RRR ಅಬ್ಬರಕ್ಕೆ ಮೊದಲ ದಿನವೇ ಬಾಕ್ಸ್ ಆಫೀಸ್ ಉಡೀಸ್ – 223 ಕೋಟಿ ಗಳಿಕೆ
ಜ್ಯೂ. ಎನ್ಟಿಆರ್ ಮತ್ತು ರಾಮ್ ಚರಣ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ ‘ಆರ್ಆರ್ಆರ್’ ಚಿತ್ರ ಬಾಕ್ಸ್ ಆಫೀಸ್ ದಾಖಲೆಗಳನ್ನ ಉಡೀಸ್ ಮಾಡಿದೆ. ಇಲ್ಲಿಯವರೆಗೆ ತಾನೇ ನಿರ್ಮಿಸಿದ ಬಾಹುಬಲಿ ಹೆಸರಲ್ಲಿದ್ದ ಚಿತ್ರದ ದಾಖಲೆಯನ್ನ ಮತ್ತೆ ರಾಜ ಮೌಳಿ ಮುರಿದಿದ್ದಾರೆ.
RRR ಚಿತ್ರ ವಿಶ್ವದಾದ್ಯಂತ 223 ಕೋಟಿ ರುಪಾಯಿಗಳನ್ನ ಗಳಿಸಿದೆ ಎಂದು ಅಧಿಕೃತ ವಾಗಿ ಟೀಮ್ ಆರ್ ಆರ್ ಆರ್ ಬಿಡುಗಡೆ ಮಾಡಿದೆ.
ಆರ್ಆರ್ಆರ್’ ಚಿತ್ರ ಮೊದಲ ದಿನವೇ ಧೂಳೆಬ್ಬಿಸಿದೆ. ವಿಶ್ವಾದ್ಯಂತ ಬಾಕ್ಸ್ ಆಫೀಸ್ನಲ್ಲಿ ರಾಜಮೌಳಿ ಸಿನಿಮಾ ಅಬ್ಬರಿಸಿದೆ. ಈ ಸಿನಿಮಾ ಫಸ್ಟ್ ಡೇ ವಿಶ್ವಾದ್ಯಂತ 223 ಕೋಟಿ ಗಳಿಸುವ ಮೂಲಕ ಬಾಕ್ಸ್ ಆಫೀಸ್ ನಲ್ಲಿ ಇದುವರೆಗೂ ಯಾರು ಮಾಡದ ದಾಖಲೆಯನ್ನ ಮಾಡಿದೆ. ಆಲಿಯಾ ಭಟ್, ಅಜಯ್ ದೇವಗನ್ ಅವರು ಈ ಚಿತ್ರದಲ್ಲಿ ನಟಿಸಿದ್ದು, ಹಿಂದಿ ಪ್ರೇಕ್ಷಕರನ್ನು ಕೂಡ ಬಹುವಾಗಿ ಆಕರ್ಷಿಸಿದೆ.
‘ಆರ್ಆರ್ಆರ್’ ಸಿನಿಮಾ ಸೃಷ್ಟಿ ಮಾಡಿದ ಕ್ರೇಜ್ ಅಷ್ಟಿಷ್ಟಲ್ಲ. ಶುಕ್ರವಾರ (ಮಾ.25) ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ರಿಲೀಸ್ ಆಯಿತು. ವಿದೇಶದಲ್ಲೂ ‘ಆರ್ಆರ್ಆರ್’ ತೆರೆಕಂಡು ಅಬ್ಬರಿಸುತ್ತಿದೆ. ಮಾ.24ರ ರಾತ್ರಿಯಿಂದಲೇ ಶೋ ಆರಂಭ ಆಯಿತು. ಮಾ.25ರ ಎಲ್ಲ ಪ್ರದರ್ಶನಗಳು ಹೌಸ್ಫುಲ್ ಆದವು. ಎಲ್ಲ ಚಿತ್ರಮಂದಿರಗಳಲ್ಲೂ ಅಭಿಮಾನಿಗಳು ಈ ಸಿನಿಮಾ ನೋಡಲು ಮುಗಿಬಿದ್ದರು. ಇದರ ಪರಿಣಾಮವಾಗಿ ‘ಆರ್ಆರ್ಆರ್’ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಚಿನ್ನದ ಬೆಳೆ ತೆಗೆದಿದೆ ಎಂದು ಹೇಳಲಾಗುತ್ತಿದೆ.