BPL ಕಾರ್ಡ್ ದಾರರಿಗೆ ಸರ್ಕಾರ ಶಾಕ್ ಕೊಟ್ಟಿದೆ..
ಉತ್ತರ ಕರ್ನಾಟಕ ಭಾಗದ ಜನರಿಗೆ ನೀಡಲಾಗ್ತಿದ್ದ ಜೋಳವನ್ನ ಹಾಗೂ ದಕ್ಷಿಣ ಭಾರತದ ಜನರಿಗೆ ನೀಡುತ್ತಿದ್ದ ರಾಗಿಯನ್ನ ಸ್ಥಗಿತಗೊಳಿಸಲಾಗುವುದಾಗಿ ಹೇಳಲಾಗ್ತಿದೆ..
ಆಗಸ್ಟ್ ತಿಂಗಳ ಬಳಿಕ ಕೇವಲ ಮೊದಲಿನಂತೆಯೇ ಅಕ್ಕಿಯನ್ನಷ್ಟೇ ವತರಣೆ ಮಾಡಲಾಗುವುದು.. ಅದರ ಜತೆಗೆ ನೀಡಲಾಗ್ತಿದ್ದ ಜೋಳ , ರಾಗಿಯ ವಿತರಣೆಯನ್ನ ಸ್ಥಗಿತಗೊಳಿಸಲಾಗುವುದು..
ಪ್ರಸ್ತುತ ಕೇಂದ್ರದ ಬೆಂಬಲ ಯೋಜನೆಯ ಅಡಿ ರಾಜ್ಯ ಸರ್ಕಾರ 5 ಲಕ್ಷ ಮೆಟ್ರಿಕ್ ಟನ್ ಜೋಳ , 6 . 60 ಲಕ್ಷ ಟನ್ ಭತ್ತ ಖರೀದಿಸಿದ್ದು ಇದು ಶೀಘ್ರವೇ ಖಾಲಿಯಾವುದಾಗಿ ಹೇಳಲಾಗ್ತಿದೆ..
ಕೇಂದ್ರ ಸರ್ಕಾರ ಪಡಿತರ ಚೀಟಿದಾರರಿಗೆ 2022ರ ಸೆಪ್ಟೆಂಬರ್ ವರೆಗೂ 5 ಕೆಜಿ ಅಕ್ಕಿಯನ್ನ ಉಚಿತವಾಗಿ ನೀಡಲಿದೆ.. ಪಡಿತರ ಚೀಟಿ ಹೊಂದಿರುವ ಪ್ರತಿ ಸದಸ್ಯರಿಗೂ ಸಹ ತಲಾ 5 ಕೆಜಿ ಅಕ್ಕಿ ಉಚಿತವಾಗಿ ನೀಡಲಿದೆ..