ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗ್ತಿದೆ “#Boycott 83” : ಸುಶಾಂತ್ ಗೆ ಅವಮಾನ..???
ರಣ್ ವೀರ್ ಸಿಂಗ್ ನಟನೆಯ ಕಪಿಲ್ ದೇವ್ ಬಯೋಪಿಕ್ ಸಿನಿಮಾ ‘83’ ವಿಶ್ವಾದ್ಯಂತ ರಿಲೀಸ್ ಆಗಿದೆ.. ಕನ್ನಡದಲ್ಲೂ ರಿಲೀಸ್ ಆಗಿದೆ ಆದ್ರೂ ಕೆಲವೇ ಥಿಯೇಟರ್ ಗಳಲ್ಲಿ .. ಉಳಿದಂತೆ ಮೂಲ ಭಾಷೆಯಲ್ಲೇ ರಿಲೀಸ್ ಆಗಿದೆ.. ಇಂಡಡಿಯಾದ ಮೊದಲ ವಿಶ್ವಕಪ್ ಗೆಲುವಿನ ಕಥೆ , ಕಪಿಲ್ ದೇವ್ ಕಥೆಯನ್ನ ಹೊಂದಿದೆ.. ಈ ಸಿನಿಮಾದಲ್ಲಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಕೂಡ ನಟಿಸಿದ್ದು, ಕಬೀರ್ ಖಾನ್ ನಿರ್ದೇಶಿಸಿದ್ದಾರೆ. ವಿಶೇಷವಾಗಿ ಬೆಂಗಳೂರಲ್ಲಿ ಸಿನಿಮಾವನ್ನ ಕಿಚ್ಚ ಸುದೀಪ್ ಪ್ರಸ್ತುಪ ಪಡಿಸಿದ್ದಾರೆ..
ಈ ಸಿನಿಮಾ ಬಾಕ್ಸ್ ಆಫೀಸ್ ನ ಎಲ್ಲಾ ರೆಕಾರ್ಡ್ ಬ್ರೇಕ್ ಮಾಡುತ್ತೆ ಅಂತಲೇ ಹೇಳಲಾಗ್ತಿತ್ತು.. ಆದ್ರೀಗ ಸಡನ್ ಆಗಿ “#Boycott 83” ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗ್ತಿದೆ.. ಈ ಸಿನಿಮಾ ಸೋಲುತ್ತೆ ಅಂತಲೇ ನೆಟಿಜನ್ಸ್ ಪ್ರೆಡಿಕ್ಟ್ ಮಾಡ್ತಿದ್ದಾರೆ.. ಅಷ್ಟಕ್ಕೂ ಆಡಿಯನ್ಸ್ ಸಿನಿಮಾ ಅದ್ಭುತವಾಗಿದೆ ಅಂತ ಹೇಳ್ತಿದ್ರೂ ಬಾಯ್ಕಟ್ ಟ್ರೆಂಡ್ ಆಗ್ತಿರೋದಕ್ಕೆ ಕಾರಣ ಏನು..??? ಕೇವಲ ಬಿಡುಗಡೆಯಾದ ನಂತರವಷ್ಟೇ ಅಲ್ಲ ಬಿಡುಗಡೆಗೂ ಮುನ್ನವೇ ಬಾಯ್ಕಟ್ 83 ಟ್ರೆಂಡ್ ಆಗಿತ್ತು.. ಅಂದ್ಹಾಗೆ #Boycott 83 ಟ್ರೆಂಡ್ ಆರಂಭಿಸಿರಿರೋದು ನಟ ದಿವಂಗತ ಸುಶಾಂತ್ ಫ್ಯಾನ್ಸ್..
ಇತ್ತೀಚೆಗೆ ರಣ್ ವೀರ್ ಸಿಂಗ್ ಚಿಪ್ಸ್ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು.. ಅದ್ರಲ್ಲಿ ಅವರ ನಟನೆ ದಿವಂಗತ ನಟ ಸುಶಾಂತ್ ರನ್ನ ಆಡಿಕೊಂಡು ಅವಮಾನಿಸಿರುವಂತಿತ್ತು.. ಇಂಜಿನಿಯರಿಂಗ್ ಡಿಗ್ರಿಯ ಕೊನೆಯ ವರ್ಷದಲ್ಲಿರುವ ವಿದ್ಯಾರ್ಥಿಯಾಗಿ ಕಾಣಿಸಿಕೊಂಡಿದ್ದ ಅವರು ಮುಂದೇನು ಪ್ಲ್ಯಾನ್ ಎಂದಾಗ ನೀಡುವ ವ್ಯಂಗ್ಯಾತ್ಪಕ ಉತ್ತರ ಒಂದ್ ರೀತಿ ಸುಸಾಂತ್ ರನ್ನ ಆಡಿಕೊಂಡತೆ ಇತ್ತು.. ಇದು ಸುಶಾಂತ್ ಅಭಿಮಾನಿಗಳನ್ನ ಕೆರಳಿಸಿತ್ತು.. ಆಗಲೂ ಬಾಯ್ಕಟ್ ಟ್ರೆಂಡ್ ಆಗಿತ್ತು.. ಈಗ ಸಿನಿಮಾ ರಿಲೀಸ್ ಆದ್ಮೇಲೂ ಮತ್ತೆ ಬಾಯ್ಕಟ್ ಟ್ರೆಂಡ್ ಆಗ್ತಿದೆ..
ಇಲ್ಲಿ ಮತ್ತೊಂದು ಕಾರಣವೂ ಇದೆ.. ಸುಶಾಂತ್ ಸಿಂಗ್ ರಜಪೂತ್ ನಟಿಸಿದ ಎಂ ಎಸ್ ಧೋನಿ : ಅನ್ ಟೋಲ್ಡ್ ಸ್ಟೋರಿ ಸಿನಿಮಾದೊಂದಿಗೆ ‘83’ ಸಿನಿಮಾವನ್ನ ಹೋಲಿಕೆ ಮಾಡಲಾಗುತ್ತಿದೆ. ಇದಕ್ಕೂ ಸುಶಾಂತ್ ಸಿಂಗ್ ರಜಪೂತ್ ಅಭಿಮಾನಿಗಳು, ಅಷ್ಟೇ ಅಲ್ಲ ಧೋನಿ ಅಭಿಮಾನಿಗಳು ಕೂಡ ಕೆಂಡಾಮಂಡಲರಾಗಿದ್ದಾರೆ. ಹೀಗಾಗಿ ಬಾಯ್ಕಟ್ ಟ್ರೆಂಡ್ ಆಗ್ತಿದೆ..