6 ವರ್ಷದ ಮಗನ ಆ್ಯಪ್ ಖರೀದಿ – ತಾಯಿಯ ಖಾತೆಯಿಂದ 11ಲಕ್ಷ ರೂಪಾಯಿ ಕಡಿತ – ಹಣ ಹಿಂತಿರುಗಿಸಲು ಆಪಲ್ ನಿರಾಕರಣೆ
ನ್ಯೂಯಾರ್ಕ್, ಡಿಸೆಂಬರ್15: ಜನರು ಕೆಲವೊಮ್ಮೆ ತಮ್ಮ ಮಕ್ಕಳಿಂದ ಹಣಕಾಸಿನ ನಷ್ಟಕ್ಕೆ ಬಲಿಯಾಗುತ್ತಾರೆ. ಜೆಸ್ಸಿಕಾ ಜಾನ್ಸನ್ ಎಂಬಾಕೆಯ ಖಾತೆಯಿಂದ, ಅಂದಾಜು 11 ಲಕ್ಷ ರೂ ಕಡಿತಗೊಳಿಸಲಾಗಿದೆ ಮತ್ತು ಆಪಲ್ ಗೆ ಪಾವತಿಸಲಾಗಿದೆ. ಹಣ ಏಕೆ ಕಡಿತಗೊಂಡಿದೆ ಎಂದು ವಿಚಾರಿಸಿದಾಗ ಆಕೆಯ ಆರು ವರ್ಷದ ಮಗ ಜಾರ್ಜ್ ಜಾನ್ಸನ್ ಆಪಲ್ ಆಪ್ ಸ್ಟೋರ್ ಅಪ್ಲಿಕೇಶನ್‌ನಲ್ಲಿ ಆ್ಯಪ್ ಖರೀದಿ ಮಾಡಿದ್ದು, ಈ ಹಿನ್ನೆಲೆಯಲ್ಲಿ ಆಕೆಯ ಖಾತೆಯಿಂದ ಹಣವನ್ನು ಕಡಿತಗೊಳಿಸಲಾಗಿರುವುದು ತಿಳಿದು ಬಂದಿದೆ. ಈ ಘಟನೆ ನ್ಯೂಯಾರ್ಕ್ ನಲ್ಲಿ ನಡೆದಿದೆ.
ಜೆಸ್ಸಿಕಾಳ ಆರು ವರ್ಷದ ಮಗ ಐಪ್ಯಾಡ್ ಬಳಸಿ ಆಪಲ್ ಆಪ್ ಸ್ಟೋರ್‌ನಲ್ಲಿ 11 ಲಕ್ಷ ಮೌಲ್ಯದ ಅಪ್ಲಿಕೇಶನ್ ಖರೀದಿ ಮಾಡಿದ್ದಾನೆ.
ಜುಲೈನಲ್ಲಿ ಅವನು ತನ್ನ ಆಟಗಳಿಗೆ ಐಪ್ಯಾಡ್ ಅನ್ನು ಬಳಸಲು ಪ್ರಾರಂಭಿಸಿದ ಮತ್ತು ಆಟಗಳಲ್ಲಿ ಆನ್ ಗಳನ್ನು ಖರೀದಿಸಿ ವ್ಯವಹಾರಗಳನ್ನು ಮಾಡಲಾಗಿದೆ ಎಂದು ಆಕೆ ತಿಳಿಸಿದ್ದಾಳೆ.
