್ ಚಿತ್ರವಾಗಿಯೂ ಪೊಗರು ಹೊರಹೊಮ್ಮಿದೆ.
ನಂದಕಿಶೋರ್ ಡೈರೆಕ್ಷನ್ ನಲ್ಲಿ ಪೊಗರು ಜಬರದಸ್ತಾಗಿ ಮೂಡಿಬಂದಿದೆ. ಒಂದೊಳ್ಳೆ ಮೆಸೇಜ್ ಅನ್ನ ಈ ಸಿನಿಮಾ ಮೂಲಕ ನೀಡಲಾಗಿದೆ. ನಿರ್ಮಾಪಕರು ಇಡೀ ಸಿನಿಮಾವನ್ನು ತುಂಬಾ ಅದ್ಧೂರಿಯಾಗಿ ಕಟ್ಟಿಕೊಟ್ಟಿದ್ದಾರೆ. ಸಿನಿಮಾದ ಮೇಕಿಂಗ್ ಅದ್ಧೂರಿಯಾಗಿದೆ. ಇನ್ನೂ ಸಿನಿಮಾದ ರಿವೀವ್ ಬಿಟ್ಟು ಪ್ರೇಕ್ಷಕರ ರೆಸ್ಪಾನ್ಸ್ ಬಗ್ಗೆ ಮಾತನಾಡೋದಾದ್ರೆ ಸಿನಿಮಾಗೆ ಸಖತ್ ಒಳ್ಳೆ ರೆಸ್ಪಾನ್ಸ್ ಸಿಗ್ತಿದೆ. ತೆಲುಗಿನಲ್ಲೂ ಸಿನಿಮಾಗೆ ಪ್ರೇಕ್ಷಕರಿಂದ ಒಳ್ಳೆ ರೆಸ್ಪಾನ್ಸ್ ಸಿಗ್ತಿದೆ. ಸಿನಿಮಾದ ಮೊದಲ ದಿನದ ಕಲೆಕ್ಷನ್ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ಫೆಬ್ರವರಿ 19ರಂದು ತೆರೆಗೆ ಬಂದ ಪೊಗರು ಸಿನಿಮಾ ಬಹುತೇಕ ಚಿತ್ರಮಂದಿರಗಳಲ್ಲಿ ಹೌಸ್ಫುಲ್ ಆಗಿ ಓಡಿದೆ. ಇನ್ನೂ ಈ ಸಿನಿಮಾ ಮೊದಲ ದಿನ ಒಟ್ಟಾರೆ 6 ಕೋಟಿ ಕಲೆಕ್ಷನ್ ಮಾಡಿದೆ ಎಂದು ಅಂದಾಜಿಸಲಾಗಿದೆ.
ಪತ್ನಿ ಮೇಲೆ ಕಾರು ಹಾರಿಸಿ ಕೊಂದ ವೈದ್ಯ ಕೆಲವೇ ಕ್ಷಣಗಳಲ್ಲೇ ಅದರ ಕರ್ಮವನ್ನೂ ಅನುಭಿವಿಸಿದ..!
ಅಭಿಮಾನಿಗಳಿಗೋಸ್ಕರ ಮುಂಜಾನೆ 6 ಗಂಟೆಗೇ ಶೋ ಇಡಲಾಗಿತ್ತು. ಅಲ್ಲದೆ, ಯಾವುದೆ ದೊಡ್ಡ ಸಿನಿಮಾ ರಿಲೀಸ್ ಆಗದ ಕಾರಣ ಪೊಗರಿಗೆ ಹೆಚ್ಚು ಚಿತ್ರಮಂದಿರಗಳು ಸಿಕ್ಕಿದ್ದವು. ಇದು ಸಿನಿಮಾದ ಕಲೆಕ್ಷನ್ ಹೆಚ್ಚಲು ಪ್ರಮುಖ ಕಾರಣವೂ ಆಗಿದೆ.
ಶಿಕ್ಷಕಿಗೆ ಪ್ರೀತಿಸುವಂತೆ ಕಾಟ ಕೊಡ್ತಿದ್ದ ಪಾಗಲ್ ಪ್ರೇಮಿಯ ಕೊನೆಗೇನ್ ಮಾಡಿದ ನೋಡಿ..!
ಪೊಗರು ಸಿನಿಮಾ ಮಲ್ಟಿಫ್ಲೆಕ್ಸ್ಗಳಿಗಿಂತ ಬಿ ಹಾಗೂ ಸಿ ಸಾಲಿನ ಚಿತ್ರಮಂದರಿಗಳಲ್ಲಿ ಒಳ್ಳೆಯ ಕಲೆಕ್ಷನ್ ಮಾಡುತ್ತಿದೆ. ಅಭಿಮಾನಿಗಳು ಮತ್ತೆ ಮತ್ತೆ ಬಂದು ಚಿತ್ರವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಕೊರೊನಾದಿಂದ ಜನರು ಚಿತ್ರಮಂದಿರಕ್ಕೆ ಬರುತ್ತಿಲ್ಲ ಎನ್ನುವ ನಂಬಿಕೆ ಇತ್ತು. ಆದರೆ, ಪೊಗರು ಈ ನಂಬಿಕೆಯನ್ನು ಸುಳ್ಳು ಮಾಡಿದೆ. ಅಷ್ಟೇ ಅಲ್ಲ, ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುವುದಿಲ್ಲ ಎನ್ನುವ ಕಾರಣಕ್ಕೆ ಅನೇಕ ನಿರ್ಮಾಪಕರು ಸಿನಿಮಾ ರಿಲೀಸ್ ಮಾಡೋಕೆ ಹಿಂಜರಿದಿದ್ದರು. ಈಗ ಪೊಗರು ಸಿನಿಮಾ ಇವರೆಲ್ಲರಿಗೂ ಬಲ ನೀಡಿದೆ.
ಮುಂದಿನ ದಿನಗಳಲ್ಲಿ ಸಾಲು ಸಾಲು ಸಿನಿಮಾಗಳು ರಿಲೀಸ್ ಆಗುತ್ತಿವೆ. ದರ್ಶನ್ ನಟನೆಯ ರಾಬರ್ಟ್, ರಿಷಬ್ ಶೆಟ್ಟಿ ಅಭಿನಯದ ಹೀರೋ, ಪುನೀತ್ ಹೀರೋ ಆಗಿ ಕಾಣಿಸಿಕೊಂಡಿರುವ ಯುವರತ್ನ, ಕೋಟಿಗೊಬ್ಬರ 3, ಕೆಜಿಎಫ್ ಚಾಪ್ಟರ್ 2ಗಳು ಬಿಡುಗಡೆ ಆಗುತ್ತಿವೆ. ಒಟ್ಟಾರೆ 2021 ರಲ್ಲಿ ಸಿನಿಪ್ರೇಕ್ಷರಿಗೆ ಭರಪೂರ ಮನರಂಜನೆ ಸಿಗೋದ್ರಲ್ಲಿ ನೋ ಡೌಟ್..