Brahmastra: ಬ್ರಹ್ಮಾಸ್ತ್ರ ಚಿತ್ರ ನೋಡಿದ ಪ್ರೇಕ್ಷಕ ವಿಮರ್ಶಕರು ಏನಂದ್ರೂ…. ?
ಬಾಲಿವುಡ್ ಗೆ ಬಾಲಿವುಡ್ ಯೇ ಬಹು ನಿರೀಕ್ಷೆಯಿಂದ ಕಾಯುತ್ತಿದ್ದ ಬಹ್ಮಾಸ್ತ್ರ ಚಿತ್ರ ಇಂದು ವಿಶ್ವಾದ್ಯಂತ ಏಕಕಾಲಕ್ಕೆ ಬಿಡುಗಡೆಯಾಗಿದೆ. ರಣ್ಬೀರ್ ಕಪೂರ್ ಮತ್ತು ಆಲಿಯಾ ಭಟ್ ಅಭಿನಯದ ಅಯಾನ್ ಮುಖರ್ಜಿ ನಿರ್ದೇಶನದ ಡ್ರೀಮ್ ಪ್ರಾಜೆಕ್ಟ್ ಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಗಿದೆ.
ಚಿತ್ರ ಬಿಡುಗಡೆಯ ನಂತರ ಚಿತ್ರದ ಕುರಿತು ಹಲವಾರು ಅಭಿಪ್ರಾಯಗಳು ಟ್ವೀಟರ್ ನಲ್ಲಿ ಹರಿದಾಡುತ್ತಿವೆ. ಕೆಲವರು ಚಿತ್ರವನ್ನ ಹೊಗಳಿದ್ದರೆ ಕೆಲವರು ಚಿತ್ರದ ಕುರಿತು ಬೇಸರ ವ್ಯಕ್ತಪಡಿಸಿದ್ದಾರೆ.
ಬಿಡುಗಡೆಗೂ ಮೊದಲೇ ಬಾಯ್ ಕಟ್ ಅಭಿಯಾನಕ್ಕೆ ತುತ್ತಾಗಿದ್ದ ಬ್ರಹ್ಮಾಸ್ತ್ರ ಚಿತ್ರದ ಕುರಿತು ಇಲ್ಲಿಯ ವರೆಗೆ ಮಿಶ್ರ ಪ್ರತಿಕ್ರಿಯೆಗಳು ಕೇಳಿ ಬರುತ್ತಿವೆ.
ಚಿತ್ರದ ಟೀಸರ್ ಮತ್ತು ಟ್ರೇಲರ್ ನಿಂದ ಸಾಕಷ್ಟು ಕ್ರೇಜ್ ಹುಟ್ಟಿ ಹಾಕಿದ್ದ ಚಿತ್ರದಲ್ಲಿ ಶಾರುಖ್ ಖಾನ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ಚಿತ್ರದ ಮೈಲೇಜ್ ಹೆಚ್ಚುವಂತೆ ಮಾಡಿದೆ.
ರಣಬೀರ್ ಮತ್ತು ಆಲಿಯಾ ನಡುವಿನ ಕೆಮಿಸ್ಟ್ರಿ ಚೆನ್ನಾಗಿದೆ. ಸಿನಿಮಾಟೋಗ್ರಫಿ ಮತ್ತು ವಿಎಫ್ ಎಕ್ಸ್ ಸೂಪರ್ ಆಗಿದೆ ಎಂದು ಟ್ವೀಟರ್ ನಲ್ಲಿ ಅಭಿಮಾನಿಗಳು ಬರೆದುಕೊಂಡಿದಾರೆ. ಆದರೆ ಚಿತ್ರ ಕಥೆಗೆ ಖಾರವಾದ ಪ್ರತಿಕ್ರಿಯೆ ಕೇಳಿಬಂದಿದೆ.
ಕೆಲವು ಟ್ವೀಟರ್ ಬಳಕೆದಾರರು ಕಟುವಾದ ಟೀಕೆ ಮಾಡಿದ್ದು ಲೇಸರ್ ಶೋನಂತ ಅನುಭವ ಕೊಡುತ್ತದೆ ಎಂದು ಬರೆದುಕೊಂಡಿದ್ದಾರೆ. ಸಿನಿಮಾದ ವಿಮರ್ಶಕ ತರಣ್ ಆದರ್ಶ್ ಅವರು ಕೇವಲ ಎರಡು ಸ್ಟಾರ್ ಕೊಟ್ಟಿದ್ದು ಡಿಸಪಾಯಿಂಟಮೆಂಟ್ ಎಂದು ಬರೆದುಕೊಂಡಿದ್ದಾರೆ.