ಕ್ರಿಸ್‌ಮಸ್ ಸಂತೋಷ ಹರಡಲು ಬಂದ ಸಾಂತಾ ಕ್ಲಾಸ್ ವೇಷಧಾರಿಯಿಂದ 75 ವೃದ್ಧರಿಗೆ ಸೋಂಕು
ಈ ವರ್ಷದ ಜುಲೈನಲ್ಲಿ, ಆಕೆಯ ಖಾತೆಯಿಂದ ಸುಮಾರು, ಅಂದಾಜು 1.8 ಲಕ್ಷ ರೂ 25 ಬಾರಿ ಡೆಬಿಟ್ ಮಾಡಲಾಗಿದೆ ಎಂದು ವರದಿ ಹೇಳಿದೆ. ಅದು ಹೇಗೆ ಸಂಭವಿಸಿತು ಎಂಬುದನ್ನು ಅರ್ಥಮಾಡಿಕೊಳ್ಳಲು ವಿಫಲವಾದ ಜೆಸ್ಸಿಕಾ, ತನ್ನನ್ನು ಹ್ಯಾಕರ್‌ಗಳು ಮೋಸಗೊಳಿಸಿದ್ದಾರೆಂದು ಭಾವಿಸಿ ವಂಚನೆ ಹಕ್ಕು ಸಲ್ಲಿಸಿದ್ದಾರೆ. ಆದರೆ, ನಂತರ ಆಕೆಯ ಖಾತೆಯಿಂದ ಖರೀದಿಗಳನ್ನು ಮಾಡಲಾಗಿದೆ ಎಂದು ಆಕೆಗೆ ತಿಳಿಸಲಾಯಿತು ಮತ್ತು ಅವಳು ಬೇರೆಯವರಿಂದ ಮೋಸಗೊಂಡಿಲ್ಲ ಎಂದು ತಿಳಿದು ಬಂತು.
ಕೆಲವು ದಿನಗಳ ನಂತರ, ಜೆಸ್ಸಿಕಾ ಆಪಲ್ ಗೆ ಹಣವನ್ನು ಮರುಪಾವತಿ ಮಾಡುವಂತೆ ಕೇಳಿದಾಗ, 60 ದಿನಗಳಲ್ಲಿ ಅದನ್ನು ಕ್ಲೈಮ್ ಮಾಡದ ಕಾರಣ ಆಕೆಗೆ ಹಕ್ಕು ಹಿಂತಿರುಗಿಸಲು ನಿರಾಕರಿಸಲಾಯಿತು. ಜೆಸ್ಸಿಕಾ ತನ್ನ ಬ್ಯಾಂಕ್ ಖಾತೆಯಲ್ಲಿನ ವ್ಯತ್ಯಾಸದಿಂದಾಗಿ ತನ್ನ ಕುಟುಂಬದ ಅಡಮಾನವನ್ನು ಪಾವತಿಸಲು ಸಾಧ್ಯವಾಗುವುದಿಲ್ಲ ಎಂದು ಹೇಳಿದರೂ ಆಪಲ್ ಹಣವನ್ನು ಹಿಂತಿರುಗಿಸಲು ನಿರಾಕರಿಸಿದೆ.
ದುರದೃಷ್ಟಕರ ಘಟನೆಗೆ ಯಾರನ್ನೂ ದೂಷಿಸಲು ಸಾಧ್ಯವಿಲ್ಲ, ಜೆಸ್ಸಿಕಾ ಗೇಮಿಂಗ್ ಕಂಪನಿಯು ಹದಿಹರೆಯದ ವಯಸ್ಸಿನ ಮಕ್ಕಳನ್ನು ಅಪ್ಲಿಕೇಶನ್‌ನಲ್ಲಿ ವಸ್ತುಗಳನ್ನು ಖರೀದಿಸಲು ಆಮಿಷವೊಡ್ಡುತ್ತಿದೆ ಎಂದು ಆರೋಪಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
ಕೆಮ್ಮು ಮತ್ತು ಶೀತವನ್ನು ಸುಲಭವಾಗಿ ಗುಣಪಡಿಸಲು ಅಡಿಗೆ ಮನೆಯಲ್ಲಿರುವ ಮನೆಮದ್ದುಗಳುhttps://t.co/oN7YerRCki
— Saaksha TV (@SaakshaTv) December 12, 2020
ಪಾಕ್ ನಲ್ಲಿ ಅಲ್ಪಸಂಖ್ಯಾತರ ಕಣ್ಮರೆಗೆ ಆತಂಕ ವ್ಯಕ್ತಪಡಿಸಿದ ಯುಎನ್ ತಜ್ಞರು – ಭಾರತವನ್ನು ರಾಕ್ಷಸ ರಾಷ್ಟ್ರ ಎಂದ ಪಾಕ್ ಪ್ರಧಾನಿhttps://t.co/ctQzl9kSQK
— Saaksha TV (@SaakshaTv) December 12, 2020