ಹನುಮಂತ ದೇವರ ಚಿತ್ರದೊಂದಿಗೆ ಭಾರತಕ್ಕೆ ಧನ್ಯವಾದ ಸಲ್ಲಿಸಿ ಭಾರತೀಯರ ಮನಗೆದ್ದ ಬ್ರೆಜಿಲ್ ಅಧ್ಯಕ್ಷ..!
ಮೇಡ್ ಇನ್ ಇಂಡಿಯಾ ಕೋವಿಡ್ ಲಸಿಕೆಯನ್ನ ಈಗಾಗಲೇ ಭಾರತ ಅನೇಕ ರಾಷ್ಟ್ರಗಳಿಗೆ ವತಿಸುವ ಪ್ರಕ್ರಿಯೆ ಆರಂಭಿಸಿದೆ. ಅದರಂತೆಯೇ ಬ್ರೆಜಿಲ್ ರಾಷ್ಟ್ರಕ್ಕೂ 20 ಲಕ್ಷ ಕೋವಿಡ್ ಲಸಿಕೆ ಡೋಸ್ಗಳನ್ನು ರವಾನಿಸಿದೆ. ಈ ಹಿನ್ನೆಲ್ಲಿ ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸೊನಾರೊ, ಹನುಮಂತ ದೇವರ ಚಿತ್ರದೊಂದಿಗೆ ಭಾರತಕ್ಕೆ ಧನ್ಯವಾದ ಅರ್ಪಿಸುವ ಮೂಲಕ ಭಾರತೀಯರ ಮನಗೆದ್ದಿದ್ದಾರೆ.
ರಾಮಾಯಣದಲ್ಲಿ ಹನುಮಂತ ದೇವರು ಸಂಜೀವಿನಿ ಪರ್ವತವನ್ನು ಹೊರುವಂತೆ ಭಾರತದಿಂದ ಬ್ರೆಜಿಲ್ಗೆ ಕೋವಿಡ್-19 ಲಸಿಕೆಗಳನ್ನು ಸಾಗಿಸುವ ಚಿತ್ರವನ್ನು ಹಂಚಿರುವ ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸೊನಾರೊ, ಭಾರತ ಹಾಗೂ ಪ್ರಧಾನಿ ನರೇಂದ್ರ ಮೋದಿಗೆ ಧನ್ಯವಾದ ಸಲ್ಲಿಸಿದ್ದಾರೆ. ಈ ಮೂಲಕ ಭಾರತೀಯರರ ಅಪಾರ ಪ್ರೀತಿಗೆ ಪಾತ್ರರಾಗಿದ್ದಾರೆ. 
ಅತ್ತೆ ಸೊಸೆ ‘ಹೈಟೆಕ್’ ವಾರ್..! ಫೇಸ್ ಬುಕ್ ನಲ್ಲಿ ಅನ್ ಫ್ರೆಂಡ್ ಮಾಡಿದ ಸೊಸೆಗೆ ಹೀಗಾ ಮಾಡೋದು..!
ಈ ಕುರಿತಾಗಿ ಟ್ವೀಟ್ ಮಾಡಿರೋ ಅವರು, ನಮಸ್ಕಾರ ಪ್ರಧಾನಿ ನರೇಂದ್ರ ಮೋದಿ. ಜಾಗತಿಕ ಬಿಕ್ಕಟ್ಟನ್ನು ಎದುರಿಸಲು ಉತ್ತಮ ಪಾಲುದಾರರನ್ನು ಹೊಂದಿರುವುದಕ್ಕೆ ಬ್ರೆಜಿಲ್ ಗೌರವಾನ್ವಿತವಾಗಿದೆ. ಭಾರತದಿಂದ ಕೋವಿಡ್-19 ಲಸಿಕೆಗಳನ್ನು ರಫ್ತು ಮಾಡಿರುವುದಕ್ಕಾಗಿ ಧನ್ಯವಾದಗಳು ಎಂದಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಭಾರತ ಪ್ರಧಾನಿ ನರೇಂದ್ರ ಮೋದಿ, ಗೌರವ ನಮ್ಮದು. ಕೋವಿಡ್-19 ವಿರುದ್ಧ ಹೋರಾಡುವಲ್ಲಿ ಭಾರತವು ಬ್ರೆಜಿಲ್ನ ವಿಶ್ವಾಸಾರ್ಹ ಪಾಲುದಾರವಾಗಿದೆ. ಉಭಯ ದೇಶಗಳು ಆರೋಗ್ಯ ಕ್ಷೇತ್ರದಲ್ಲಿ ಒಗ್ಗಟ್ಟಾಗಿ ಕೆಲಸ ಮಾಡುವುದನ್ನು ಮುಂದುವರಿಸಲಿದೆ ಎಂದು ತಿಳಿಸಿದರು.
ವಾಟ್ಸಾಪ್ ಕಲರ್ ಅಲ್ಲ.. ನಿಮ್ಮ ಕಲರ್ ಚೇಂಜ್ ಆಗ್ಬಿಡುತ್ತೆ ಹುಷಾರ್..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








