ಲಾಲ್ ಸಿಂಗ್ ಚಡ್ಡಾ ಚಿತ್ರ ಬಹಿಷ್ಕರಿಸುವಂತೆ ಕರೆ ನೀಡಿದ ಇಂಗ್ಲೆಂಡ್ ಕ್ರಿಕೆಟಿಗ…
ಅಮೀರ್ ಖಾನ್ ಮತ್ತು ಕರೀನಾ ಕಪೂರ್ ಅಭಿನಯದ ‘ಲಾಲ್ ಸಿಂಗ್ ಚಡ್ಡಾ’ ಚಿತ್ರವನ್ನು ಬಹಿಷ್ಕರಿಸುವಂತೆ ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಮಾಂಟಿ ಪನೇಸರ್ ಒತ್ತಾಯಿಸಿದ್ದಾರೆ. ಚಿತ್ರದಲ್ಲಿ ಭಾರತೀಯ ಸೇನೆ ಮತ್ತು ಸಿಖ್ಖರನ್ನು ಅವಮಾನಿಸಲಾಗಿದೆ ಎಂದು ಹೇಳಿದ್ದಾರೆ. ಲಾಲ್ ಸಿಂಗ್ ಚಡ್ಡಾ ಚಿತ್ರ ನಿನ್ನೆ ದೇಶಾದ್ಯಂತ ಬಿಡುಗಡೆಯಾಗಿತ್ತು. ಇದು 1994 ರ ಹಾಲಿವುಡ್ ನಲ್ಲಿ ಬಿಡುಗಡೆಯಾದ ಫಾರೆಸ್ಟ್ ಗಂಪ್ ಚಿತ್ರದ ಹಿಂದಿ ರೀಮೇಕ್.
ಮಾಂಟಿ ಪನೇಸರ್ ಈ ಚಿತ್ರದ ಕುರಿತು ಎರಡು ಟ್ವೀಟ್ ಮಾಡಿದ್ದಾರೆ. ಮೊದಲ ಟ್ವೀಟ್ ನಲ್ಲಿ “ಫಾರೆಸ್ಟ್ ಗಂಪ್ ಯುಎಸ್ ಮಿಲಿಟರಿಗೆ ಹೊಂದಿಕೊಳ್ಳುತ್ತದೆ ಏಕೆಂದರೆ ವಿಯೆಟ್ನಾಂ ಯುದ್ಧದ ಅವಶ್ಯಕತೆಗಳನ್ನು ಪೂರೈಸಲು ಯುಎಸ್ ಕಡಿಮೆ ಐಕ್ಯೂ ಹೊಂದಿರುವ ಜನರನ್ನು ನೇಮಿಸಿಕೊಂಡಿತ್ತು. ಅದೇ ಸಮಯದಲ್ಲಿ, ಲಾಲ್ ಸಿಂಗ್ ಚಡ್ಡಾದಲ್ಲಿ ಕಡಿಮೆ ಐಕ್ಯೂ ಹೊಂದಿರುವ ವ್ಯಕ್ತಿಯನ್ನು ಭಾರತೀಯ ಸೇನೆಯಲ್ಲಿ ನೇಮಕ ಮಾಡಲಾಗಿದೆ ಎಂದು ತೋರಿಸಲಾಗಿದೆ. ಇದು ಭಾರತದ ಸಶಸ್ತ್ರ ಪಡೆಗಳಿಗೆ, ಭಾರತೀಯ ಸೇನೆಗೆ ಮತ್ತು ಸಿಖ್ಖರಿಗೆ ಮಾಡಿದ ಅವಮಾನ. ನಾಚಿಕೆಗೇಡು ಎಂದು ಟ್ವೀಟ್ ಮಾಡಿದ್ದಾರೆ.
ಮತ್ತೊಂದು ಟ್ವೀಟ್ನಲ್ಲಿ, ಅಮೀರ್ ಅವರ ಫೋಟೋವನ್ನು ಹಂಚಿಕೊಂಡಿರುವ ಮಾಂಟಿ, ಲಾಲ್ ಸಿಂಗ್ ಚಡ್ಡಾದಲ್ಲಿ ಅಮೀರ್ ಕಡಿಮೆ ಐಕ್ಯೂ ವ್ಯಕ್ತಿಯ ಪಾತ್ರವನ್ನು ನಿರ್ವಹಿಸಿ ಎಲ್ಲರನ್ನೂ ಅವಮಾನಿಸಿದ್ದಾರೆ. ಅದನ್ನು ಬಹಿಷ್ಕರಿಸಿ. ಎಂದು ಟ್ವೀಟ್ ಮಾಡಿದ್ದಾರೆ.
ಎಮರ್ಜೆನ್ಸಿ ,ಆಪರೇಷನ್ ಬ್ಲೂ ಸ್ಟಾರ್
ಲಾಲ್ ಸಿಂಗ್ ಚಡ್ಡಾದಲ್ಲಿ ದೇಶದಲ್ಲಿ ತುರ್ತು ಪರಿಸ್ಥಿತಿ, ಆಪರೇಷನ್ ಬ್ಲೂ ಸ್ಟಾರ್, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹತ್ಯೆ, 1984 ರ ಸಿಖ್ ಗಲಭೆ, 1983 ರ ವಿಶ್ವಕಪ್, ಪ್ರತಿಯೊಂದರ ಕುರಿತು ಸಣ್ಣದಾಗಿ ತೋರಿಸಲಾಗಿದೆ.
ಮಾಂಟಿ ಪನೇಸರ್ ಪಂಜಾಬ್ ಮೂಲದವರು
ಇನ್ನೂ ಮಾಜಿ ಕ್ರಿಕೆಟಿಗ ಮಾಂಟಿ ಪನೇಸರ್ ಅವರು 25 ಏಪ್ರಿಲ್ 1982 ರಂದು ಇಂಗ್ಲೆಂಡ್ನಲ್ಲಿ ಜನಿಸಿದರು. ಅವರ ಪೋಷಕರು ಪಂಜಾಬ್ ನಿವಾಸಿಗಳಾಗಿದ್ದು, 1979 ರಲ್ಲಿ ಇಂಗ್ಲೆಂಡ್ನಲ್ಲಿ ನೆಲೆಸಿದರು. ಪನೇಸರ್ ಅವರ ತಂದೆಯ ಹೆಸರು ಪರಮ್ಜಿತ್ ಸಿಂಗ್ ಮತ್ತು ತಾಯಿಯ ಹೆಸರು ಗುರುಶರಣ್ ಕೌರ್, ಅವರ ತಂದೆ ವೃತ್ತಿಯಲ್ಲಿ ರಿಯಲ್ ಎಸ್ಟೇಟ್ ಡೆವಲಪರ್.