ಬ್ರೆಜಿಲ್ ನಲ್ಲಿ ಮರಣ ಮೃದಂಗ
ಬ್ರೆಜಿಲಿಯಾ : ಬ್ರೆಜಿಲ್ ನಲ್ಲಿ ಕೊರೊನಾ ವೈರಸ್ ಪ್ರಳಯ ತಾಂಡವಾಡುತ್ತಿದೆ. ದಾಖಲೆ ಮಟ್ಟದಲ್ಲಿ ಕೊರೊನಾ ಸಾವುಗಳ ಸಂಖ್ಯೆ ದಾಖಲಾಗುತ್ತಿದೆ. ದಿನಕ್ಕೆ ಸರಾಸರಿ 2000 ಮಂದಿ ಕೊರೊನಾ ವೈರಸ್ ಗೆ ಬಲಿಯಾಗುತ್ತಿದ್ದಾರೆ.
ಪ್ರಪಂಚದಾದ್ಯಂತ ಅಮೆರಿಕಾ ಬಿಟ್ಟರೇ ಬ್ರೆಜಿಲ್ ನಲ್ಲಿ ಮಾತ್ರ ಅತೀ ಹೆಚ್ಚು ಕೊರೊನಾ ಸಾವು ಪ್ರಕರಣಗಳು ದಾಖಲಾಗಿವೆ. ಬ್ರೆಜಿಲ್ ಇದುವರೆಗೆ 2,59,271 ಮಂದಿ ಹೆಮ್ಮಾರಿಗೆ ಬಲಿಯಾಗಿದ್ದಾರೆ.
ದೇಶದಲ್ಲಿ ಕೊರೊನಾ ವೈರಸ್ ಈ ಮಟ್ಟದಲ್ಲಿ ವಿಜೃಂಭಿಸುತ್ತೆ ಅಂತಾ ನಾವು ನಿರೀಕ್ಷೆ ಮಾಡಿರಲಿಲ್ಲ ಅಂತಾ ಬ್ರೆಜಿಲ್ ಸರ್ಕಾರ ಕಳವಳ ವ್ಯಕ್ತಪಡಿಸಿದೆ.
ಮೊದಲಿನಿಂದಲೂ ನಿರ್ಲಕ್ಷವೇ..!!
ಹೌದು..! ಕೊರೊನಾ ವೈರಸ್ ಗೆ ಕಡಿವಾಣ ಹಾಕುವಲ್ಲಿ ಬ್ರೆಜಿಲ್ ಅಧ್ಯಕ್ಷ ಜೈರ್ ಬೀಲ್ಸಾನಾರೋ ಮೊದಲನಿಂದಲೂ ಅಸಡ್ಡೆ ತೋರಿಸುತ್ತಿದ್ದರು. ಮಾಸ್ಕ್ ಧರಿಸುವುದು ಕಡ್ಡಾಯಗೊಳಿಸಲಿಲ್ಲ.
ಲಾಕ್ ಡೌನ್ ವಿಧಿಸಲು ಮುಂದಾಗಲಿಲ್ಲ. ಜನರು ಕರೋನದ ಬಗ್ಗೆ ಹೆಚ್ಚು ಕಾಳಜಿ ವಹಿಸಲಿಲ್ಲ. ಈ ಕಾರಣಗಳಿಂದ ಬ್ರೆಜಿಲ್ ನಲ್ಲಿ ಕೊರೊನಾ ಅಬ್ಬರಿಸುತ್ತಿದೆ. ಅನೇಕ ಮಂದಿಯನ್ನ ಬಲಿ ಪಡೆದುಕೊಳ್ಳುತ್ತಿದೆ.
ಆಸ್ಪತ್ರೆಗಳಲ್ಲಿ ಕೊರೊನಾ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡುತ್ತಿಲ್ಲ. ಇದೆಲ್ಲ ಹೊಗ್ಲಿ ಲಸಿಕೆ ಅಭಿಯಾನವಾದ್ರೂ ಉತ್ತಮವಾಗಿ ಸಾಗುತ್ತಿದ್ಯಾ..? ಅಂದ್ರೆ ಅದು ಇಲ್ಲ.
ಬ್ರೆಜಿಲ್ ನಲ್ಲಿ ವ್ಯಾಕ್ಸಿನೇಷನ್ ಕಾರ್ಯಕ್ರಮ ಕೂಡ ಆಮೆಗತಿಯಲ್ಲಿ ಸಾಗುತ್ತಿದೆ. ಈವರೆಗೆ 71 ಲಕ್ಷ ಜನರಿಗೆ ಒಂದು ಡೋಸ್ ಮತ್ತು 21 ಲಕ್ಷ ಜನರಿಗೆ ಎರಡು ಡೋಸ್ ನೀಡಲಾಗಿದೆ.
ಈ ಎಲ್ಲ ಕಾರಣಗಳಿಂದ ಬ್ರೆಜಿಲ್ ನಲ್ಲಿ ಕೊರೊನಾ ಮರಣ ಮೃದಂಗ ಬಾರಿಸುತ್ತಿದೆ.










